ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Vishwanath S
Updated On : 29 Aug 2013, 10:09 am

ಮೈಸೂರಿನಿಂದ ಕೊ.ಸು. ನರಸಿಂಹಮೂರ್ತಿ ಅವರು ಬರೆಯುತ್ತಾರೆ-  'ಆ.14ರ ಮೈಸೂರು ಆವೃತ್ತಿಯ ಸುದ್ದಿಯಲ್ಲಿ ವೈದ್ಯರೊಬ್ಬರು ನ್ಯಾಯಾಲಯದ ಆವರಣದಲ್ಲಿ ಪರ್ಸ್ ಕಳೆದುಕೊಂಡ ಸುದ್ದಿ ಪ್ರಕಟವಾಗಿದೆ. ಆದರೆ ಅಭಾಸವಾದ ಸುದ್ದಿಯಾಗಿ ಅದು ಅವತರಿಸಿದೆ.'
"ನ್ಯಾಯಾಲಯದ ಆವರಣದಲ್ಲಿ ವೈದ್ಯರೊಬ್ಬ ಪರ್ಸ್ ಕಳು ಮಾಡಿರುವ ಘಟನೆ ಮಂಗಳವಾರ ನಡೆದಿದೆ'  ಎಂದು ಸುದ್ದಿ ಮುಂದುವರಿದಿದೆ. ಸ್ವಾಮಿ, ವೈದ್ಯರು ಪರ್ಸ್ ಕಳವು ಮಾಡಲಿಲ್ಲ. ಅದು ವೈದ್ಯರ ಪರ್ಸ್ ಕಳವು ಮಾಡಿರುವ ಎಂದಾಗಬೇಕಿತ್ತು.'
 'ವೈದ್ಯರೊಬ್ಬ- ಆದ ನಂತರ ಬಿಟ್ಟು ಹೋದ 'ರ' ಅಕ್ಷರವು ಅಭಾಸದ ಸುದ್ದಿಯಾಗಿ ಪ್ರಕಟವಾಗಿದೆ.'
 'ಹೆದ್ದಾರಿಯ ಬಗ್ಗೆ ನಾನು ಬರೆದ ಬರಹವನ್ನು 'ಪತ್ರಪ್ರಭ'ದಲ್ಲಿ ಪ್ರಕಟಿಸಿದ್ದೀರಿ. ಹತ್ತು ಸಾಲುಗಳ ಪತ್ರದಲ್ಲಿ ನಾಲ್ಕು ತಪ್ಪುಗಳು ಮುದ್ರಾರಾಕ್ಷಸನ ಕೃಪೆಯಿಂದ ನುಸುಳಿವೆ. ಧರ್ಮಪುರಿ-ದಮಿಳಪುರಿ, ದಿಂಡಿಗಲ್-ಡಂಡಿಗಲ್, ಮೊಬಲಗು-ಮೊಬಗಲು. ನನ್ನ ಗೆಳೆಯರು ಕೇಳಿದರು ಯಾವ ಸೀಮೆ ಪತ್ರ ಬರೆದಿದ್ದೀಯ ಅಂತ.'
 'ಆ.7ರ 'ಬೈಟು ಕಾಫಿ'ಯ  'ಖಾಸಿಂ ಪಂಡಿತ'  ಲೇಖನದ ಎರಡನೇ ಕಂಡಿಕೆಯತ್ತ ನಿಮ್ಮ ಗಮನ ಸೆಳೆಯಬಯಸುತ್ತೇನೆ. 'ಕುವೆಂಪುರಿಂದ ಮೊನ್ನೆ ಮೊನ್ನೆ ಪ್ರಕಟವಾದ ಪುಸ್ತಕದ ಬಗ್ಗೆಯೂ ಚೆನ್ನಾಗಿ ಗೊತ್ತು..' ಹೀಗೆ ಸಾಗುತ್ತದೆ ಬರಹ. ಇದು ಸರಿಯಲ್ಲ ಎನ್ನುವುದು ನನ್ನ ಅಭಿಪ್ರಾಯ.
 'ಕುವೆಂಪುರವರಿಂದ ಹಿಡಿದು/ಪ್ರಾರಂಭಿಸಿ ಮೊನ್ನೆ ಮೊನ್ನೆ/ಇತ್ತೀಚಿನವರೆಗೂ ಪ್ರಕಟವಾದ ಪುಸ್ತಕದ ಬಗ್ಗೆಯೂ ಚೆನ್ನಾಗಿ ಗೊತ್ತು ಎಂದಿದ್ದರೆ ಸರಿಯಿರುತ್ತಿತ್ತು. ಇಲ್ಲದಿದ್ದರೆ ಕುವೆಂಪುರವರು ಈಗ ಜೀವಂತವಿಲ್ಲವೆನ್ನುವ ವಿಷಯ ಗೊತ್ತಿರದ ಹಲವಾರು ಜನಕ್ಕೆ ಕುವೆಂಪುರವರು ಇತ್ತೀಚೆಗೆ ಪುಸ್ತಕ ಪ್ರಕಟಿಸಿದ್ದಾರೆ ಎಂದು ಭಾವಿಸುವಂತಾಗುತ್ತದೆ ' ಎಂದಿದ್ದಾರೆ.
ಕೊ.ಸು. ನರಸಿಂಹಮೂರ್ತಿ ಅವರು ಬರೆದ ಪತ್ರದಲ್ಲಿ ಅಷ್ಟೆಲ್ಲ ತಪ್ಪಾಗಿರುವುದು ಕ್ಷಮಾರ್ಹವಲ್ಲ. ಅದಕ್ಕೆ ಬಹುಶಃ ನರಸಿಂಹಮೂರ್ತಿ ಅವರ ಕೈಬರಹವೂ ಕೊಂಚ ಮಟ್ಟಿಗೆ ಕಾರಣವಾಗಿರಬಹುದು ಎಂದು ಭಾವಿಸುತ್ತೇನೆ. ಬರೆದ ಪತ್ರವನ್ನು ಕಂಪ್ಯೂಟರ್‌ಗೆ ಕೀ ಮಾಡುವಾಗ ಈ ತಪ್ಪುಗಳು ಆಗಿರಬಹುದು. ಪುಟದ ಜವಾಬ್ದಾರಿ ನಿರ್ವಹಿಸುವ ಉಪಸಂಪಾದಕರು ಇಂತಹ ತಪ್ಪುಗಳನ್ನು ಗಮನಿಸಬೇಕು.


 -ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement