ಕಣ್ಣಲ್ಲು ನೀನೇನೆ, ಮನಸಲ್ಲು ನೀನೇನೇ ಅಂತಿದಾಳಲ್ಲಾ ಗುರು?
ಕಾಳೀಹುಂಡಿ ಶಿವಕುಮಾರ್ ಮೈಸೂರು
ಕಣ್ಣಲ್ಲು ನೀನೇನೆ, ಮನಸಲ್ಲು ನೀನೇನೇ ಅಂತಿದಾಳಲ್ಲಾ ಗುರು?
ದೇಹದಲ್ಲಿ ಕಣ್ಣು ಮನಸ್ಸು ಮಾತ್ರವಿಲ್ಲವಲ್ಲ!
ಸಿ. ನಾಗರಾಜ, ಅರದೋಟ್ಲು ಭದ್ರಾವತಿ
ಬೆಂಗಳೂರಲ್ಲಿ ಬದುಕಲು ಯಾಮಾರಿಸಲು ಕಲಿತರೆ ಸಾಕಂತೆ ನಿಜವೇ?
ಯಾ'ಮಾರು'ವುದೂ ಒಂದು ಕಲೆ!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಜನರೇಕೆ ದೇವರುಗಳನ್ನು ಏಕವಚನದಲ್ಲಿ ಸಂಬೋಧಿಸುತ್ತಾರೆ?
ಪದೇಪದೆ ದೇವರು ವಚನಭಂಗ ಮಾಡಿದ್ರೆ ಇನ್ನೇನು ಮಾಡ್ತಾರೆ?!
ತಲವಾಟ ಮಂಜುನಾಥ, ಸಾಗರ, 9480931611
ಬ್ರಹ್ಮನಿಗೆ ಇದ್ದ ಹಾಗೆ ಹೆಣ್ಣಿಗೂ ನಾಲ್ಕು ತಲೆ ಇದ್ದಿದ್ದರೆ ಏನಾಗುತ್ತಿತ್ತು ಭಟ್ರೆ?
ಬ್ಯೂಟಿ ಪಾರ್ಲರ್ಗಳಿಗೆ ಭರ್ಜರಿ ವ್ಯಾಪಾರ!
ಮೊಬೈಲ್ ಪ್ರೀತಿಗೂ, ಶುದ್ಧ ಪ್ರೀತಿಗೂ ಇರುವ ವ್ಯತ್ಯಾಸ ಏನು ಭಟ್ರೆ?
ಆದು ಜಂಗಮ, ಇದು ಸ್ಥಾವರ!
ಬಾಣಭಟ್ಟ