ಸಮಾಜದ ಸ್ವಾಸ್ಥ್ಯಕ್ಕೆ ಸವಾಲು
ಸಲಿಂಗರತಿ ಅಥವಾ ಕಾಮ ಕಾನೂನಿನ ಚೌಕಟ್ಟಿನಲ್ಲಿ ತರುವುದಕ್ಕಿಂತ ಹೆಚ್ಚಾಗಿ ಸ್ವಾಭಾವಿಕತೆಯ ಅಥವಾ ನೈಜತೆಯ ಚೌಕಟ್ಟಿನಲ್ಲಿ ನೋಡುವುದೇ ಹೆಚ್ಚು ಹಿತಕರ ಅಂತ ಅನಿಸುವುದಿಲ್ಲವೇ? 'ಕಾಮ' ಅನ್ನುವುದೇ ಭಾರತೀಯ ಸಂಸ್ಕೃತಿಯಲ್ಲಿ ಒಂದು ರೀತಿಯ ಸೋಶಿಯಲ್ ಟಾಬೂ (Social taboo)ಅಂತ ಪರಿಗಣಿಸಲ್ಪಡುತ್ತದೆ. ಎಲ್ಲಿ ಬೇಕಾದಲ್ಲಿ, ಯಾರಲ್ಲಿ ಬೇಕಾದರೂ, ಯಾವ ಸಮಯದಲ್ಲೂ ಮಾತಾಡಲು ಹಿಂಜರಿಯುವಂತಹ ವಿಷಯ. ಒಂದು ವೇಳೆ ಯಾರಾದರೂ ಆ ರೀತಿ ವ್ಯವಹರಿಸಿದ್ದಲ್ಲಿ ಅಂತಹವರಿಗೆ ತಗಲುವ ಹಣೆಪಟ್ಟಿಯೇ ಬೇರೆ.
ಇನ್ನೊಂದು ವಿಷಯ. ಸೆಕ್ಸ್ ಅಥವಾ ಕಾಮ ಅನ್ನುವುದು ಹುಟ್ಟಿನಿಂದಲೇ ಬರುವಂತಹದು. ಮನುಷ್ಯ, ಪ್ರಾಣಿ, ಪಕ್ಷಿಗಳಾದಿಯಾಗಿ ಎಲ್ಲರಲ್ಲೂ ತನ್ನಿಂದ ತಾನೆ ಹುಟ್ಟಿಕೊಳ್ಳುವ ಈ ಕ್ರಿಯೆ ಅತಿ ಪ್ರಾಮುಖ್ಯ ಮತ್ತು ಪ್ರಬಲವಾದದ್ದು ಅಂತ ಮನೋವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. Sex instinct is innate, inborn and is the strongest of all instincts ಅಂತ ಸಾರಿ ಸಾರಿ ಹೇಳುತ್ತಾರೆ. ಅದೂ ವಿರುದ್ಧ ಲಿಂಗಗಳಲ್ಲಿ ನಡೆಯಬೇಕಾದ ಕ್ರಿಯೆ. (opposite sex)ಹೀಗಾಗಿ, ಚಿಕ್ಕ ಮಕ್ಕಳಲ್ಲೂ ಈ ರೀತಿಯ ಸ್ವಭಾವ ಕಂಡು ಬರುತ್ತದೆ. ಚಿಕ್ಕ ಹುಡುಗ, ಹುಡುಗಿಯ ಅಥವಾ ಹುಡುಗಿ, ಹುಡುಗನ ಸಾನಿಧ್ಯದಲ್ಲಿ ಹೆಚ್ಚು ಆಸಕ್ತಿ ವಹಿಸುವುದನ್ನು ನಾವೆಲ್ಲ ನೋಡಿರುತ್ತೇ ವಲ್ಲವೇ? ಇದು ನೈಸರ್ಗಿಕ ಕೊಡುಗೆ ಹೀಗಾಗಿ ಅತಿ ಸಾಮಾನ್ಯ. ಲೈಂಗಿಕತೆ, ಹಕ್ಕು ಪ್ರತಿಪಾದಿಸುವ ವಿಷಯವಾಗಿರದೆ ಸಹಜವಾಗಿ ಹುಟ್ಟಿಕೊಳ್ಳುವ ಬಯಕೆ. ಹೀಗಿರುವಾಗ ಕಾನೂನು ಅಳವಡಿಸುವ ಅವಶ್ಯಕತೆ ಇದೆಯೇ? ಅಷ್ಟಕ್ಕೂ ಸೆಕ್ಸ್ ಎಂಬುದು ಹೆಣ್ಣು-ಗಂಡುಗಳ ನಡುವಿನ ಸುಮಧುರ ಬಾಂಧವ್ಯದ ಒಂದು ಹಂತ ಅಂತ ತಿಳಿದೂ, ಹೆಣ್ಣು, ಹೆಣ್ಣಿನ ಜತೆ, ಗಂಡು ಗಂಡಿನ ಜತೆ ಕಾಮಕ್ಕಿಳಿಯುವುದು ಭ್ರಮೆಯೋ, ಜಿಗುಪ್ಸೆಯೋ, ಅನಾರೋಗ್ಯಕರ ಲಕ್ಷಣವೋ, ಮಾನಸಿಕ ಅಸ್ವಸ್ಥತೆಯೋ ಅಥವಾ ಸಮಾಜದ ಸಮತೋಲನವನ್ನು ಕದಡುವ ಪರಿಯೋ ತಿಳಿಯದಾಗಿದೆ. ಸಲಿಂಗರತಿಯ ವಿಚಾರದಲ್ಲಿ ಕೀಳು ಭಾವನೆ ಇಂದಿಗೂ ಸಮಾಜದಲ್ಲಿ ಸಾಕಷ್ಟಿದೆ. ಪಾಶ್ಚಿಮಾತ್ಯ ಸಂಸ್ಕೃತಿಯೇ ಪ್ರಗತಿಯ ಅಥವಾ ಆಧುನೀಕತೆಯ ಲಕ್ಷಣ ಅಂತ ತಿಳಿದ ಜನಾಂಗದವರು, ಸುಪ್ರೀಂಕೋರ್ಟಿನ ಈಗಿನ ತೀರ್ಪನ್ನು ವಿರೋಧಿಸುವುದು ಬಿಟ್ಟರೆ, ಸಾಮಾನ್ಯ ಭಾರತೀಯ ಇದನ್ನು ಸ್ವಾಗತಿಸುವುದರಲ್ಲಿ ಸಂಶಯವೇ ಇರದು. ಸಲಿಂಗರತಿ ಎಂದೆಂದೂ ಒಂದು ಜೀವನದ ಶೈಲಿಯಾಗಲಾರದು. ಇದೊಂದು ಅಸಹಜ, ಅನೈಸರ್ಗಿಕ, ಅನೈತಿಕ ಚಟುವಟಿಕೆಯಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುದರಲ್ಲಿ ಸಂಶಯವೇ ಇಲ್ಲ. ಲೈಂಗಿಕ ಸ್ವಾತಂತ್ರ್ಯವಿದೆಯೆಂದಾಕ್ಷಣ, ಅಸಹ್ಯ ಚಟುವಟಿಕೆಗಳಿಗೆ ಆಸ್ಪದ ಕೊಡಬೇಕೆಂದೇನಿಲ್ಲ. ಸಂಸತ್ತು ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ನ ತೀರ್ಮಾನವನ್ನು ಪ್ರಶ್ನಿಸಿ, ಹೊಸ ಕಾಯಿದೆಯನ್ನು ಮಂಡಿಸಲು ಹೊರಟಿರುವುದೂ ಹಾಸ್ಯಾಸ್ಪದ ಅನಿಸುತ್ತಿಲ್ಲವೇ? ಇಲ್ಲಿ ಪ್ರಭಾವಿ ಸಚಿವರ ಪಾತ್ರಕ್ಕೂ ಅವಕಾಶವಿರಕೂಡದು. ಇಂತಹ ಸಂಹನಶೀಲ (Sensitive issue) ವಿಷಯಗಳ ಗಂಭೀರ ಚರ್ಚೆ ನಡೆದು, ಸಮಾಜಹಿತ, ಜನಹಿತ, ಆರೋಗ್ಯಹಿತ ನಿರ್ಣಯ ಹೊರಬರಲಿ.
-ಶಂಕರನಾರಾಯಣ ಭಟ್, ಹೊನ್ನಾವರ
-ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com