ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕವಿಗಳಿಗೆ ಕವಿತೆಯೆಂಬುದು ಎಲ್ಲಿ ಅವಿತಿರುತ್ತೆ?

Rashmi Kasaragodu
Updated On : 28 Dec 2013, 12:50 pm


ಶಂಕರನಾರಾಯಣ ಭಟ್, ಮಾಡಗೇರಿ, 9632821920
ಪ್ರೀತಿ ಮಾಡಿದ ಮೇಲೆ ಹೆದರುವುದ್ಯಾಕೆ. ಡೈವೋರ್ಸ್ ಕೊಟ್ಟಮೇಲೆ?
ಒಬ್ಬರೇ ಇರುವುದೇಕೆ!

ಸಿ. ನಾಗರಾಜ ಅರದೋಟ್ಲು, ಭದ್ರಾವತಿ
ಕವಿಗಳಿಗೆ ಕವಿತೆಯೆಂಬುದು ಎಲ್ಲಿ ಅವಿತಿರುತ್ತೆ?
ಕವಿತೆ ನೀನೇಕೆ ಪದಗಳಲಿ ಅವಿತೆ ಅಂತ ಅವರೂ ಕೇಳುತ್ತಾರಂತೆ.



ಭವ್ಯ ಎಸ್. ಮೈಸೂರು
ಈ ಹಿಂದೆ ಫ್ಯಾಷನ್ ಡಿಸೈನರ್ ಮಧು ಬರೆದಿದ್ದ ಪ್ರಶ್ನೆಗಳನ್ನೇ ಕೆಲವರು ಕದ್ದು ಬರೆಯುತ್ತಿದ್ದಾರಲ್ಲ. ಅವರ ತಲೇಲಿ ಪ್ರಶ್ನೆಗಳು ಹೊಳೆಯೋದಿಲ್ವಾ?
ಕದಿಯೋದು ಅವರ ಫ್ಯಾಷನ್!


ರವಿಕುಮಾರ ಜಿ.ಬಿ. ಬೆಂಗಳೂರು, 9449669897
ಶಿರಾಡಿಘಾಟ್ ರಸ್ತೆಯಲ್ಲಿ ನಮ್ಮ ಜನಪ್ರತಿನಿಧಿಗಳು ತಿರುಗಾಡಲು ಭಯಪಡಲು ಕಾರಣ?
ರೋಡ್ ಬ್ಲಾಕ್ ಆಗಿ ಜನರ ಕೈಗೆ ಸಿಕ್ಕಿಹಾಕಿಕೊಂಡರೆ ಎಂಬ ಭಯ.


ಓಂಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9901257131
ಕೋಳಿ-ಕುರಿಗಳನ್ನು ದೇವರಿಗೆ ಬಲಿ ಕೊಟ್ರೆ ಮಾತ್ರ ಒಲಿದು ವರ ಕೊಡ್ತಾನಾ?
ಬಲಿ ದೇವರ ನೆಪದಲ್ಲಾದರೂ, ಅವು ಮನುಷ್ಯರ ಹೊಟ್ಟೇನೇ ಸೇರೋದು.

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement