ಧೂಮ್3 ಚಿತ್ರದಲ್ಲಿ, ಆಮೀರ್ ಖಾನ್ನನ್ನು ಹಿಡಿಯೋಕೆ...
ಧೂಮ್3 ಚಿತ್ರದಲ್ಲಿ, ಆಮೀರ್ ಖಾನ್ನನ್ನು ಹಿಡಿಯೋಕೆ ಅಮೆರಿಕವು ಉದಯ್ ಛೋಪ್ರಾ ಥರದ ಪೊಲೀಸರ ಸಹಾಯ ಪಡೆಯುವುದು ಅನಿವಾರ್ಯ ಎಂದು ಚಿತ್ರಿಸಲಾಗಿದೆ. ಇದು ದೇವಯಾನಿಗೆ ಅಮೆರಿಕ ಮಾಡಿದ ಅವಮಾನಕ್ಕಿಂತ ದೊಡ್ಡದು ಬಿಡಿ.
-ಪ್ರಶಾಂತ್
ನಿಮಗೆ ನಿಮ್ಮ ದೇಶವನ್ನು ಶ್ರೀಮಂತವನ್ನಾಗಿ ಮಾಡಲಾಗದಿದ್ದರೆ, ಶ್ರೀಮಂತ ರಾಷ್ಟ್ರದೊಂದಿಗೆ ಜಗಳಕ್ಕೆ ನಿಂತು ತುಸು ಸಮಯ ನಿಮ್ಮ ಪ್ರಜೆಗಳಿಗೆ ಖುಷಿ ಕೊಡಿ!
-ಚೇತನ್ ಭಗತ್
ಅರವಿಂದ ಕೇಜ್ರಿವಾಲ್ ಡಿಸೆಂಬರ್ 25ಕ್ಕೆ ಬರ್ತ್ಡೆ ಆಚರಿಸಿಕೊಳ್ಳಬಹುದೇನೋ? ಏಕೆಂದರೆ ತಮ್ಮ ಮಾತುಗಳಲ್ಲಿ ಅವರು ಯಾವತ್ತೂ ತಾವು ಕ್ರಿಸ್ತನಿಗಿಂತ ಪವಿತ್ರ ಎಂಬಂತೆ ಬಿಂಬಿಸಿಕೊಳ್ಳುತ್ತಾರೆ.
-ಸುಹೇಲ್ ಸೇಠ್