ನನ್ನ ಜತೆ ಸಪ್ತಪದಿ ತುಳಿದವಳು ಟ್ರಾಫಿಕ್...
ಓಂಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9900738725
ನನ್ನ ಜತೆ ಸಪ್ತಪದಿ ತುಳಿದವಳು ಟ್ರಾಫಿಕ್ ಇರುವಲ್ಲಿ ನನ್ನ ಜತೆ ರಸ್ತೆ ದಾಟಲೂ ಹೆದರುತ್ತಾಳಲ್ಲ?
ಮಧ್ಯದಾರಿಯಲ್ಲಿ ಕೈಬಿಟ್ಟರೆ ಎಂಬ ಭಯ!
ಕಾಳೀಹುಂಡಿ ಶಿವಕುಮಾರ್, ಮೈಸೂರು, 9844883581
ಹಣದಿಂದ ರಾಜಕೀಯ, ರಾಜಕೀಯದಿಂದ ಹಣ. ಇವೆರಡನ್ನೂ ಮೀರಿದ್ದು ಯಾವುದು?
ಅಧಿಕಾರ!
ವಿ. ಹೇಮಂತಕುಮಾರ, ಬೆಂಗಳೂರು, 9035992900
ಕಾಸಿದ್ರೆ ಕೈಲಾಸ, ಸೊಂಟದಲ್ಲಿ ಕೂಸಿದ್ರೆ?
ಕೈ ಲಾಸು!
ವಿ. ಹೇಮಂತಕುಮಾರ, ಬೆಂಗಳೂರು
ಇಪ್ಪತ್ತೊಂದು ಇಂಚು ಸ್ಕ್ರೀನ್ ಟಿವಿಗೂ ನಲವತ್ತೊಂದು ಇಂಚು ಸ್ಕ್ರೀನ್ ಟಿವಿಗೂ ರಿಮೋಟ್ ಆರೇ ಇಂಚು ಇರುತ್ತೆ ಯಾಕೆ?
ಲೈಟು ಎಷ್ಟೇ ದೊಡ್ಡದಾಗಿದ್ರೂ ಸ್ವಿಚ್ಚು ಚಿಕ್ಕದಾಗೇ ಇರುತ್ತೆ!
ಆರೀಫ್ (ಅರಿ), ದಾವಣಗೆರೆ, 9964280609
ಈ ಹುಡುಗಿಯರು ತಮ್ಮ ಪ್ರೀತಿಯನ್ನು ಕರೆಂಟ್ ತರಹ ಎಲ್ಲಾ ಹುಡುಗರಿಗೂ ಸರಬರಾಜು ಮಾಡುವುದೇಕೆ?
ಪ್ರೀತಿ ಹಂಚಿದಷ್ಟೂ ಹೆಚ್ಚಾಗುತ್ತದೆ ಎಂಬ ನಂಬಿಕೆಯಿಂದ!
- ಬಾಣಭಟ್ಟ