ಸಂಪಾದಕೀಯ

ನನ್ನ ಪ್ರಿಯತಮೆ ಕರಾಟೆ ಕಲೀಬೇಕು ಅಂತ ಆಸೆಪಡ್ತಾ ಇದ್ದಾಳಲ್ಲ ಭಟ್ರೇ?

ಬಾಣಭಟ್ಟ



ಎಸ್. ರಾಘಣ್ಣ, ಕೃಷ್ಣಮೂರ್ತಿಪುರಂ, ಮೈಸೂರು
ಹುಡುಗಿಯೊಬ್ಬಳು ನಿನ್ನನ್ನು ಕಣ್ಣಲ್ಲಿ ಕೊಲ್ತೀನಿ ಅಂತಿದಾಳೆ. ಕಂಪ್ಲೇಂಟ್ ಕೊಡಲೇನು?
ತಡವಾಗಿದ್ದಕ್ಕೆ ಕಂಪ್ಲೇಂಟ್ ಕೊಡಬಹುದು!


ಫ್ಯಾಶನ್ ಡಿಸೈನರ್ ಮಧು, 9945737427
ನನ್ನ ಹೃದಯದ ತಿಜೋರಿಯನ್ನು ಕದ್ದಿರುವ ಆ ಚೆಲುವೆಗೆ ಯಾವ ಶಿಕ್ಷೆ ಕೊಡಬೇಕು?
ಜೀವನ ಪರ್ಯಂತ ನಿನ್ನ ಜತೆ ಬಾಳುವ ಶಿಕ್ಷೆ!


ವಿ. ಹೇಮಂತಕುಮಾರ, ಬೆಂಗಳೂರು, 9035992900
ಮನೆಯಲ್ಲಿರುವ ಮಮ್ಮಿಗೂ, ಪಿರಮಿಡ್‌ನಲ್ಲಿರುವ ಮಮ್ಮಿಗೂ ವ್ಯತ್ಯಾಸವೇನು?
ಮನೆಯಲ್ಲಿರುವ ಮಮ್ಮಿ ಎದ್ದು ಓಡಾಡದಿದ್ದರೆ ಕಷ್ಟ, ಪಿರಮಿಡ್‌ನ ಮಮ್ಮಿ ಎದ್ದು ಓಡಾಡಿದರೆ ಸಂಕಷ್ಟ.



ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ನನ್ನ ಪ್ರಿಯತಮೆ ಕರಾಟೆ ಕಲೀಬೇಕು ಅಂತ ಆಸೆಪಡ್ತಾ ಇದ್ದಾಳಲ್ಲ ಭಟ್ರೇ?
ನಿನ್ನ ತರಾಟೆ ತೆಗೆದುಕೊಳ್ಳುವ ತಯಾರಿಯದು.


ರವಿಕುಮಾರ ಜಿ.ಬಿ. 9449669897
ಬ್ರಹ್ಮಚಾರಿಗಳಿಗೂ, ಸಂಸಾರಿಗಳಿಗೂ ಇರುವ ವ್ಯತ್ಯಾಸವೇನು?
ಅವರು ಮದುವೆ ಆಗದ್ದಕ್ಕೆ ದುಃಖಿತರು, ಇವರು ಮದುವೆ ಆಗಿದ್ದಕ್ಕೆ ದುಃಖಿತರು!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ

Ramayana: ಕೊನೆಗೂ 'ರಾಮಾಯಣ' ರಿಲೀಸ್ ಡೇಟ್ ಫಿಕ್ಸ್; ದೀಪಾವಳಿಗೂ ಮೊದಲೇ ಬಿಡುಗಡೆ

ಯಮನಿಗೇ ಚಳ್ಳೇಹಣ್ಣು: ಗುದ್ದಿದ ಲಾರಿಯನ್ನೇ ಹಿಡಿದು ಪ್ರಾಣ ಉಳಿಸಿಕೊಂಡ ಯುವತಿ!-ರೋಚಕ Video