ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಐವರಿಗೆ ಅಂಗದಾನ ಮಾಡಿದ ದಾದಿ

Vishwanath S
Updated On : 27 Aug 2013, 11:05 am

ಕಳೆದ ಜನವರಿ ಎರಡರಂದು ಭಾವನಗರದ ಒಂದು ವಿವಾಹಕ್ಕೆ ತೆರಳಿದ್ದ ದಂಪತಿ ತಮ್ಮ ಬಂಧುಗಳೊಡನೆ ಸಂತೋಷದಿಂದ ಸಾಮೂಹಿಕ ನೃತ್ಯ ಮಾಡುತ್ತಿರುವಾಗಲೇ, ಪತಿ ಕಿಶೋರ್ ಇದ್ದಕ್ಕಿದ್ದ ಹಾಗೇ ಕುಸಿದು ಕುಳಿತರು. ಅವರನ್ನು ತಕ್ಷಣ ಪ್ರಸಿದ್ಧ ಆಸ್ಪತ್ರೆಯೊಂದಕ್ಕೆ ಸಾಗಿಸಿ ವೈದ್ಯಕೀಯ ಚಿಕಿತ್ಸೆ ಕೊಡಿಸಿದರೂ ಉಪಯೋಗವಾಗಲಿಲ್ಲ. ಆಸ್ಪತ್ರೆ ಸೇರಿದ ಕೆಲವೇ ಗಂಟೆಗಳಲ್ಲಿ ಮೆದುಳು ನಿಷ್ಕ್ರಿಯವಾಗಿ ಮರಣಿಸಿದ್ದಾರೆಂದು ಘೋಷಿಸಲಾಯಿತು. ಆದರೆ ಸ್ವತಃ ದಾದಿಯಾಗಿ ಸೇವೆ ಸಲ್ಲಿಸುತ್ತಿರುವ ಪತ್ನಿ ರೀಟಾ ಪಾಟೀಲ್ ಎದೆಗುಂದಲಿಲ್ಲ. ಅವಳಿಗೆ ತನ್ನ ಪತಿಯ ಸಾವು ಸಹಜವಾಗಿ ದುಃಖ ತರಿಸಿದರೂ ಆತನ ಅಂಗಾಂಗಗಳನ್ನು ಇತರರಿಗೆ ದಾನಮಾಡಿ ಅವರಲ್ಲಿ ತನ್ನ ಪತಿಯ ಬಿಂಬವನ್ನು ಕಾಣುವಾಸೆಯಿಂದ ತನ್ನ ಮಗನ ಜೊತೆ ಚರ್ಚಿಸಿ ಅಂಗಾಂಗ ದಾನಕ್ಕೆ ಮುಂದಾದಳು. ಬದುಕಿರುವವರೆಗೂ ತೊಂದರೆಯಲ್ಲಿರುವವರಿಗೆ ಸದಾ ಸಹಾಯಮಾಡುತ್ತಿದ್ದ ತನ್ನ 58 ವರ್ಷದ ಪತಿ ಮರಣಿಸಿದ ಮೇಲೂ ಇತರರಿಗೆ ಸಹಾಯ ಮಾಡುವ ಉದ್ದೇಶದಿಂದ ತನ್ನ ಪತಿಯ ಎರಡು ಕಿಡ್ನಿಗಳು, ಲಿವರ್ ಮತ್ತು ಎರಡು ಕಾರ್ನಿಯಾವನ್ನು ತೆಗೆಸಿ ಅವಶ್ಯಕತೆ ಇದ್ದ ಐವರಿಗೆ ದಾನ ಮಾಡಿದಳು. ಇದರಿಂದ ಕಿಡ್ನಿ ಕಳೆದುಕೊಂಡ ಇಬ್ಬರು ರೋಗಿಗಳಿಗೆ ಮತ್ತು ಲಿವರ್ ತೊಂದರೆಯಿಂದ ಬಳಲುತ್ತಿದ್ದ ಒಬ್ಬ ವ್ಯಕ್ತಿ ಜೀವದಾನ ಪಡೆದರು. ಇನ್ನು, ಎರಡು ಕಾರ್ನಿಯಾವನ್ನು ಇಬ್ಬರಿಗೆ ಅಳವಡಿಸಿ ದೃಷ್ಟಿಭಾಗ್ಯ ನೀಡಲಾಯಿತು. ಈ ಬಗ್ಗೆ ಅವಳನ್ನು ಅಭಿನಂದಿಸಿದಾಗ ಅವಳು ಹೇಳಿದ್ದು ಹೀಗೆ- 'ನನ್ನ ಪತಿ ತನ್ನ ಜೀವನದುದ್ದಕ್ಕೂ ಇನ್ನೊಬ್ಬರಿಗೆ ಕೊಡುವುದರಲ್ಲಿ ಸಂತೋಷ ಪಡೆಯುತ್ತಿದ್ದರು. ಅದು ಹಣದ ನೆರವಿರಬಹುದು ಅಥವಾ ಸಲಹೆಗಳಿರಬಹುದು. ಇಂದು ಅವರ ಅಂಗದಾನ ಮಾಡಿರುವುದರಿಂದ ಅವರ ಆತ್ಮಕ್ಕೆ ತೃಪ್ತಿ ಮತ್ತು ಶಾಂತಿ ಲಭಿಸಿದೆ'.
ಈಕೆಯ ಈ ಕಾರ್ಯದಿಂದಾಗಿ ಭಾರತದೆಲ್ಲೆಡೆ ಅವಳನ್ನು ಸಹಸ್ರಾರು ಜನ ಅಭಿನಂದಿಸಿ ಅಂಗದಾನ ಮಾಡುವ ಬಗ್ಗೆ ವಿವರಗಳನ್ನು ತಿಳಿದುಕೊಳ್ಳುತ್ತಿದ್ದಾರೆ. ಅಲ್ಲದೆ ಹಲವಾರು ಜನ ತಮ್ಮ ಅಂಗಗಳ ದಾನಕ್ಕೆ ಮುಂದಾಗಿದ್ದಾರೆ.


 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments