ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕೆಲ ದಂಪತಿಗಳು ಉಂಡು ಮಲಗಿದ ಮೇಲೂ ಜಗಳ ನಿಲ್ಲಿಸೋದಿಲ್ಲವೇಕೆ?

Mainashree
Updated On : 1 Dec 2013, 9:52 am

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಕೆಲ ದಂಪತಿಗಳು ಉಂಡು ಮಲಗಿದ ಮೇಲೂ ಜಗಳ ನಿಲ್ಲಿಸೋದಿಲ್ಲವೇಕೆ?
ಉಂಡದ್ದು ಅರಗದೇ!

ಕಾಳೀಹುಂಡಿ ಶಿವಕುಮಾರ್, ಮೈಸೂರು
ತಮ್ಮ ಪತ್ರಿಕೆ ಓದಲು ಶುರುಮಾಡಿದಾಗಿನಿಂದ ನನ್ನವಳು ಏನೇ ತಪ್ಪು ಮಾಡಿದರು , "ತಪ್ಪಾಯ್ತು ತಿದ್ಕೋತೀನಿ" ಅಂತಾಳಲ್ಲ?
"ಕಿರುನಗೆ" ಸೂಸಿ ಕ್ಷಮಿಸಿಬಿಡು!

ವಿಷ್ಣುಶಂಕರ್, ಶಿವಮೊಗ್ಗ
4ಜಿ ಮೊಬೈಲ್ ಬಂದರೂ ನನ್ನ ಹುಡುಗಿ ನವಿಲುಗರಿ ಕಳಿಸುತ್ತಾಳಲ್ಲ ಭಟ್ರೇ?
ಪುಣ್ಯ, ಪಾರಿವಾಳಕ್ಕೆ ಪತ್ರ ಕಟ್ಟಿ ಹಾರಿಬಿಡಲಿಲ್ಲವಲ್ಲ!

ರವಿಕುಮಾರ್, ಜಿ.ಬಿ., 9449669897
ಅತ್ತೆಗೆ ಮಗಳ ಮೇಲಿನ ಪ್ರೀತಿ ಸೊಸೆ ಮೇಲೆ ಇರುವುದಿಲ್ಲವಲ್ಲ ಯಾಕೆ?
ಸೊಸೆಗೆ ತನ್ನ ತಾಯಿಯ ಮೇಲಿರುವ ಪ್ರೀತಿ ಅತ್ತೆಯ ಮೇಲಿರುವುದಿಲ್ಲವಲ್ಲ, ಅದಕ್ಕೇ!

ಜಗದೀಶ ಎಂ.ಎಸ್, ಬೆಳಗಾವಿ, 9722444410
ಅವಳ ಮನಸಿನ ಅರಮನೆಗೆ ಹೋಗಲು ಕಾಲುದಾರಿ ಇದೆಯೇ?
ಕಾಲುದಾರಿಯೇನೋ ಇದೆ, ಆದರೆ ಕಾವಲುಗಾರರು ಇದ್ದಾರಾ ಮೊದಲು ನೋಡಿಕೋ!

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement