ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

ಯಾವುದು ಸರಿಯಾದ ಬಳಕೆ? ಅಡಿಕೆಯೋ, ಅಡಕೆಯೋ? ಈ ಬಗ್ಗೆ ನಡೆಯುತ್ತಿರುವ ಚರ್ಚೆಯಲ್ಲಿ ಸಾಗರದ...

Rashmi Kasaragodu
Updated On : 27 Dec 2013, 12:45 pm

ಯಾವುದು ಸರಿಯಾದ ಬಳಕೆ? ಅಡಿಕೆಯೋ, ಅಡಕೆಯೋ? ಈ ಬಗ್ಗೆ ನಡೆಯುತ್ತಿರುವ ಚರ್ಚೆಯಲ್ಲಿ ಸಾಗರದ ಬೊ.ನಾ.ಕೃಷ್ಣಮೂರ್ತಿಯವರೂ ಪಾಲ್ಗೊಂಡಿದ್ದಾರೆ. ಅವರು ಬರೆಯುತ್ತಾರೆ-    
"ಅಡಿಕೆಯೆಂಬ ಪದ ಕನ್ನಡದಲ್ಲಿ ಇಲ್ಲವೇ ಇಲ್ಲ' ಎಂದು ಕೆಲವರು ಹೇಳುತ್ತಿದ್ದಾರೆ. ಇಲ್ಲ ಎಂದು ವಾದಿಸುವವರು ದಯವಿಟ್ಟು ಪಂಡಿತ ಕವಲಿಯವರ 'ಕನ್ನಡ-ಕನ್ನಡ ಕಸ್ತೂರಿ ಕೋಶ' (2007) ಪುಟ 21 ಮತ್ತು 22ರ ಮೇಲೆ  ಕಣ್ಣಾಡಿಸಬೇಕು. ಆಗ, ಕನ್ನಡದಲ್ಲಿ ಒಂದೇ ಅರ್ಥವನ್ನು ಕೊಡುವ ಮತ್ತು ಒಂದೇ ಸಸ್ಯಕ್ಕೆ ಸಂಬಂಧಿಸಿದ 'ಅಡಕೆ' ಮತ್ತು 'ಅಡಿಕೆ' ಎಂಬ ಎರಡು ಪದಗಳೂ ಅಸ್ತಿತ್ವದಲ್ಲಿ ಇವೆ ಎಂದು ಅವರ ಅರಿವಿಗೆ ಬಂದೀತು" ಎಂದಿದ್ದಾರೆ.
ಬೆಂಗಳೂರಿನಿಂದ ವಿ. ಹೇಮಂತ್ಕುಮಾರ್ ಬರೆಯುತ್ತಾರೆ- "ನವೆಂಬರ್ 23ರ ಸಂಚಿಕೆಯ ಪುಟ 9ರಲ್ಲಿ "ಬಿಲ ಬಗೆದು ಇಲಿ ಹಿಡಿಯುವ ಇರುಳಿಗರು" ಶೀರ್ಷಿಕೆಯ ಲೇಖನದಲ್ಲಿ ಇರುಳಿಗರ ಬಗ್ಗೆ ತಿಳಿಸುತ್ತಾ, ಈ ಹಿಂದೆ ಅವರು ಕಾಡುಗಳಲ್ಲಿ ಗುಹೆ, ಪೊಟರೆಗಳಲ್ಲಿ ವಾಸಿಸುತ್ತಿದ್ದರು ಎಂದಿದೆ. ಆದರೆ ಪ್ರಾಣಿ ಪಕ್ಷಿಗಳು ತಾನೇ ಗುಹೆ, ಪೊಟರೆಗಳಲ್ಲಿ ವಾಹಿಸುವುದು? ಇರುಳಿಗರು ಗುಡಿಸಲು ಮತ್ತು ಜೋಪಡಿಗಳಲ್ಲಿ ವಾಸಿಸುತ್ತಿದ್ದರು ಎಂಬುದೇ ಸೂಕ್ತವಲ್ಲವೇ?"
ಬಾಗಲಕೋಟೆ ಜಿಲ್ಲೆಯ ಇಳಕಲ್ನ ಶ್ರೀಕಾಂತ್ ಮುದುಗಲ್ ಹೇಳುತ್ತಾರೆ: "ಡಿ. 18ರಂದು 'ಭಾವತೀರಯಾನ'ದಲ್ಲಿ ಪ್ರಕಟವಾದ ಎ.ಆರ್. ಮಣಿಕಾಂತ್ ಅವರ 'ಬದುಕಿನ ಹೆಜ್ಜೆ ಗುರುತು ನೆನಪಿಸಿದ ಹಚ್ಚೆ!' ಲೇಖನದಲ್ಲಿ ಬರುವ ಇನ್ಸ್ಪೆಕ್ಟರ್ ಹೆಸರನ್ನು ಒಮ್ಮೆ 'ಶ್ರೀಕಾಂತ್ ಸೋಂದೆ' ಎಂದು, ಮತ್ತೊಮ್ಮೆ 'ಶ್ರೀಶಾಂತ್ ಸೋಂದೆ' ಎಂತಲೂ, ಮಗದೊಮ್ಮೆ 'ಶಶಿಕಾಂತ್ ಸೋಂದೆ' ಎಂದೂ ಬರೆಯಲಾಗಿದೆ. ಹೀಗೆ ಒಬ್ಬರೇ ಇನ್ಸ್ಪೆಕ್ಟರ್ರ ಹೆಸರನ್ನು ಮೂರು ರೀತಿಯಲ್ಲಿ ಬರೆದಿದ್ದೀರಿ. ಹಾಗಿದ್ದರೆ ಯಾವ ಹೆಸರು ಸರಿ?"
'ಇನ್ನು ಅದೇ ಸಂಚಿಕೆಯ ಪುಟ 8ರಲ್ಲಿ '...ನಾಡೋಜ ಗೌರವ' ಸುದ್ದಿಯಲ್ಲಿ '...ಅನುಪಮ ಸೇವೆ ಸಲ್ಲಿಸಿದ ಮೂರು ಗಣ್ಯರಿಗೆ' ಎಂದಿದೆ. ಅದು ಮೂವರು ಗಣ್ಯರಿಗೆ ಎಂದಾಗಬೇಕಿತ್ತು" ಎಂದಿದ್ದಾರೆ.
'ಮೂವರು ಗಣ್ಯರು' ಎನ್ನುವುದೇ ಸರಿ. ಇನ್ನು ಆ ಇನ್ಸ್ಪೆಕ್ಟರ್ರ ಹೆಸರು ಶ್ರೀಕಾಂತ್ ಸೋಂದೆ. ಕಣ್ತಪ್ಪಿನಿಂದಾಗಿ ಹೀಗಾಗಿದೆ.

 -ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement