ರಾಜಕಾರಣಿಗಳು ಸಮಾರಂಭಕ್ಕೆ ತಡವಾಗಿ ಬಂದು...
ಚಿಕ್ಕಣ್ಣ ಕೊರಟಗೆರೆ, 9880692850
ರಾಜಕಾರಣಿಗಳು ಸಮಾರಂಭಕ್ಕೆ ತಡವಾಗಿ ಬಂದು, ಬೇಗನೆ ಹೋಗುವುದೇಕೆ?
ಇನ್ನೊಂದು ಕಾರ್ಯಕ್ರಮ ಮುಗಿಯುವುದರೊಳಗೆ ಅಲ್ಲಿಗೆ ಹೋಗಬೇಕಲ್ಲ ಅದಕ್ಕೆ.
ಫ್ಯಾಷನ್ ಡಿಸೈನರ್ ಮಧು, 9945737427
ಕಬ್ಬಿನ ಗದ್ದೆಯೊಳಗೂ ಪ್ರೇಮ ಸಲ್ಲಾಪಗಳನ್ನು ಸುಲಲಿತವಾಗಿ ಸವಿಯುವ ತುಂಟ ಪ್ರೇಮಿಗಳೂ ಇದ್ದಾರಂತೆ?
ಅದಕ್ಕೇ ಇರಬೇಕು ಮುತ್ತು ಸಕ್ಕರೆಯಷ್ಟು ಸಿಹಿ ಎಂದು ಹೇಳಿದ್ದು!
ವಿ. ಹೇಮಂತಕುಮಾರ, ಬೆಂಗಳೂರು
ರಾತ್ರಿ ನಿದ್ದೆಯಲ್ಲಿ ನಡೆಯುವ ಕಾಯಿಲೆ ಇದೆ ಎಂದು ಹೇಳಿ ಬೆಡ್ರೂಂ ಒಳಗೆ ಬರ್ತಾಳಲ್ಲ?
ಯಾವ್ದಕ್ಕೂ ಸೇಫ್ಟೀಗೆ, ನಿದ್ದೇಲಿ ಹೊಡೆಯೋ ಕಾಯಿಲೆ ಇದ್ಯಾ ಅಂತ ವಿಚಾರಿಸ್ಕೊ!
ಲಕ್ಷ್ಮೀಬರ್ಕಲಿರಮೇಶ, ಕಿರಗಂದೂರು, ಮಂಡ್ಯ, 9538786547
ಹೆಚ್ಚಾಗಿ ದೇವರುಗಳು ಬೆಟ್ಟಗುಡ್ಡದಲ್ಲೇ ವಾಸ ಮಾಡುವುದೇಕೆ?
ಸುಲಭವಾಗಿ ಜನರ ಕೈಗೆ ಸಿಗಬಾರದು ಅಂತ!
ರವಿಕುಮಾರ ಜಿ.ಬಿ. 9449669897
ಕರ್ನಾಟಕವನ್ನು ಎರಡು ಹೋಳು ಮಾಡುವ ಹಗಲುಗನಸು ಕಾಣುವ 'ಕತ್ತಿ'ಯ ಬಗ್ಗೆ ಏನು ಹೇಳುತ್ತೀರಾ?
ಕರ್ನಾಟಕವನ್ನು ಹೋಳುಮಾಡುವಷ್ಟು ಕತ್ತಿ ಹರಿತವಾಗಿಲ್ಲ!
- ಬಾಣಭಟ್ಟ