ಹುಡುಗಿಯರೇಕೆ ವಿನಾಕಾರಣ ಕೋಪಿಸಿಕೊಳ್ಳುತ್ತಾರೆ?
ರಂಜಿತ ಮೈಸೂರು
ಪ್ರಶ್ನೆಗಳಲ್ಲೇ ಅಷ್ಟೊಂದು ರೊಮಾನ್ಸ್ ಮಾಡುವ ಫ್ಯಾಷನ್ ಡಿಸೈನರ್ ಮಧು ಅವರಿಗೆ ಚೆಂದದ ಯುವತಿ ಸಿಕ್ಕರೆ ಕತೆ?
ಕತೆಯೇನಿಲ್ಲ, ಶಿಶುಕಾವ್ಯದ ಸಾಧ್ಯತೆ ಇದೆ.
ಆರ್. ಬಿ. ಚಂದ್ರಶೇಖರ, 8123024184
ಬುದ್ಧಿಜೀವಿ ಅನ್ನಿಸಿಕೊಳ್ಳೋಕೆ ಏನು ಮಾಡಬೇಕು?
ಬೆಳಗಾಗೆದ್ದು ಹೆಂಡದಲ್ಲೇ ಮುಖ ತೊಳೆದು, ಸಂಡಾಸಲ್ಲಿ ಕುಳಿತೇ ಊಟ ಮಾಡಬೇಕು ಹಾಗೂ ಅದನ್ನೇ ವಿಚಾರವಾದ ಎಂದು ಸಮರ್ಥಿಸಿಕೊಳ್ಳಬೇಕು.
ಆರೀಫ್, ದಾವಣಗೆರೆ 9964280609
ಹುಡುಗಿಯರೇಕೆ ವಿನಾಕಾರಣ ಕೋಪಿಸಿಕೊಳ್ಳುತ್ತಾರೆ?
ನಿಮ್ಮ ಈ ಬಗೆಯ ವಿನಾಕಾರಣ ಆರೋಪಗಳಿಂದ!
ಓಂ ಚೆನ್ನೇಶ್ ಅರಬಿಳಚಿಕ್ಯಾಂಪ್, 9901257131
ಜೀನ್ಸ್ ಪ್ಯಾಂಟ್, ಮಿಡಿ ಬಂದಾಗಿನಿಂದ ಹುಡುಗಿಯರ ಸುಂದರವಾದ ಲಂಗ-ದಾವಣಿ ಎಲ್ಲಿ ಹೋದವು?
ಲಂಗ- ದಾವಣಿ ಹೋಗಿದ್ದೆಲ್ಲಿಗೆ ಅಂತ ನೋಡಿ ಏನು ಪ್ರಯೋಜನ? ಹುಡುಗಿಯರು ಹೋಗುತ್ತಿರುವುದನ್ನು ಮಾತ್ರ ಹಿಂಬಾಲಿಸಿದರೆ ಸಾಕು.
ಎಂ. ಬಿ. ಕೃಷ್ಣಮೂರ್ತಿ, 9449130351
ಈ ಅಂಕಣದ ಉತ್ತರಗಳನ್ನು ಓದುತ್ತಿದ್ದರೆ ಬಾಣಭಟ್ಟರು ಭಾರಿ ರಸಿಕರು ಎನ್ನಿಸುತ್ತಿದೆಯಲ್ಲ?
ಈ ಅಂಕಣ ಓದದೇ ಬರಿದೇ ಭೇಟಿಯಾದವರೂ ಇದೇ ಅಭಿಪ್ರಾಯ ಹೊಂದಿದ್ದಾರೆ!
ಬಾಣಭಟ್ಟ