ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ದೈಹಿಕ ಶಿಕ್ಷಕರ ನೇಮಕ ಏಕಿಲ್ಲ?

Mainashree
Updated On : 8 Dec 2013, 9:33 am

ದೈಹಿಕ ಶಿಕ್ಷಣವು 2007ರಿಂದ ಕಡ್ಡಾಯವಾಗಿ ಬೋಧನಾ ಹಾಗೂ ಪರೀಕ್ಷೆ ವಿಷಯವಾಗಿದ್ದರಿಂದ ಪ್ರತಿ ವರ್ಷ ಪ್ರತಿಯೊಂದು ತರಗತಿಗೆ ಕಡ್ಡಾಯವಾಗಿ ತೆಗೆದುಕೊಂಡು ದಾಖಲಿಸಿಡಬೇಕಾದ ರೂಪಣಾತ್ಮಕ (ಪ್ರಾಯೋಗಿಕ) ಪರೀಕ್ಷೆಗಳು-4, ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯ ಪರೀಕ್ಷೆಗಳು-2 ಮತ್ತು ಸಂಕಲನಾತ್ಮಕ (ಲಿಖಿತ) ಪರೀಕ್ಷೆಗಳು-2 ಇವುಗಳಿಂದ 43 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ದೈಹಿಕ ಶಿಕ್ಷಕರಿಲ್ಲದೇ ಅವಕಾಶ ವಂಚಿತರಾಗಿದ್ದಾರೆ. ಶಿಕ್ಷಣ ಇಲಾಖೆಯ ನಿಷ್ಕ್ರಿಯತೆಯಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗದೇ ಸರ್ವಾಂಗೀಣ ಅಭಿವೃದ್ಧಿ ಮತ್ತು ಬೆಳವಣಿಗೆ ಕುಂಠಿತವಾಗಿದೆ.
ಹಲವು ವರ್ಷಗಳಿಂದ ದೈಹಿಕ ಶಿಕ್ಷಕರ ನೇಮಕಾತಿ ಇಲ್ಲದೇ 80 ಸಾವಿರ ಸಿ.ಪಿ.ಇಡಿ ನಿರುದ್ಯೋಗಿಗಳ ವಯೋವುತಿ ಕೆಲವೇ ದಿನಗಳಲ್ಲಿ ಕೊನೆಗೊಳ್ಳುತ್ತದೆ. ಈಗ ಚಾಲ್ತಿಯಲ್ಲಿರುವ ದೈಹಿಕ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ಪ್ರಕಾರವೇ 2500 ದೈಹಿಕ ಶಿಕ್ಷಕರ ಖಾಲಿ ಹುದ್ದೆಗಳು ಹಲವು ವರ್ಷಗಳಿಂದ ಖಾಲಿ ಇವೆ. ಆದರೂ ಶಿಕ್ಷಣ ಇಲಾಖೆಯು ಸರ್ಕಾರದ ಸಚಿವ ಸಂಪುಟ ಸಭೆ 15.06.2007ರಂದು ಅನುಮೋದಿಸಿರುವ 952 ವಯೋವುತಿ ಮೀರುತ್ತಿರುವ ಸಿ.ಪಿ.ಇಡಿ ಹುದ್ದೆಗಳ ನೇಮಕಾತಿ ತಟಸ್ಥವಾಗಿಟ್ಟಿದ್ದು ಮಲತಾಯಿ ಧೋರಣೆಯಾಗಿದೆ. ಈ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ 03 ಜನ ನಿರುದ್ಯೋಗಿಗಳು ವಿಷ ಸೇವಿಸಿ ಸತ್ತು-ಬದುಕಿದ್ದು ಇತಿಹಾಸವಾಗಿದೆ. ಹಾಲಿ ಸರ್ಕಾರದ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರಿಗೆ ತಲಾ 62 ಮನವಿಗಳನ್ನು ಅರ್ಪಿಸಿದರೂ ನೇಮಕಾತಿ ಪ್ರಕ್ರಿಯೆ ಆರಂಭಿಸಿಲ್ಲ.
ನಮ್ಮ ಬೆಳಗಾವಿ ಅಧಿವೇಶನದಲ್ಲಿ ಪ್ರತಿಯೊಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೊಬ್ಬ ದೈಹಿಕ ಶಿಕ್ಷಕರನ್ನು ಕಡ್ಡಾಯವಾಗಿ ನಿಯೋಜಿಸುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಒತ್ತಾಯಿಸಲು ವಿಧಾನಸಭೆ ಮತ್ತು ವಿಧಾನಪರಿಷತ್ತಿನ 80 ಶಾಸಕರಿಗೆ ಮನವಿಗಳನ್ನು ಸಲ್ಲಿಸಿದ್ದೇವೆ. ಮನವಿಗೆ ಸ್ಪಂದಿಸಿರುವ ಬಸವರಾಜ ಹೊರಟ್ಟಿಯವರು ಈ ಸಂಗತಿಯನ್ನು ಬೆಳಗಾವಿ ಅಧಿವೇಶನದಲ್ಲಿ ಕೇಳಲು ಪ್ರಶ್ನೆ ದಾಖಲಿಸಿದ್ದಾರೆ. ಸಮಸ್ತ ಶಾಸಕರು ನಿರುದ್ಯೋಗಿಗಳಿಗೆ ಸಾಮಾಜಿಕ ನ್ಯಾಯ ಮತ್ತು ಉದ್ಯೋಗದ ಹಕ್ಕು ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸಿ ಕೂಡಲೇ 952 ವಯೋವುತಿ ಮೀರುತ್ತಿರುವ ದೈಹಿಕ ಶಿಕ್ಷಕರ ನೇಮಕಾತಿಗೆ ವಿಶೇಷ ಆದೇಶ ಹೊರಡಿಸಲಿ.
-ಎಂ.ಡಿ. ಹೊಟೆಗಾಳಿ, ಹುಬ್ಬಳ್ಳಿ
ಬಿಪಿಎಲ್ ಚೀಟಿ ಅರ್ಹರಿಗಷ್ಟೇ ದೊರೆಯುವಂತಾಗಲಿ
ಕಡು ಬಡವರಿಗೆ ತುಸು ಹೆಚ್ಚಿನ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಬಿ.ಪಿ.ಎಲ್. ಪಡಿತರ ಚೀಟಿ ಪದ್ಧತಿ ಜಾರಿಗೆ ತಂದಿರುವ ಸರ್ಕಾರದ ಉದ್ದೇಶ ಸ್ತುತ್ಯಾರ್ಹ. ಆದರೆ ಕಾರ್ಡುಗಳ ವಿತರಣೆಯಲ್ಲಿ ಆಗಿರುವ ಲೋಪದೋಷಗಳು ಅನೇಕ ಮಂದಿ ಕಡು ಬಡವರನ್ನು ಇಂದಿಗೂ ಯೋಜನೆಯಿಂದ ದೂರವಿರುತ್ತಿರುವುದನ್ನು ಸರ್ಕಾರವೂ ಮನಗಂಡಿದೆ. ಉಳ್ಳವರೇ ಬಿಪಿಎಲ್ ಸೌಲಭ್ಯ ಅನುಭವಿಸುತ್ತಿರುವುದನ್ನು ಗುರುತಿಸಿರುವ ಸರ್ಕಾರ, ಯೋಜನೆಯ ಕಾಯಕಲ್ಪಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಅನೇಕ ನಕಲಿ ಪಡಿತರ ಚೀಟಿಗಳನ್ನು ಗುರುತಿಸಿ ಅವುಗಳ ರದ್ಧತಿಗೆ ಮುಂದಾಗಿರುವುದು ಸಮಾಜದ ಸಮತೋಲನದ ದೃಷ್ಟಿಯಿಂದ ಉತ್ತಮ ಬೆಳವಣಿಗೆ. ಈ ಕಾರ್ಯದಲ್ಲಿ ಯಾವ ರಾಜಕೀಯ ಆಕ್ಷೇಪಗಳಿಗೂ ಮಣಿಯದೆ ಸರ್ಕಾರವು ಕಠಿಣ ತೀರ್ಮಾನ ಕೈಗೊಳ್ಳಲಿ. ಅಸಲಿ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ತಲುಪುವಂತಾಗಲಿ.
-ಟಿ. ಯಶವಂತ ಪೈ, ಕೆ.ಜಿ.ಎಫ್.


ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement