ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಿಂದ ಸುರೇಶ್ ಎನ್ನುವವರು ಕರೆ ಮಾಡಿ ಬುಧವಾರ ಸಂಚಿಕೆಯಲ್ಲಾಗಿರುವ ತಪ್ಪನ್ನು ಗಮನಕ್ಕೆ ....

Rashmi Kasaragodu
Updated On : 5 Dec 2013, 12:12 pm

ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಿಂದ ಸುರೇಶ್ ಎನ್ನುವವರು ಕರೆ ಮಾಡಿ ಬುಧವಾರ ಸಂಚಿಕೆಯಲ್ಲಾಗಿರುವ ತಪ್ಪನ್ನು ಗಮನಕ್ಕೆ ತಂದಿದ್ದಾರೆ. 'ಪುಟ2ರಲ್ಲಿ 'ಅಥ್ಲೀಟ್ ಅಶ್ವಿನಿ ಕ್ರೆಡಿಟ್ ಕಾರ್ಡ್ ಕದ್ದು ಹಣ ಡ್ರಾ ಮಾಡಿದ ದುಷ್ಕರ್ಮಿ' ಎಂಬ ಸುದ್ದಿ ಪ್ರಕಟಿಸಿದ್ದೀರಿ. ಈ ಸುದ್ದಿಯ ಎರಡನೇ ಪ್ಯಾರಾ ಸಂಪೂರ್ಣ ಗೊಂದಲದಿಂದ ಕೂಡಿದೆ. 'ಬ್ಯಾಗ್ನ್ನು ತಡಕಾಡಿದ ದುಷ್ಕರ್ಮಿಗಳು ಒಳಗಿದ್ದ 2 ಕ್ರೆಡಿಟ್ ಕಾರ್ಡ್ಗಳಿಂದ ಸಾವಿರಾರು ರುಪಾಯಿಹಣ ಡ್ರಾ ಮಾಡಿಕೊಂಡಿರುವ ಸಂದೇಶ ಅಶ್ವಿನಿ ಅವರ ಮೊಬೈಲ್ ಫೋನ್ಗೆ ಬಂದಿದೆ' ಎಂದು ಪ್ರಕಟವಾಗಿದೆ. ಎರಡೂ ಮೂರು ವಾಕ್ಯವನ್ನು ಒಟ್ಟಿಗೆ ಸೇರಿಸಿ ಬರೆದಂತಿದೆ. ಇದರ ಹಿಂದಿನ ಸಾಲಿನಲ್ಲಿ 'ಅಷ್ಟೊತ್ತಿಗಾಗಲೇ' ಎಂಬುದರ ಬದಲು 'ಅಷ್ಟೋತ್ತಿಗಾಗಲೇ' ಎಂದು ಮುದ್ರಣವಾಗಿದೆ. ಇನ್ನು ಕೊನೆಯ ಸಾಲಿನಲ್ಲಿ 'ಸಿಸಿ ಕ್ಯಾಮರಾ ದೃಷ್ಯ' ಎಂದು ಬರೆದಿದ್ದೀರಿ. ಅದು 'ದೃಶ್ಯ' ಎಂದಾಗಬೇಕಿತ್ತು.' ಎಂದು ಹೇಳಿದ್ದಾರೆ.
'ಬ್ಯಾಗಿನಲ್ಲಿ ಕ್ರೆಡಿಟ್ ಕಾರ್ಡ್ಗೆ ತಡಕಾಡಿದಾಗ ಕಳೆದಿರುವುದು ಅಶ್ವಿನಿ ಅವರಿಗೆ ಗೊತ್ತಾಗಿದೆ. ಕೂಡಲೇ ಮೊಬೈಲ್ಗೆ ಬಂದ ಸಂದೇಶ ಗಮನಿಸಿದಾಗ ಎರಡೂ ಕ್ರೆಡಿಟ್ ಕಾರ್ಡ್ಗಳಿಂದ ಸಾವಿರಾರು ರುಪಾಯಿ ಡ್ರಾ ಮಾಡಿಕೊಂಡಿರುವುದು ಖಾತ್ರಿಯಾಗಿದೆ' ಎಂದಾಗಬೇಕಿತ್ತು.
ಹೊಳೆನರಸೀಪುರದಿಂದ ಬಿ.ಎಚ್.ಶ್ರೀನಿವಾಸ್ ಮಿಂಚಂಚೆ ಕಳುಹಿಸಿದ್ದಾರೆ. 'ಬುಧವಾರ ನೀವು ಪ್ರಕಟಿಸಿರುವ ನಿಫ್ಟಿ ಸೂಚ್ಯಂಕ ತಪ್ಪಾಗಿದೆ. ನಿಮ್ಮ ಪ್ರಕಾರ ನಿಫ್ಟಿ ಸೂಚ್ಯಂಕ 43 ಅಂಕಗಳ ಕುಸಿತ ಕಂಡು 6176ಕ್ಕೆ ನಿಂತಿದೆ. ಆದರೆ ವಾಸ್ತವದಲ್ಲಿ ಇದು 6202ಕ್ಕೆ ನಿಂತಿದ್ದು, 16 ಅಂಕ ಕುಸಿತ ಕಂಡಿದೆ. ದಯವಿಟ್ಟು ತಪ್ಪಾಗಿ ಪ್ರಕಟಿಸಬೇಡಿ' ಎಂದು ಅವರು ಮನವಿಮಾಡಿದ್ದಾರೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಬಿ.ಎ.ರಾಜಕುಮಾರ್ ಅವರು ಪತ್ರ ಬರೆದಿದ್ದಾರೆ. 'ನ.19ರ ಪತ್ರಿಕೆಯ ಪುಟ ಸಂಖ್ಯೆ 7ರಲ್ಲಿ ಪ್ರಕಟವಾಗಿರುವ 'ಏಜೆನ್ಸಿಗಳ ಅಸಡ್ಡೆಗೆ ಬಲಿಯಾಗುತ್ತಿರುವ ಪ್ರಯಾಣಿಕ' ಲೇಖನದಲ್ಲಿ ಈ ಕೆಳಗಿನ ಮುದ್ರಣ ದೋಷಗಳಾಗಿವೆ. 'ಸಿಂಥೇಟಿಕ್ (ಸಿಂಥೆಟಿಕ್), ಆಯೀಲ್(ಆಯಲ್), ಅಫಘಾತ(ಅಪಘಾತ), ಅರ್ಝ (ಅರ್ಧ ಎಂದಿರಬೇಕಿತ್ತು), ಮತ್ರ(ಮಾತ್ರ), ಅಯ(ಆಯಾ), ಬೀಡುತ್ತಾರೆ(ಬಿಡುತ್ತಾರೆ)' ಎಂದಾಗಿದೆ. ಲೇಖನವೊಂದರಲ್ಲೇ ಮುದ್ರಾರಾಕ್ಷಸನ ಹಾವಳಿ ಇಷ್ಟಿರುವಾಗ ಪತ್ರಿಕೆಯಲ್ಲಿ ಇನ್ನು ಹೇಗೋ ಏನೋ? ನೀವಂತೂ ಪ್ರಾಮಾಣಿಕವಾಗಿ 'ತಪ್ಪಾಯ್ತು ತಿದ್ಕೋತೀವಿ' ಅಂತ ಪ್ರತಿನಿತ್ಯ ಹೇಳಿದರೂ ಇಂತಹ ದೋಷಗಳು ಕಡಿಮೆಯಾಗಿಲ್ಲ ಎಂದು ಹೇಳೋಕೆ ಓದುಗನಾಗಿ ನನಗೆ ಬೇಸರವಾಗುತ್ತಿದೆ' ಎಂದಿದ್ದಾರೆ.

-ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement