ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಗುಲಾಬಿ ಗಿಡದಲ್ಲಿ ಮುಳ್ಳು ಇದ್ದರೂ ಹೆಚ್ಚುಮಂದಿ ಇಷ್ಟಪಡುತ್ತಾರಲ್ಲ?

Vishwanath S
Updated On : 22 Dec 2013, 11:31 am

ಕಾಳೀಹುಂಡಿ ಶಿವಕುಮಾರ್, ಮೈಸೂರು 9844883581
ಗುಲಾಬಿ ಗಿಡದಲ್ಲಿ ಮುಳ್ಳು ಇದ್ದರೂ ಹೆಚ್ಚುಮಂದಿ ಇಷ್ಟಪಡುತ್ತಾರಲ್ಲ?
ಹೂವನ್ನಷ್ಟೇ ಎತ್ತಿಕೊಳ್ಳುವ ಕೌಶಲದ ಬಗ್ಗೆ ಅವರಿಗಿರುವ ನಂಬಿಕೆ.

ಜಗದೀಶ ಎಸ್. ಬೆಳಗಾವಿ 8722444410
ನೌಕರರ ಚಳವಳಿಯಾದರೆ ವೇತನ ಹೆಚ್ಚಳ. ರೈತರ ಚಳವಳಿ ಆದರೆ?
ಹೇಳಿಕೆಗಳ ಹೆಚ್ಚಳ!

ಆರೀಫ್ ದಾವಣಗೆರೆ 9964280609
ಕುಳ್ಳಗಿರುವ ಹುಡುಗಿಯರು ಸೀರೆ ತೊಡಲು ನಾಚಿಕೊಳ್ಳುವುದೇಕೆ?
ನಮ್ಮ ಕಡೆ ಹಂಗೇನಿಲ್ಲಪ್ಪಾ. ಹುಡುಗಿ ಕುಳ್ಳಗಿರಲಿ, ದಪ್ಪಗಿರಲಿ ಸೀರೆ ಬಿಚ್ಚುವ ಸಂದರ್ಭದಲ್ಲಷ್ಟೇ ನಾಚಿಕೊಳ್ಳೋದು!

ಎಂ. ಬಿ. ಕೃಷ್ಣಮೂರ್ತಿ, ಚಾಮರಾಜನಗರ 9449130531
ರೇಗಿಸುವುದಕ್ಕೂ ಚುಡಾಯಿಸುವುದಕ್ಕೂ ಏನು ವ್ಯತ್ಯಾಸ?
ಪ್ರಶ್ನೆ ಕೇಳುವುದಕ್ಕೂ, ಸುಮ್ಮನೇ ಗೀಚುವುದಕ್ಕೂ ಇರುವಷ್ಟೇ ವ್ಯತ್ಯಾಸ

ಪ್ರಶಾಂತ ಮೇಲಾಡಿ, 9844444120
ಹೆಂಗಸರು ಗಂಡಸರಿಗೆ ತಾಳಿ ಕಟ್ಟುವ ದಿನ ಬರಬಹುದೇ?
ಹಾಗೇನಿಲ್ಲ, ತಾವು ತಾಳಿ ಕಟ್ಟಿಸಿಕೊಂಡ ನಂತರ ಜೀವನದುದ್ದಕ್ಕೂ ಗಂಡನನ್ನು ಕಟ್ಟಿ ಇಡುವ ಈಗಿನ ಪರಿಸ್ಥಿತಿಯನ್ನೇ ಅವರು ಮುಂದುವರಿಸಲಿದ್ದಾರೆ!


- ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement