ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಪ್ರಖ್ಯಾತ ನಟಿಯೊಬ್ಬಳು ಎಲ್ಲಾ ಹೆಂಗಸರಂತೆ ಬಸಿರಾದರೆ ಯಾಕೆ ದೊಡ್ಡ ಸುದ್ದಿಯಾಗುತ್ತೆ?

Vishwanath S
Updated On : 19 Dec 2013, 11:32 am

ಸಿ.ನಾಗರಾಜ, ಅರದೋಟ್ಲು, ಭದ್ರಾವತಿ
ಪ್ರಖ್ಯಾತ ನಟಿಯೊಬ್ಬಳು ಎಲ್ಲಾ ಹೆಂಗಸರಂತೆ ಬಸಿರಾದರೆ ಯಾಕೆ ದೊಡ್ಡ ಸುದ್ದಿಯಾಗುತ್ತೆ?
ಒಮ್ಮೆ ಖ್ಯಾತಿ ಗಳಿಸಿದ ಮೇಲೆ ಯಾವತ್ತೂ ಎಲ್ಲಾ ಹೆಂಗಸರಂತೆ ಆಗುವುದು ಸಾಧ್ಯವಿಲ್ಲ.

ಓಂಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 990739725
ಪ್ರೇಯಸಿಗಾಗಿ ಕಾಯೋದ್ರಲ್ಲಿ ಸಿಗುವ ಸುಖ, ತಾಳ್ಮೆ, ಮಜ ಬಸ್ಸಿಗಾಗಿ ಕಾಯೋದ್ರಲ್ಲಿ ಸಿಗೋದಿಲ್ವಲ್ಲ?
ಬಸ್ಸಿಗೆ ಕಾದರೆ ಹೆಚ್ಚೆಂದರೆ ಸಿಗೋದು ಬರೀ ಸೀಟು. ಪ್ರೇಯಸಿಗಾಗಿ ಕಾದರೆ ಸಿಗೋದು ತುಟಿಯ ಸ್ವೀಟು!

ಓಂಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ
ಐಟಂ ಸಾಂಗ್‌ಗೂ ಆಟಂಬಾಂಬಿಗೂ ಏನು ವ್ಯತ್ಯಾಸ?
ಒಂದು ಜನರನ್ನು ಆಕರ್ಷಿಸುತ್ತೆ. ಇನ್ನೊಂದು ಓಡಿಸುತ್ತೆ.

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಹೆಂಗಸರೇಕೆ ಸದಾ ಅವರಿವರ ವಿಷಯ ಮಾತನಾಡುತ್ತಾರೆ?
ನಿಮಗೇಕೆ ಅವರ ವಿಷಯ?!

ಲೈಬ್ರರಿಯಲ್ಲೂ, ಪ್ರಸ್ತದ ಕೋಣೆಯಲ್ಲೂಮಾತನಾಡಬಾರದಂತೆ ಏಕೆ?
ಮಾತಲ್ಲ, ಅಲ್ಲಿ 'ಕೃತಿ' ಮುಖ್ಯ!


 -ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement