ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಮದುವೆಯಾದರೂ ಅಡುಗೆ ಬಾರದ ಗೃಹಿಣಿಯರಿಗೆ ನಿಮ್ಮ ಕಿವಿಮಾತು?

Vishwanath S
Updated On : 18 Dec 2013, 12:24 pm

ಜಗದೀಶ ಎಂ.ಎಸ್. ಬೆಳಗಾವಿ, 8722444410
ಮದುವೆಯಾದರೂ ಅಡುಗೆ ಬಾರದ ಗೃಹಿಣಿಯರಿಗೆ ನಿಮ್ಮ ಕಿವಿಮಾತು?
ಪ್ರಯೋಗಪಶು ಗಂಡನ ಬಗ್ಗೆ ಕೊಂಚ ಕರುಣೆಯಿರಲಿ.

ಮಂಜುನಾಥ ಚಿನಕುರಳಿ, 9164883467
ಕೆಲ ಹುಡುಗರು ಹುಡುಗಿಯರ ಎದೆ ನೋಡುವುದಕ್ಕೆ ಎಡತಾಕುತ್ತಾರೆ. ಹುಡುಗಿಯರು ಏನು ಮಾಡುತ್ತಾರೆ?
ಹುಡುಗರಿಂದ ಅದನ್ನು ಅಡಗಿಸಲು ಹೆಣಗುತ್ತಾರೆ!

ಸಿ.ನಾಗರಾಜ, ಅರದೋಟ್ಲು, ಭದ್ರಾವತಿ
ಪ್ರತಿಯೊಬ್ಬ ಗಂಡಸಿಗೂ ಒಂದು ಹೆಣ್ಣಿನೊಂದಿಗೆ ಬದುಕಬೇಕೆಂಬ ಆಸೆಯಾಗುತ್ತೆ ಯಾಕೆ?
ಅದು ನೈಸರ್ಗಿಕ.

ರಮೇಶ ಭಟ್ ಆವರ್ಸೆ, ಮೈಸೂರು, 9164276058
ನೀರಿನ ಸಾಗರ ದಾಟಲು ತೆಪ್ಪ ಇರಬೇಕು. ಅದೇ ಸಂಸಾರದ ಸಾಗರ ದಾಟಲು?
'ತೆಪ್ಪ'ಗಿರಬೇಕು!

ಅನಿಲ್‌ಕುಮಾರ್, ವಿಜಯನಗರ, ಬೆಂಗಳೂರು
ಪ್ರೀತಿಯ ವಿಷಯದಲ್ಲಿ ಪಿಎಚ್‌ಡಿ ಮಾಡಬೇಕು ಎಂದುಕೊಂಡಿದ್ದೇನೆ. ಒಳ್ಳೆಯ ಗೈಡ್ ಹೆಸರು ಸೂಚಿಸಿ.
ರವಿಚಂದ್ರನ್ ಮತ್ತು ಕಾಶೀನಾಥ್!



 -ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement