ಸಂಪಾದಕೀಯ

ಬಟ್ಟೆ ಒಣಗಿದರೆ ತಾನೆ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯ!

ಮಧುಲಿಮಯೆ ತಮ್ಮ 15ನೇ ವಯಸ್ಸಿನಿಂದಲೂ ಸಕ್ರಿಯ ರಾಜಕಾರಣದಲ್ಲಿ ತೊಡಗಿದ್ದವರು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಹಲವಾರು ಬಾರಿ ಸೆರೆಮನೆವಾಸವನ್ನೂ ಅನುಭವಿಸಿದವರು. ನಾಲ್ಕು ಬಾರಿ ಸಂಸತ್ ಸದಸ್ಯರಾಗಿ, ಉತ್ತಮ ಸಂಸತ್ ಪಟುವಾಗಿ ರೂಪುಗೊಂಡರು. ತುರ್ತು ಪರಿಸ್ಥಿತಿಯ ಕಾಲದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಗೋವಾ ಚಳವಳಿಯಲ್ಲಿ ಸಹ ಭಾಗವಹಿಸಿ, ಬಂಧಿತರಾಗಿದ್ದರು. ಅಪ್ಪಟ ಸಮಾಜವಾದಿಗಳಾಗಿದ್ದ ಮಧು ಲಿಮಯೆ ಸುಮಾರು ನೂರು ಪುಸ್ತಕಗಳನ್ನು ಬರೆದಿದ್ದಾರೆ. ಇಂಗ್ಲಿಷ್, ಹಿಂದಿ ಮತ್ತು ಮರಾಠಿಯಲ್ಲಿ ಬರೆದಿರುವ ಈ ಕೃತಿಗಳು ತುಂಬಾ ಪ್ರಸಿದ್ಧವಾಗಿವೆ. ಮೊದಲ ಬಾರಿಗೆ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ ಲಿಮಯೆಯವರು ಮಂತ್ರಿಮಂಡಲದ ಸದಸ್ಯರಾಗಿದ್ದರು. ಜನತಾ ಪಕ್ಷದ ಅವನತಿಗೂ ಲಿಮಯೆ ಕಾರಣರಾದದ್ದು ಮಾತ್ರ ವಿಪರ್ಯಾಸ.
ಮಧು ಲಿಮಯೆ ರಾಮಮನೋಹರ ಲೋಹಿಯಾರವರ ಅನುಯಾಯಿಯಾಗಿ ಸಾಮಾಜಿಕ ಚಳವಳಿಯಲ್ಲಿ ನಿರತರಾದವರು. ಜೆಪಿಯವರ ಪರಿಶ್ರಮದಿಂದ ಮೊದಲ ಬಾರಿಗೆ ಜನತಾಪಕ್ಷ ಅಧಿಕಾರಕ್ಕೆ ಬಂದಾಗ ಆ ಪಕ್ಷದ ಕಾರ್ಯದರ್ಶಿಯಾಗಿದ್ದರು. ಮೊರಾರ್ಜಿ ದೇಸಾಯಿಯವರ ಸಂಪುಟದಲ್ಲಿ ಹಣಕಾಸು ಮಂತ್ರಿಯಾಗಿ ಯಾರನ್ನು ಮಾಡಬೇಕೆಂದು ನಡೆದ ಸಮಾಲೋಚನಾ ಸಭೆಯಲ್ಲಿ ಸರ್ವಾನುಮತದಿಂದ ಲಿಮಯೆ ಆಯ್ಕೆಯಾದರು. ಅಂದು ಸಂಜೆ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮವಿತ್ತು. ಆದರೆ ಲಿಮಯೆ ಅವರಿಗೆ ಈ ವಿಷಯ ತಿಳಿಸಬೇಕೆಂದರೆ, ಅವರ ಮನೆಯಲ್ಲಿ ದೂರವಾಣಿ ಸೌಲಭ್ಯ ಇರಲಿಲ್ಲ. ಆಗ ಒಬ್ಬ ದೂತನನ್ನು ಕಳಿಸಿ, ಅವರನ್ನು ಸಚಿವರಾಗಿ ಆರಿಸಿರುವುದಾಗಿಯೂ ಅವರು ಅದೇ ಸಂಜೆ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ತಯಾರಾಗಿ ಬರಬೇಕೆಂದೂ ಸಂದೇಶ ಕಳುಹಿಸಿದರು. ಆ ದೂತನು ಲಿಮಯೆ ಮನೆಗೆ ಬಂದಾಗ ಲಿಮಯೆಯವರು ಹಿತ್ತಲಿನಲ್ಲಿ ತಮ್ಮ ಬಟ್ಟೆಯನ್ನು ಒಗೆಯುತ್ತಿದ್ದರು. ಅಲ್ಲಿಯೇ ಅವರಿಗೆ ವಿಚಾರ ತಿಳಿಸುವಾಗ ಅವರು ತಮ್ಮಲ್ಲಿದ್ದ ಮೂರುಜೊತೆ ಬಟ್ಟೆಯನ್ನು ಬಹಳ ಆಸ್ಥೆಯಿಂದ ಒಗೆಯುತ್ತಿದ್ದರು. ಅವರಿಗೆ  ವಿಷಯ ತಿಳಿದು ಚಿಂತೆ ಮೂಡಿತು. ಅವರೇನೂ ಪ್ರತಿಕ್ರಿಯೆ ನೀಡದಿದ್ದಾಗ ಆ ದೂತ, 'ಅಲ್ಲ ಸ್ವಾಮಿ, ತಮಗೆ ಸಂತಸದ ವಿಷಯ ತಿಳಿಸಿದರೂ ತಾವು ಸಂತಸ ಪಡದೆ ಏನೋ ಚಿಂತೆಯಲ್ಲಿರುವಂತಿದೆಯಲ್ಲಾ?' ಎಂದಾಗ ಮಧು ಲಿಮಯೆ ಹೇಳಿದರು, 'ಸರಿಯಪ್ಪಾ ನೀನೇನೋ ಸಂಜೆ ಪ್ರಮಾಣವಚನಕ್ಕೆ ಬರಲು ತಿಳಿಸಿದ್ದೀಯೆ, ಆದರೆ ಅಷ್ಟರ ಒಳಗೆ ಈ ಬಟ್ಟೆಗಳು ಒಣಗುತ್ತವೆಯೇ?' ಎಂದು ನನಗೆ ಯೋಚನೆಯಾಗಿದೆ. ಇದು ಮಧು ದಂಡವತೆಯವರ ಸರಳತೆ ಮತ್ತು ಭಾರತದ ಹಣಕಾಸು ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದ ವ್ಯಕ್ತಿಯ ಆರ್ಥಿಕ ಪರಿಸ್ಥಿತಿಯನ್ನು ತೋರಿಸುತ್ತದೆ.


 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ'.. 'ನಿಮ್ಮನ್ನು ಈರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ'; Kichcha Sudeepಗೆ ಪತ್ರ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: ಉಲ್ಟಾ ಹೊಡೆದ Falahari Maharaj, ಕ್ಷಮೆಯಾಚನೆ! video

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್: ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'; Video ವೈರಲ್!