ಸಂಪಾದಕೀಯ

ದುಡ್ಡು ಆ ಮಣ್ಣಿನ ಕುಡಿಕೆಯಲ್ಲಿದೆ

ಹಿಂದೆ ಹೊಸದುರ್ಗ ತಾಲೂಕಿನ ಬಾಗೂರಿನಲ್ಲಿ ಕಣ್ಣಮ್ಮ ಎಂಬ ಸಾಧ್ವಿಯೊಬ್ಬರು ಸನ್ಯಾಸಿ ಜೀವನ ನಡೆಸುತ್ತಿದ್ದರು. ಅವರ ಆಶ್ರಮವೆಂದರೆ ಒಂದು ಸಣ್ಣ ಹೆಂಚಿನ ಮನೆ, ಪಕ್ಕದಲ್ಲೊಂದು ಮಂಟಪ. ಮನೆಯ ಸುತ್ತಲೂ ಹಣ್ಣಿನ, ಹೂವಿನ ಗಿಡಗಳು. ತಲೆಬಾಚದೆ ಗಂಟುಗಂಟಾಗಿದ್ದ ಉದ್ದವಾದ ಜಡೆ. ಯಾವ ಪ್ರಚಾರವೂ ಬಯಸದ ನಿರುಪದ್ರವಿ ವ್ಯಕ್ತಿಯಾಗಿ ಪೂಜೆ, ಭಜನೆಗಳಲ್ಲಿ ಮಗ್ನರಾಗಿದ್ದ ಈಕೆ ಅನೇಕ ದಿನಗಳ ಕಾಲ ಊಟವಿಲ್ಲದೆ ಲವಲವಿಕೆಯಿಂದ ಇದ್ದುಬಿಡುತ್ತಿದ್ದರು. ಕೊನೆಕೊನೆಗಂತೂ ಆರು ತಿಂಗಳುಗಳ ಕಾಲ ಊಟ ಬಿಟ್ಟು ಒಂದು ಹೊತ್ತು ಮಾತ್ರ ಹಾಲು ಸೇವಿಸುತ್ತಿದ್ದರು. ಕೊನೆಗಾಲದಲ್ಲಿ ಬೆಳೆಗೆರೆ ಕೃಷ್ಣಶಾಸ್ತ್ರಿಗಳು ಇವರ ಬಳಿಯೇ ಇದ್ದು ಆರೈಕೆ ಮಾಡಿದರು.
ಒಮ್ಮೆ ಕಣ್ಣಮ್ಮನವರಿದ್ದ ಆಶ್ರಮಕ್ಕೆ ಒಂದು ರಾತ್ರಿ ಕಳ್ಳರು ನುಗ್ಗಿದ್ದಾರೆ. ಬೇಸಿಗೆಯ ಕಾಲ, ಹೊರಗಡೆ ಸೊಗಸಾದ ಬೆಳದಿಂಗಳು ಬೇರೆ. ಇಂತಹ ರಾತ್ರಿ ಕಳ್ಳರ ಆಗಮನ. ಕಣ್ಣಮ್ಮ ಹೊರಗೆ ಕುಳಿತಿರುವುದನ್ನು ನೋಡದೆ ಹಿಂದಿನ ಕಿಟಕಿಯ ಮೂಲಕ ಕಳ್ಳರು ಒಳಬಂದಿದ್ದಾರೆ. ಏನೋ ಶಬ್ದವಾದಂತಾಗಿ ತಿರುಗಿನೋಡಿದರೆ, ಕಿಟಕಿಯ ಮೂಲಕ ಪ್ರಯಾಸದಿಂದ ಒಳ ನುಸುಳುತ್ತಿರುವ ಕಳ್ಳರು. ಅವರನ್ನು ನೋಡಿ ಕಣ್ಣಮ್ಮ 'ಅಲ್ಲಪ್ಪಾ ಈ ಕಡೆಯಿಂದ ಬಾಗಿಲೇ ಇದ್ಯಲ್ಲ, ಆ ಸಂದೀಲಿಂದ ಯಾಕೆ ಅವಸ್ಥೆ ಪಟ್ಟುಕೊಂಡು ಬಂದ್ರಿ?' ಎಂದರು.
ತಲೆ ತಗ್ಗಿಸಿ ನಿಂತ ಕಳ್ಳರನ್ನುದ್ದೇಶಿಸಿ, 'ದುಡ್ಡು ದೇವರ ಗದ್ದುಗೆ ಮೇಲೆ ಒಂದು ಮಣ್ಣಿನ ಕುಡಿಕೆ ಇದೆಯಲ್ಲಾ, ಯಾರೋ ಐದೋ ಹತ್ತೋ ಪೈಸೆ ಹಾಕಿ ಹೋಗಿರ್ತಾರೆ, ಅದನ್ನು ತಗೆದುಕೊಂಡು ಹೋಗಿ. ಆ ಪುಡಿಕಾಸು ಯಾತಕ್ಕಾಗುತ್ತೆ ಅದರ ಜೊತೆಗೆ ಒಳಗಿರುವ ಡಬ್ಬದಲ್ಲಿ ನಾಲ್ಕೈದು ಸೇರು ಅಕ್ಕಿಯಿದೆ. ಅದನ್ನೂ ತೆಗೆದುಕೊಂಡು ಹೋಗಿ. ಮತ್ತೆ ಆ ಕಿಟಕಿ ಸಂದೀಲಿ ತೂರಿಕೊಂಡು ಹೋಗಬೇಡಿ. ಈ ಕಡೆಯಿಂದಲೇ ಹೋಗಿ' ಎಂದು ಹೇಳಿ ಕಳುಹಿಸಿದರು!  ಮತ್ತೊಮ್ಮೆ ಚಿತ್ರದುರ್ಗ ಎಸ್.ಪಿ.ಆಗಿದ್ದ ಹಾಗೂ ಕಣ್ಣಮ್ಮನವರ ಬಂಧುಗಳೂ ಆಗಿದ್ದ ಪಿ.ಎಸ್.ರಾಮಾನುಜಂ ಅವರು ಬಾಗೂರಿಗೆ ಬಂದು ಕಣ್ಣಮ್ಮನವರನ್ನು ಭೇಟಿಯಾಗಿ, ತಮ್ಮಿಂದ ಏನಾದರೂ ಸೌಕರ್ಯ ಬೇಕಿದ್ರೆ ಕೇಳಿ ಎಂದರು. ಆಗ ಕಣ್ಣಮ್ಮನವರು 'ನೀನು ನಿನ್ನ ಕರ್ತವ್ಯ ಸರಿಯಾಗಿ ನಿರ್ವಹಿಸಿಬಿಡಪ್ಪ, ಇಲ್ಲಿದೇನೋ ಆಗುತ್ತೆ' ಎಂದು ಹೇಳಿದರಂತೆ. ಇದು ಒಬ್ಬ ನಿಜವಾದ ಸನ್ಯಾಸಿಯ ಮನೋಧರ್ಮ ಹೇಗಿರುತ್ತದೆಂಬುದಕ್ಕೆ ಒಂದು ಉತ್ತಮ ನಿದರ್ಶನ.

- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಹೆದ್ದಾರಿ ದಾಟುತ್ತಿದ್ದ ಕುರಿ-ಮೇಕೆಗಳ ಮೇಲೆ ಹರಿದ ಟ್ರಕ್; 23 ಕುರಿ, 2 ಮೇಕೆ ಸಾವು, ಭೀಕರ ವಿಡಿಯೋ ಸಿಸಿಟಿವಿಯಲ್ಲಿ ಸೆರೆ!

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!