ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ನವೀನ ಪ್ರಯೋಗ 'ನ್ಯೂಸ್‌ವಾಚ್‌'

Vishwanath S
Updated On : 22 Dec 2013, 2:35 am

ಅರ್ಥಹೀನ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಜನರು ಮಣ್ಣು ಮುಕ್ಕಿಸುವುದರಲ್ಲಿ ಯಾವ ಸಂದೇಹವೂ ಇಲ್ಲ. ಅದಕ್ಕೆ ಪೂರಕವಾಗಿ ಕನ್ನಡಪ್ರಭ ಪತ್ರಿಕೆಯು ಪ್ರತಿ ಶನಿವಾರ ಪ್ರತಾಪ್‌ಸಿಂಹ ಅವರ ಸಮಯೋಚಿತ ಲೇಖನಗಳನ್ನು ಪ್ರಕಟಿಸುತ್ತಾ ಜನರನ್ನು ಎಚ್ಚರಿಸುತ್ತಿದೆ. ಪ್ರತಿಯೊಬ್ಬ ಭಾರತೀಯನಿಗೂ ತನ್ನ ದೇಶ ಆರ್ಥಿಕವಾಗಿ ಮುಂದುವರೆಯಬೇಕೆಂದೂ, ಸಾಮಾಜಿಕವಾಗಿ ಸದೃಢವಾಗಬೇಕೆಂಬ ಆಶಯವಿದ್ದರೆ ಖಂಡಿತ ಒಳ್ಳೆಯ ಜನಪ್ರತಿನಿಧಿಗಳನ್ನು ಆರಿಸಬೇಕಾದುದು ಪ್ರಜೆಗಳ ಕರ್ತವ್ಯ. ಅಂಥ ಜನಪ್ರತಿನಿಧಿಗಳು ಬಿಜೆಪಿ ಪಕ್ಷದಲ್ಲಿ ಹಾಗೂ ಅಮ್ ಆದ್ಮಿ ಪಕ್ಷದಲ್ಲೂ ಇದ್ದಾರೆಂದು ಉತ್ತರಭಾರತದ ರಾಜ್ಯಗಳು ತೋರಿಸಿಕೊಟ್ಟಿವೆ. ಅಂಥ ಅಭ್ಯರ್ಥಿಗಳನ್ನು ಆರಿಸಿದ್ದಾದರೆ ವಾಜಪೇಯಿ ನೇತೃತ್ವದಲ್ಲಿದ್ದ ಸುಭಿಕ್ಷ ಆಡಳಿತವನ್ನು ಮುಂದಿನ ಚುನಾವಣೆಯಿಂದ ಜನರು ನೋಡಲಿದ್ದಾರೆ. ಬಹುಶಃ ಭಾರತದಲ್ಲಿ ಸುವರ್ಣಕಾಲ ಇದ್ದುದು ಮೊರಾರ್ಜಿದೇಸಾಯಿ ಮತ್ತು ವಾಜಪೇಯಿ ಅವರ ಆಡಳಿತ ಅವಧಿಯಲ್ಲಿ ಮಾತ್ರ. ಅಂಥಾ ಸುವರ್ಣಕಾಲ ಮತ್ತೊಮ್ಮೆ ನಮ್ಮ ದೇಶದ ಜನರಿಗೆ ಲಭಿಸಲಿ. ಒಟ್ಟಿನಲ್ಲಿ ಕನ್ನಡಪ್ರಭ ಪತ್ರಿಕೆಯು ಒಳ್ಳೆಯ ಲೇಖನಗಳನ್ನು ಓದುಗರಿಗೆ ಉಣಬಡಿಸುತ್ತಾ ಭ್ರಷ್ಟಾಚಾರ ವಿಷಯಗಳನ್ನು ಬಯಲಿಗೆಳೆಯುತ್ತಾ, ಅನ್ಯಾಯ ವಿರುದ್ಧ ಖಂಡಿಸುತ್ತಾ ದೇಶಸೇವೆ ಮಾಡುತ್ತಿದೆ. ಹೀಗೆ ನಿರ್ಭಯದಿಂದ ಇಂಥ ಲೇಖನಗಳನ್ನು ಪ್ರಕಟಿಸುವ ವಿಶ್ವೇಶ್ವರ ಭಟ್ಟರಿಗೆ ನನ್ನ ಅನಂತ ವಂದನೆಗಳು.
-ಎನ್. ಆರ್. ತಮ್ಮಯ್ಯ ಶೆಟ್ಟಿ, ಅರಸೀಕೆರೆ

ಕನ್ನಡಪ್ರಭದ ಬೈಟುಕಾಫಿ ಪುರವಣಿ ಓದಲು ತುಂಬಾ ಖುಷಿ ಅನಿಸುತ್ತದೆ. ಇದರಲ್ಲಿ ಬರುವ ವಿವಿಧ ಲೇಖನಗಳು ಮನಸ್ಸಿಗೆ ಸಂತೋಷ ನೀಡುತ್ತವೆ. ಮುಖಪುಟದ ಬಲಗಡೆ ಮೂಲೆಯಲ್ಲಿ ಪ್ರಕಟಗೊಳ್ಳುವ 'ಸನ್ನುಡಿ' ಚಿಕ್ಕದಾದರೂ ಚೊಕ್ಕಟವಾಗಿದೆ. ದಯವಿಟ್ಟು ಇದನ್ನು ನಿಲ್ಲಿಸಬೇಡಿ. ಹಾಗೆ 'ಬೆಳ್ಳಿತಟ್ಟೆ' ಆರೋಗ್ಯದ ಬಗ್ಗೆ ತಿಳಿವಳಿಕೆ ನೀಡುತ್ತದೆ. ಏನೇ ಆಗಲಿ ಬೈಟು ಕಾಫಿ ಸೂಪರ್.
-ಜಗದೀಶ ಎಂ. ಸಂಗಣ್ಣವರ,ಬೆಳಗಾವಿ, ಮೊ. 8722 444410

ಮುಖಪುಟದಲ್ಲೇ 'ನ್ಯೂಸ್‌ವಾಚ್‌' ಎಂಬ ಅಂಕಣ ರಚಿಸಿ ಪೊಲೀಸ್ ಇಲಾಖೆಯ ದಪ್ಪ ಕಿವಿಗೆ "ಆರೋಪಿ ಎಲ್ಲಿ?" ಎಂದು ಕೂಗಿ ಕೇಳುತ್ತಿರುವಿರಿ. ಅಭಿನಂದನೆಗಳು. ನೀವು ಈ ಅಂಕಣಕ್ಕೆ 8 ಪುಟಗಳ ಪುರವಣಿಯನ್ನು ಮೀಸಲಿಡುವಿರಾದರೆ ಅಷ್ಟು ಪುಟಗಳು ತುಂಬುವಷ್ಟು ಇಂತಹ ಪ್ರಕರಣಗಳ  (ಅಂದರೆ ಪೊಲೀಸರು ಪತ್ತೆ ಹಚ್ಚಲು ಸಾಧ್ಯವಾಗದೇ ದಿನಗಳನ್ನು ದೂಡುತ್ತಿರುವ) ದಾಖಲೆ ಒದಗಿಸಬಲ್ಲೆ. ನೀವು ರೆಡಿನಾ?
-ಎಲ್.ಎಂ. ಮಾಧವಶಾಸ್ತ್ರಿ,ಶಿವಮೊಗ್ಗ,ಮೊ. 94804 72835

ಸಾರಿಗೆ ಸಂಸ್ಥೆಯಲ್ಲಿನ ಸರ್ದಾರ್‌ಗಿರಿಗೆ ಕನ್ನಡಿ ಹಿಡಿದ ಕನ್ನಡಪ್ರಭಕ್ಕೆ ವಂದನೆಗಳು. ವಿವಿಧ ಕಿರುಕುಳಗಳ ಮಧ್ಯೆ ಕರ್ತವ್ಯ ನಿರ್ವಹಿಸುತ್ತಿರುವ ನನ್ನ ಸೋದರ ಸೋದರಿ ಸಿಬ್ಬಂದಿಗೆ ನನ್ನ ಸಹಾನುಭೂತಿ ಇದೆ.  ಮೇಲಧಿಕಾರಿಗಳ ಕಿರುಕುಳಗಳ ನಡುವೆಯೂ ತಮ್ಮ ಮಾನಸಿಕ ಸ್ಥೈರ್ಯ ಕಳೆದುಕೊಳ್ಳದೆ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕರನ್ನು ಮೆಚ್ಚಲೇಬೇಕು. ಸಾರಿಗೆ ವಾಹನಗಳ ಅಚಾತುರ್ಯಕ್ಕೆ ಹಿರಿಯ ಅಧಿಕಾರಿಗಳೇ ಕಾರಣರಾಗಿದ್ದಾರೆ. ಚಾಲಕ/ನಿರ್ವಾಹಕರ ಮಾನಸಿಕ ಸಮತೋಲನವನ್ನು ತಪ್ಪಿಸುತ್ತಿರುವ ಇವರನ್ನು ದುರಾಧಿಕಾರಿಗಳೆಂದು ಪರಿಗಣಿಸಬೇಕು.
-ಶಿವನಾಪುರ ನರಸಿಂಹಮೂರ್ತಿ,ಕೆಂಗೇರಿ. ಬೆಂಗಳೂರು

ಡಿಸೆಂಬರ್-6ರ ಕನ್ನಡಪ್ರಭದಲ್ಲಿ ರಾಧಾಕೃಷ್ಣಭಡ್ತಿಯವರ ಅಂಕಣದಲ್ಲಿ ಡಾ. ಅಶೋಕ್ ಕುಮಾರ್‌ರವರ ಕನ್ನಡ ಅನುವಾದಿತ "ಆಡುಜೀವನ" ಪುಸ್ತಕ ಹಾಗೂ ಡಿಸೆಂಬರ್ -7ರ ಪ್ರತಾಪ್ ಸಿಂಹರವರ ಅಂಕಣದಲ್ಲಿ, ಮಂಜುನಾಥ ಅಜ್ಜಂಪುರವರ ಕನ್ನಡ ಅನುವಾದಿತ "ಮಹಾನ್ ನಾಯಕರು" ಪುಸ್ತಕ ಎರಡು ಪುಸ್ತಕಗಳ ಪರಿಚಯ ಮಾಡಿಕೊಟ್ಟ ಭಡ್ತಿ ಹಾಗೂ ಪ್ರತಾಪರವರಿಗೂ ತುಂಬಾ ಧನ್ಯವಾದಗಳು. ಮುಂದೆಯೂ ನಿಮ್ಮ ಅಂಕಣದ ಕೊನೆಯಲ್ಲಿ ಹೊಸ ಪುಸ್ತಕಗಳು ಬಿಡುಗಡೆ ಆದಾಗ ಪುಸ್ತಕದ ಬಗ್ಗೆ ಮತ್ತು ಲೇಖಕರ ಬಗ್ಗೆ ಹೀಗೆಯೇ ಮಾಹಿತಿ ನೀಡಿದರೆ ಅಕ್ಷರ ಪ್ರೇಮಿಗಳಾದ ನಮಗೆ ಹೊಸ-ಹೊಸ ಪುಸ್ತಕಗಳನ್ನು ಓದಲು ಪ್ರೋತ್ಸಾಹಿಸಿದಂತಾಗುತ್ತದೆ.
-ಶ್ರೀಮತಿ ಗೌರಿ ಅಶೋಕ, ಬಾಗಲಕೋಟ,ದೂ. 994520 9605

'ಖುಷಿ'ಯ ಗಮ್ಮತ್ತು
ಕನ್ನಡದ ಮೊದಲ 'ಖುಷಿ'ಗೆ ಫಿದಾ ಆಗಿಬಿಟ್ಟಿವಿ.
ಅದರ 'ಖುಷಿ'ಯ ಗಮ್ಮತ್ತೇ ಬೇರೆ.
ಕನ್ನಡದ ಮೊದಲ 'ಖುಷಿ'ಯ ಮಾಲೆ
ಅದ್ಭುತ ಕ'ಹನಿ'ಗಳ ಲೀಲೆ
ಅಮೂಲ್ಯ ಅಕ್ಷರಗಳ ಸಾಲೇ.
ಕನ್ನಡಪ್ರಭದ ಹೊಸ ಪ್ರಯೋಗ 'ಖುಷಿ'ಯ ಕುಸುಮ
ಹೀಗೆ ಅರಳುತಿರಲಿ ನೂರುಕಾಲ.
-ಸಿ.ವಿ. ಮಾಲವಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement