ಕೋಲ್ಯ: ಸರ್ ನನ್ನ ಹೆಂಡತಿ ಕಾಶ್ಮೀರಕ್ಕೆ ಹೋಗೋಣ ಅಂತಿದಾಳೆ...
ಕೋಲ್ಯ: ಸರ್ ನನ್ನ ಹೆಂಡತಿ ಕಾಶ್ಮೀರಕ್ಕೆ ಹೋಗೋಣ ಅಂತಿದಾಳೆ. ಒಂದು ವಾರ ರಜೆ ಬೇಕಾಗಿತ್ತು.
ಬಾಸ್: ಸಾಧ್ಯವಿಲ್ಲ. ಒಂದು ದಿನಾನೂ ರಜೆ ಕೊಡೋಲ್ಲ ನಿನಗೆ!
ಕೋಲ್ಯ(ಬಾಸ್ನ ಕಾಲಿಗೆ ಬಿದ್ದು): ಸರ್, ಥ್ಯಾಂಕ್ಯೂ ವೆರಿಮಚ್ ಸರ್. ಕಷ್ಟ ಕಾಲದಲ್ಲಿ ನೀವು ನನ್ನ ಸಹಾಯಕ್ಕೆ ಬಂದೇ ಬರ್ತೀರ ಅಂತ ನನಗೆ ಗೊತ್ತಿತ್ತು!
***
ಬಾಯ್ಫ್ರೆಂಡ್: ಇವತ್ತು ಬೆಳಗ್ಗೆ ಏನು ತಿಂಡಿ ತಿಂದೆ?
ಗರ್ಲ್ಫ್ರೆಂಡ್: ನಿನಗೆ ಬರೀ ಇದೇ ವಿಷಯ ಮಾತಾಡೋದಕ್ಕೆ ಬರುತ್ತಾ? ಏನು ಮಾಡಿದೆ, ಯಾವ ಸೀರಿಯಲ್ ನೋಡಿದೆ, ಯಾವ ಹಾಡು ಕೇಳಿದೆ...ಬರೀ ಇದೇ ಕೇಳ್ತಿ!ಬೇರೇ ವಿಷಯಾನೇ ಇಲ್ವೇನೋ!?
ಬಾಯ್ಫ್ರೆಂಡ್: ಓಹ್!! ಅಂದಹಾಗೆ, ಇತ್ತೀಚೆಗೆ ಹೊರಬಿದ್ದ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶದ ಬಗ್ಗೆ ನಿನಗೆ ಏನನ್ನಿಸುತ್ತೆ?
ಗರ್ಲ್ಫ್ರೆಂಡ್: hmmmm ದೋಸೆ ತಿಂದೆ, ಜೊತೆಗೆ ಆಲೂಗಡ್ಡೆ ಪಲ್ಯ ಮಾಡಿದ್ದೆ!!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.