ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಬಹುತೇಕ ನಾಯಕರಿಗೆ ಮೀಸೆಯೇ ಇಲ್ಲದಿರುವ ಗುಟ್ಟೇನು?

Mainashree
Updated On : 9 Dec 2013, 11:59 am

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಕನ್ನಡಪ್ರಭದಲ್ಲಿ 'ನಾನು ಪ್ರಣತಿ' ಅಂಕಣ ಬರೆಯುವ ಪ್ರಣತಿ ಕುಮಾರೀನಾ, ಶ್ರೀಮತೀನಾ?
ಕುಮಾರಿ ಜಯಲಲಿತಾ, ಕುಮಾರಿ ಮಾಯಾವತಿ ಇವರೆಲ್ಲರ ಸಾಲಿಗೆ ಸೇರುವವಳಲ್ಲ ಅಂತ ಖಾತ್ರಿಯಾಗಿ ಹೇಳಬಹುದು.

ಕೆ. ಎಂ. ಲಿಂಗರಾಜು, ನಂಜನಗೂಡು 9916021365
ಪಂಜರದ ಗಿಳಿ ಪಂಜರದಿಂದ ಹೊರಬಂದರೆ ಏನಾಗಬಹುದು?
ಮಹಾಮಹಿಮರು ಎನ್ನಿಸಿಕೊಂಡವರಿಗೆಲ್ಲ ಪಂಜರ ಸೇರುವ ಗತಿ ಬರಬಹುದು!

ವಿ. ಹೇಮಂತಕುಮಾರ್, 9035992900
ಸ್ಲಿಮ್ ಆಗಿರುವ ಮೊಬೈಲ್‌ಗೂ ಸ್ಲಿಮ್ ಆಗಿರುವ ಗರ್ಲ್‌ಗೂ ವ್ಯತ್ಯಾಸವೇನು?
ಎರಡರ ವಿಷಯದಲ್ಲೂ ಇದೇ ಭೇಷು ಅಂದುಕೊಳ್ಳುತ್ತಿರುವಾಗಲೇ ಅಪ್‌ಡೇಟೆಡ್ ವರ್ಷನ್ ಪ್ರತ್ಯಕ್ಷವಾಗಿರುತ್ತದೆ!

ಫ್ಯಾಷನ್ ಡಿಸೈನರ್ ಮಧು, 9945737427
ಎರಡನೇ ಮದುವೆ ಮಾಡಿಕೊಂಡವರೂ 'ಹನಿಮೂನ್‌'ಗೆ ಹೋಗ್ತಾರಾ?
ಯಾವ ಕಾಲದಲ್ಲಿದ್ದೀ ಗುರೂ. ಮದುವೇನೆ ಆಗದವರೂ ಹನಿಮೂನ್‌ಗೆ ಹೋಗೋ ಕಾಲ ಇದು!

ಹರಳಹಳ್ಳಿ ಪುಟ್ಟರಾಜು, 9632838088
ಬಹುತೇಕ ನಾಯಕರಿಗೆ ಮೀಸೆಯೇ ಇಲ್ಲದಿರುವ ಗುಟ್ಟೇನು?
ನಾಯಕಿಗೆ ಆಕೆಯ ಕಾರ್ಯವನ್ನು ಸುಲಲಿತವಾಗಿಸುವ ಕಾರ್ಯತಂತ್ರ!

- ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement