ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕಾಳಿದಾಸನ ಕೈಯಲ್ಲಿ ಮೊಬೈಲ್ ಇದ್ದಿದ್ರೆ ಮೇಘಸಂದೇಶ ರಚನೆಯಾಗ್ತಿತ್ತಾ?

Vishwanath S
Updated On : 23 Dec 2013, 11:28 am

ವಿ. ಹೇಮಂತಕುಮಾರ್, 9035992900
ಕಾಳಿದಾಸನ ಕೈಯಲ್ಲಿ ಮೊಬೈಲ್ ಇದ್ದಿದ್ರೆ ಮೇಘಸಂದೇಶ ರಚನೆಯಾಗ್ತಿತ್ತಾ?
ಮೊಬೈಲ್ ಫೋನ್ ಇದ್ದಿದ್ರೆ ಮೇಘದೂತ ಗೇಮ್ ರಚನೆಯಾಗುವ ಸಂಭವವಿತ್ತು!

ಪನವಕುಮಾರ ಕೆ. ವಿ. ಬಳ್ಳಾರಿ, 9900515957
ಮೋದಿ ಅಲೆ ಯಾರನ್ನು ಬಡಿದೆಬ್ಬಿಸುತ್ತೆ?
ಬಡಿದೇಳಿಸಿಕೊಳ್ಳುವವರ ಮಾತು ಹಾಗಿರಲಿ. ಮುಳುಗುವ ಸಂಭವ ಇರುವವರೆಲ್ಲ ಚಿಂತೆಗೀಡಾಗಿದ್ದಾರೆ.

ಬಸವನಗೌಡ ಹೆಬ್ಬಳಗೆರೆ
ಉಪಗ್ರಹ ಉಡಾವಣೆಯಲ್ಲಿ ಯಶಸ್ವಿಯಾದ ಇಸ್ರೋ ವಿಜ್ಞಾನಿಗಳಿಗೇಕೆ ಕ್ರಿಕೆಟಿಗರಿಗೆ ಕೊಟ್ಟಂತೆ ಹಣಘೋಷಣೆ ಮಾಡುವುದಿಲ್ಲ?
ನಿಜ ಹೇಳು. ನಿಮ್ಮ ಮನೆಯಲ್ಲಿ ತೂಗುಹಾಕಿರೋ ಕ್ಯಾಲೆಂಡರ್ ಮೇಲಿರೋದು ಸಚಿನ್- ಶಾರುಖ್ ಚಿತ್ರವೋ, ಹೋಮಿ ಭಾಭಾರದ್ದೋ?

ಸಿ. ನಾಗರಾಜ ಅರದೋಟ್ಲು, ಭದ್ರಾವತಿ
ಹಣ ಸಂಪಾದಿಸಿದರೂ ಬದುಕಿನಲ್ಲಿ ತೃಪ್ತಿ ಇಲ್ಲವೆಂದು ದುಃಖ ಪಡುವವರಿಗೆ ನಿಮ್ಮ ಸಲಹೆ?
ಆ ಹಣವನ್ನು ನನಗೆ ತಲುಪಿಸಬಹುದು!

ಹರಳಹಳ್ಳಿ ಪುಟ್ಟರಾಜು, 9632838088
ದೇವರು ರಾಜಕೀಯ ನಾಯಕರ ಹಣೆಬರಹವನ್ನು ಎಲ್ಲಿ ಬರೆದಿದ್ದಾನೆ?
ಮತ ಒತ್ತುವವರ ಬೆರಳಲ್ಲಿ!



 -ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement