ನಿಜವಾಗ್ಲೂ ನೀನು ನಿನ್ನ ಹೆಂಡತಿಗೆ ಹೆದರೋಲ್ವ...?
ತನ್ನ ರಾಜ್ಯದಲ್ಲಿರುವ ಎಲ್ಲಾ ವಿವಾಹಿತರನ್ನು ಒಮ್ಮೆ ಮಹಾರಾಜ ತನ್ನ ದರ್ಬಾರಿಗೆ ಬರ ಹೇಳಿದ.
ಮಹಾರಾಜ: ಈಗ ನೀವೆಲ್ಲ ಎರಡು ಸಾಲು ಮಾಡಿ. ಹೆಂಡತಿಗೆ ಹೆದರುವವರದ್ದು ಮೊದಲ ಸಾಲು. ಹೆದರದವರದ್ದು ಎರಡನೆಯ ಸಾಲು.
(ಆಗ ನಿರ್ಮಾಣವಾದ ಎರಡೂ ಸಾಲನ್ನು ನೋಡಿ ಮಹಾರಾಜ ಹೈರಾಣಾಗಿಬಿಟ್ಟ. ಏಕೆಂದರೆ ಹೆದರುವವರ ಸಾಲು ಭಾರೀ ದೊಡ್ಡದಿತ್ತು. ಆದರೆ ಎರಡನೆಯ ಸಾಲಿನಲ್ಲಿ ಕೇವಲ ಕೋಲ್ಯ ಮಾತ್ರ ನಿಂತಿದ್ದ!)
ಮಹಾರಾಜ: ಶಭಾಷ್ ಕೋಲ್ಯ. ನೀನು ನಿಜವಾದ ಗಂಡು ಕಣೋ! ನಿಜವಾಗ್ಲೂ ನೀನು ನಿನ್ನ ಹೆಂಡತಿಗೆ ಹೆದರೋಲ್ವ...?
ಕೋಲ್ಯ: ಅದೆಲ್ಲ ನನಗೆ ಗೊತ್ತಾಗಲ್ಲ ಮಹಾಪ್ರಭು. ಆದರೆ 'ಇದೇ ಸಾಲಿನಲ್ಲಿ' ನಿಲ್ಲಬೇಕು ಅಂತ ನನ್ನ ಹೆಂಡತಿ ಹೇಳಿ ಕಳಸಿದ್ದಾಳೆ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.