ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ವಿಶ್ವ ವಾಣಿಜ್ಯ ಸಂಘದ ಅಸ್ತಿತ್ವ

Vishwanath S
Updated On : 9 Dec 2013, 11:04 am

ವಿಶ್ವ ವಾಣಿಜ್ಯ ಸಂಘದ ಅಸ್ತಿತ್ವವೇ ಅಪಾಯದಲ್ಲಿದೆ ಎನ್ನುವ ಪರಿಸ್ಥಿತಿಯಿಂದ ಆ ಸಂಸ್ಥೆ ಪಾರಾಗಿದೆ. ಕಳೆದ ವಾರಾಂತ್ಯದಲ್ಲಿ ಬಾಲಿಯಲ್ಲಿ ನಡೆದ ಸಂಸ್ಥೆಯ ಸಚಿವರ ಮಟ್ಟದ ಸಭೆಯಲ್ಲಿ ಭಾರತ ಹಾಗೂ ಇತರ ಅಭಿವೃದ್ಧಿಶೀಲ ರಾಷ್ಟ್ರಗಳು ಬಡವರ ಹಸಿವೆಯನ್ನು ನೀಗಲು ಕೊಡಬಹುದಾದ ಸಬ್ಸಿಡಿಯ ಪ್ರಮಾಣದ ಮಿತಿಯನ್ನು ದಾಟುವುದಕ್ಕೆ ಅವಕಾಶವನ್ನು ನಿರಾಕರಿಸಿದ್ದರೆ, ಆ ಸಂಘಟನೆಯ ಅಸ್ತಿತ್ವವೇ ಇರುತ್ತಿರಲಿಲ್ಲ.
ಆ ಪರಿಸ್ಥಿತಿಯನ್ನು ತಪ್ಪಿಸಲು ಅಭಿವೃದ್ಧಿಶೀಲ ರಾಷ್ಟ್ರಗಳ ಕೂಟದ ನಾಯಕ ರಾಷ್ಟ್ರದಂತೆ ಕೆಲಸ ಮಾಡಿದ ಭಾರತ  ಕೊನೆಗೂ ಮುಂದುವರಿದ ರಾಷ್ಟ್ರಗಳ ಮನ ಒಲಿಸುವುದರಲ್ಲಿ ಕೊನೆಯ ನಿಮಿಷದಲ್ಲಿ ಯಶಸ್ವಿಯಾಯಿತು. ಇನ್ನು ನಾಲ್ಕು ವರ್ಷಗಳ ಕಾಲ ಈ ಸಮಸ್ಯೆಗೆ ವಿರಾಮ ದೊರೆತಂತೆಯೇ ಆಗಿದೆ. ಆದರೆ ಭಾರತ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳು ಬಡವರ ಆಹಾರಕ್ಕೆಂದೇ ದಾಸ್ತಾನು ಮಾಡಿದ ಧಾನ್ಯಗಳನ್ನು ರಫ್ತು ಮಾಡುವಂತಿಲ್ಲ ಎನ್ನುವ ಷರತ್ತನ್ನು ಪಾಲಿಸಬೇಕಾಗಿದೆ.
ಬಾಲಿ ಸಮ್ಮೇಳನದ ಇನ್ನೊಂದು ನಿರ್ಣಯದಂತೆ ಅಂತಾರಾಷ್ಟ್ರೀಯ ವ್ಯವಹಾರದ ನೆರವಿನ ಯೋಜನೆಯಿಂದ ಭಾರತಕ್ಕೆ ಹೆಚ್ಚು ಅನುಕೂಲವಾಗಲಿದೆ. ಇದರ ಪರಿಣಾಮವಾಗಿ, ಜಾಗತಿಕ ಆರ್ಥಿಕ ವ್ಯವಸ್ಥೆಗೆ ನಾಲ್ಕು ವರ್ಷಗಳಲ್ಲಿ ಲಕ್ಷ ಕೋಟಿ ಡಾಲರ್‌ಗಳಷ್ಟು ಸೌಲಭ್ಯ ಒದಗಲಿದ್ದು, ಅದರಲ್ಲಿ ಬಹುಪಾಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೇ ಸಿಗುವುದು ಸ್ವಾಗತಾರ್ಹವೇ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement