ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕೈ ಕೆಸರಾಗದೆ ಬಾಯಿ ಮೊಸರಾಗೋ ಐಡಿಯಾ ಇದ್ರೆ ಕೊಡಿ!

Rashmi Kasaragodu
Updated On : 27 Dec 2013, 12:49 pm

ಓಂ. ಚನ್ನೇಶ್ ಅರಬಿಳಚಿ ಕ್ಯಾಂಪ್, 9900739725
ಕೈ ಕೆಸರಾಗದೆ ಬಾಯಿ ಮೊಸರಾಗೋ ಐಡಿಯಾ ಇದ್ರೆ ಕೊಡಿ!
ಸಾಲ ಮಾಡಿ ನಂದಿನಿ ಮೊಸರು ಕುಡಿಯೋದು!


ನೇರಲಗುಡ್ಡ ಶಿವಕುಮಾರ್, 9480343742
ಪಾಶ್ಚಿಮಾತ್ಯರಿಗೆ ಗಾಂಧೀಜಿ ಚಿಂತನೆಗಳಿಗೆ ಮನಸೋಲುತ್ತಿದ್ದಾರಂತೆ ನಿಜವೇ?
ಅದು ಸೋನಿಯಾ ಮತ್ತು ರಾಹುಲ್ ಗಾಂಧಿ ಚಿಂತನೆ ಅಂತ ಕಾಂಗ್ರೆಸ್ಸಿಗರು ಭ್ರಮೆಯಲ್ಲಿದ್ದಾರೆ!


ಸಿ. ನಾಗರಾಜ್ ಅರದೋಟ್ಲು, ಭದ್ರಾವತಿ
ಮಾತು ಬಲ್ಲವನಿಗೆ ಜಗಳವಿಲ್ಲ, ಮಾಣಿಕ್ಯ ಬಲ್ಲವನಿಗೆ?
ಮಾಣಿಕ್ಯ ಮಾರಿದ್ರೆ ಕೆಲಸವೇ ಬೇಡ..


ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ನನ್ನ ಸಹಪಾಠಿಯೊಬ್ಬಳು ಕೆಂಪು ದಾಸವಾಳ ಕೊಟ್ಟು 'ಐ ಲವ್ ಯೂ' ಅಂತಿದಾಳಲ್ಲಾ ಭಟ್ರೇ?
ನೀವು ಬೇಲಿ ಹತ್ರ ನಿಲ್ಲೋಕೆ ಲಾಯಕ್ಕು ಅಂತಿರಬೇಕು!

ಚಿತ್ರಾನ್ನದಲ್ಲಿ ಚಿತ್ರಗಳಿರದಿದ್ರೂ 'ಚಿತ್ರಾನ್ನ' ಯಾಕನ್ತಾರೆ ಭಟ್ರೆ?
ತಿಂದ ಕೆಲವರು ಚಿತ್ರ-ವಿಚಿತ್ರ ಮಾಡ್ತಾರೆ!


 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement