ಕೋಲ್ಯನ ಮಾವ ಕೋಲ್ಯನಿಗೆ ಚೆನ್ನಾಗಿ ಹೊಡೆಯುತ್ತಿದ್ದ.
ಕೋಲ್ಯನ ಮಾವ ಕೋಲ್ಯನಿಗೆ ಚೆನ್ನಾಗಿ ಹೊಡೆಯುತ್ತಿದ್ದ. ಇದನ್ನು ಕಂಡ ಯಾರೋ ಅವನನ್ನು ಪ್ರಶ್ನಿಸಿದರು.
ವ್ಯಕ್ತಿ: ಯಾಕ್ರಿ ಕರುವಿನಂಥ ಕೋಲ್ಯನನ್ನು ಹೊಡೀತಾ ಇದೀರಾ?
ಕೋಲ್ಯನ ಮಾವ: ನಾನು ಆಸ್ಪತ್ರೆಯಿಂದ ಇವನಿಗೆ ಮೆಸೆಜ್ ಮಾಡಿದೆ- 'ನೀನು ಅಪ್ಪ ಆಗಿದೀಯಾ ಅಂತ'...ಈ ಮುಠ್ಠಾಳ ಆ ಸಂದೇಶವನ್ನು ತನ್ನ ಗೆಳೆಯರಿಗೆಲ್ಲ ಫಾವರ್ಡ್ ಮಾಡಿದಾನೆ!
***
ಕೋಲ್ಯನ ಚೆಕ್ ಬುಕ್ ಕಳೆದು ಹೋಯಿತು.
ಗೆಳೆಯ: ಹುಷಾರು ಗುರು, ಯಾರಾದ್ರೂ ನಿನ್ನ ಸಹಿ ಮಾಡಿದ್ರೆ ಏನು ಮಾಡ್ತೀಯಾ?
ಕೋಲ್ಯ: ನನ್ನೇನು ನಿನ್ನ ಥರ ದಡ್ಡ ಶಿಖಾಮಣಿ ಅನ್ಕೊಂಡ್ಯಾ? ಆಗ್ಲೇ ಎಲ್ಲಾ ಚೆಕ್ಗಳಿಗೂ ಸಹಿ ಹಾಕಿ ಇಟ್ಟಿದೀನಿ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.