ಮನೇಲಿ ಹೆಂಡತಿ ಭೀತಿ. ಕಚೇರಿಯಲ್ಲಿ ಹೆಂಗಸರ ಫಜೀತಿ...
ರಮೇಶ ಭಟ್, ಆವರ್ಸೆ, ಮೈಸೂರು, 9164276058
ಮನೇಲಿ ಹೆಂಡತಿ ಭೀತಿ. ಕಚೇರಿಯಲ್ಲಿ ಹೆಂಗಸರ ಫಜೀತಿ. ಇದಕ್ಕೆಲ್ಲಾ ಏನು ಮಾಡೋದು ಭಟ್ರೇ?
377ಕ್ಕೂ ಬಿದ್ದಿದೆ ಸಂಚಕಾರ!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ನಿಂಬೆಗೂ, ಗಜನಿಂಬೆಗೂ ವ್ಯತ್ಯಾಸ?
ಗಾತ್ರ ಮಾತ್ರ!
ಮಂಜುನಾಥ ಚಿನಕುರಳಿ, 9164883467
ಮಾಜಿ ಪ್ರೇಯಸಿ ಸಿಕ್ಕಾಗ ಏನು ಮಾತನಾಡಬೇಕು?
ಏನೂ ಮಾತನಾಡದಿರುವುದೇ ಹೆಚ್ಚು ಕ್ಷೇಮ. ಇಲ್ಲವಾದಲ್ಲಿ ಅವಳ ಗಂಡನ ಮೇಲಿನ ಅಸಹನೆಗೆ ನೀನು ಬಲಿಯಾಗಬೇಕಾಗುತ್ತದೆ!
ಬಿ.ಎಸ್. ನಾರಾಯಣಸ್ವಾಮಿ, ಬೋಧನಹೊಸಹಳ್ಳಿ
ಸಕ್ಕರೆಗಿಂತ ಸಿಹಿಯಾದ ಮುತ್ತು ಸಿಗುವುದೆಲ್ಲಿ?
ಸಕ್ಕರೆ ಕಾಯಿಲೆ ಇರುವವರಲ್ಲಿ!
ಸಿ. ನಾಗರಾಜ, ಅರದೋಟ್ಲು, ಭದ್ರಾವತಿ
ಜೀವನವೇ ಬೆಂಗಾಡಾದವನಿಗೆ ಪ್ರೀತಿಸುವವಳು ದೊರೆತರೆ?
ಬಾಳು ಬಂಗಾರ!
-ಬಾಣಭಟ್ಟ