ಯಾವ ವಯಸ್ಸಿನಿಂದ ಮಕ್ಕಳಿಗೆ ಲೈಂಗಿಕ ಶಿಕ್ಷಣ ಅಗತ್ಯ ಭಟ್ರೇ?
ಕುಬೇರಪ್ಪ ಎಂ. ವಿಭೂತಿ, ಹರಿಹರ, 9739944200
ಯಾವ ವಯಸ್ಸಿನಿಂದ ಮಕ್ಕಳಿಗೆ ಲೈಂಗಿಕ ಶಿಕ್ಷಣ ಅಗತ್ಯ ಭಟ್ರೇ?
ಅದು ಗುರುವಿಲ್ಲದ ವಿದ್ಯೆ. ಹಾಗಾಗಿ ಎಲ್ಲರೂ ಏಕಲವ್ಯರೇ!
ಆರೀಫ್ (ಅರಿ), ದಾವಣಗೆರೆ, 9964280609
ಹುಡುಗಿಯರ ಮನಸ್ಸಿನಲ್ಲಿ ಪ್ರೀತಿ ಇದ್ದರೂ ಬೇಗನೆ ಹೇಳಿಕೊಳ್ಳುವುದಿಲ್ಲವೇಕೆ?
ಅವರಿಗೆ ಹುಡುಗರಷ್ಟು ಆತುರ ಇರುವುದಿಲ್ಲ.
ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ತೊಟ್ಟ ಬಾಣವ ಮತ್ತೆ ತೊಡಲಾರೆ ಎನ್ನುವುದು ಕರ್ಣನ ಶಪಥ. ನಮ್ಮ ಬಾಣಭಟ್ಟರದು?
ಬಾಣ ಯಾವುದಾದರೇನು ಗುರಿ ಮಾತ್ರ ಓದುಗರೇ.
ಪಿ.ಜೆ. ರಾಘವೇಂದ್ರ ಮೈಸೂರು
ಕೇಳ್ರಪ್ಪೋ ಕೇಳಿಯಲ್ಲಿ ಮಧುಮೋಹಿಗಳು ಹೆಚ್ಚಾಗಿದ್ದಾರಲ್ಲಾ?
ಅವರು ಮಧುಮೇಹಿಗಳಾಗುವತನಕ ಮಧುಮೋಹಿಗಳಾಗೇ ಇರುತ್ತಾರೆ.
ಬರ್ಕಲಿರಮೇಶ, ಕಿರಗಂದೂರು, ಮಂಡ್ಯ, 9008741348
ಹೆಣ್ಣಿನ ತುಟಿಗಳು ಜೇನಿಗಿಂತಲೂ ಸಿಹಿಯಾಗಿರುವುದೇಕೆ?
ಅದು ಕೇವಲ 'ಮಧು'ರ ಕಲ್ಪನೆ!
ಬಾಣಭಟ್ಟ