ಸುಗಂಧವನ್ನೂ, ದುರ್ಗಂಧವನ್ನೂ ಒಯ್ಯುವ ವಾಹಕ
ಎಲ್ಲರಿಗೂ ಇದೆಂದರೆ ಪ್ರಾಣ
ಕೆಲವು ತರಕಾರಿಗಳು ಗಾಳಿಯನ್ನು ಹೆಚ್ಚು ಹೊರಸೂಸುತ್ತವೆ, ಹೊಟ್ಟೆ ಸೇರಿದ ಮೇಲೆ
ಪರ್ವತಾರೋಹಿಗಳಿಗೆ ಈ Airನದ್ದೇ ಸಮಸ್ಯೆ
ಹೊಗೆಯ ನಂತರದ ಸ್ಥಾನ ಇದರದ್ದು ವಾಯುಮಂಡಲದಲ್ಲಿ
ಶುದ್ದ ಗಾಳಿ ಸಿಗದಿದ್ದರೆ ಗೋಳಿಡುವುದೇ ಬಾಳು
ಚಿಪ್ಸ್ ಪ್ಯಾಕೆಟ್ನಲ್ಲಿ ಚಿಪ್ಸ್ಗಿಂತ ಹೆಚ್ಚಿರುವ ವಸ್ತು
ಫ್ಯಾನ್ ತಿರುಗಿದಾಗ ಬೀಸುವಂಥದ್ದು
ಕುಡುಕ ತೂರಾಡಲು ಜೋರಾಗಿ ಬೀಸುವ ಗಾಳಿಯೇ ಕಾರಣ
ಋತುವಿಗೆ ತಕ್ಕಂತೆ ಬದಲಾಗುವುದೇ ಮಾರುತ
ಆಯುವನ್ನು ನಿರ್ಧರಿಸುವ ವಾಯು
ಪಂಚ ವಿಧ ವಾಯುಗಳಲ್ಲಿ ಅಪಾನವಾಯು ತೂರಿಸಲೊಂದು ನೆಪ
ಗಾಲಿಯೊಳಗೆ ತುಂಬಿರುವಂಥದ್ದು
ಕೆಲವರು ಗಾಳಿಯನ್ನು ಒಳ ತೆಗೆದುಕೊಂಡು ಹೊಗೆಯನ್ನು ಹೊರಬಿಡುತ್ತಾರೆ
ವಾಯುಪುತ್ರನಿಗೆ ಸಮುದ್ರೋಲ್ಲಂಘನ ಮಾಡಲು ಜಾಂಬವಂತ ಹಾಕಿದ್ದು ಇದನ್ನೇ
ಗಾಳಿ ಹಾಕುವುದು ಮತ್ತು ಗಾಳಿ ತೆಗೆಯುವುದಕ್ಕೆ ವಿಶೇಷಾರ್ಥವಿದೆ.
ಕೊನೆಯ ಉಸಿರಿರುವ ತನಕ ಜೊತೆಗಿರುವಂಥದ್ದು
-ವಿಶ್ವನಾಥ ಸುಂಕಸಾಳ
vishwasunkasal@yahoo.com