ಇಷ್ಟಪಟ್ಟವರು ಕನಸಿಗೆ ಬಂದು ತೊಂದರೆ ಕೊಡುವುದೇಕೆ?
ಇಷ್ಟಪಟ್ಟವರು ಕನಸಿಗೆ ಬಂದು ತೊಂದರೆ ಕೊಡುವುದೇಕೆ?
ಇಷ್ಟಪಟ್ಟವರು ಸ್ವಲ್ಪ ಕಷ್ಟಪಡಲಿ ಅಂತ!
ಹರಳಹಳ್ಳಿ ಪುಟ್ರಾಜು, ಮೇಷ್ಟ್ರು, ಪಾಂಡವಪುರ, 9632838088
ಓಂ ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9900739725
ಕೆಲವರು ತಮ್ಮ ಹೆಸರಿನ ಜತೆ ತರಕಾರಿ ಹೆಸರನ್ನು ಸೇರಿಸಿಕೊಂಡಿರುತ್ತಾರೆ ಯಾಕೆ?
ಅಯ್ಯೋ ಉತ್ತರಭಾರತದಲ್ಲೊಬ್ಬರು ಅವರ ಹೆಸರಿಗೇ ಸ್ಕ್ರ್ಯೂ ಫಿಟ್ ಮಾಡಿಸಿಕೊಂಡಿದ್ದಾರೆ!
ರವಿಕುಮಾರ ಜಿ.ಬಿ. 9449669897
ಹೆಣ್ಣು ಸೌಂದರ್ಯದ ಪ್ರತೀಕವಾದರೆ ಗಂಡು?
ಸೌಂದರ್ಯೋಪಾಸನೆಯ ಪ್ರತೀಕ!
ಫ್ಯಾಷನ್ ಡಿಸೈನರ್ ಮಧು, 9945737427
ಎಲ್ಲಾ ಅಂಗಾಂಗಗಳನ್ನು ಚುಂಬಿಸಿ ಆನಂದಿಸುವ ಸೊಳ್ಳೆ, ಕಿವಿ ಹತ್ತಿರ ಬಂದಾಗ ಮಾತ್ರ ಹಾಡು ಹೇಳುವುದೇಕೆ?
ಎಲ್ಲಾ ಅಂಗಾಗದ ಬಳಿಯೂ ಅದು ಹಾಡು ಹೇಳುತ್ತದೆ. ಆದರೆ ಕಿವಿ ಹತ್ತಿರ ಬಂದಾಗ ಮಾತ್ರ ನಮಗೆ ಕೇಳುತ್ತದೆ.
ಎಂ.ಬಿ.ಕೃಷ್ಣಮೂರ್ತಿ, ಚಾಮರಾಜನಗರ, 9449130531
ಇಲ್ಲೊಬ್ಬಳು ಅಪ್ಪ-ಅಮ್ಮ ಆಟ ಆಡೋಣ ಬಾ ಅಂತಾಳೆ. ಯಾಕಿರಬಹುದು?
ಅವಳ ದೇಹ ಬೆಳೆದಿದೆ. ಆದರೆ ಬಿಡದಿ ಸ್ವಾಮಿ ಹಾಗೆ ಪಾಪ ಮನಸ್ಸು ಮಾತ್ರ ಮಕ್ಕಳದ್ದು!
-ಬಾಣಭಟ್ಟ