ಸಂಪಾದಕೀಯ

ಭಾವಿ ಪತ್ನಿಗೆ ವಾರ್ಧಾದಲ್ಲಿ ತರಬೇತಿ

ದಿ.ವಿಷ್ಣುಪಂತ ನಿಂಬಕರ್ 1920-30ರ ಸಮಯದಲ್ಲಿ ಮಹಾರಾಷ್ಟ್ರದಲ್ಲಿ ಪ್ರಸಿದ್ಧರಾಗಿದ್ದು ಅನೇಕ ಸಂಘ ಸಂಸ್ಥೆಗಳನ್ನು ಪ್ರಾರಂಭಿಸಿ ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿದವರು. ಅಸಾಮಾನ್ಯ ಪಾಂಡಿತ್ಯ ಪಡೆದಿದ್ದ ಅವರು ಸ್ವಾವಲಂಬಿಗಳೂ, ಸ್ವಾಭಿಮಾನಿಗಳೂ ಆಗಿದ್ದರು. ಅವರ ಜೀವನದ ಮುಖ್ಯ ಉದ್ದೇಶ ಅಮೆರಿಕಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಬೇಕೆಂಬುದಾಗಿತ್ತು. ಬಡವರಾಗಿದ್ದ ಅವರು ತುಂಬಾ ಪ್ರಯಾಸಪಟ್ಟು ಅಮೆರಿಕದಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ಅಲ್ಲಿ ಪತ್ರಿಕೆ ಹಂಚುವ ಕೆಲಸವನ್ನು ಕೈಗೊಂಡು ಹಣ ಗಳಿಸಿ ಜ್ಞಾನಾರ್ಜನೆ ಮಾಡಿದರು.
ಒಮ್ಮೆ ಬಾಲಕರಾಗಿದ್ದಾಗ ತಮ್ಮ ಗೆಳೆಯರೊಡನೆ ಆಟವಾಡುತ್ತಿದ್ದರು. ಆಗ ಫಲಟಣದ ಯುವರಾಜರು ಕುದುರೆಯ ಮೇಲೆ ಅಲ್ಲಿಗೆ ಬಂದಾಗ ಎಲ್ಲರೂ ಗೌರವದಿಂದ ತಲೆಬಾಗಿಸಿ ನಮಸ್ಕರಿಸಿದರು. ಆದರೆ ನಿಂಬಕರ್ ಅವರು ಏನೂ ಮಾಡದೆ ಸುಮ್ಮನೆ ನಿಂತು ಬಿಟ್ಟರು. ಅದನ್ನು ಕಂಡು ಯುವರಾಜರು ಅವರ ಬಳಿ ಬಂದು ತಾನು ಯಾರೆಂದು ತಿಳಿಯುವುದಿಲ್ಲವೆ ಎಂದು ಪ್ರಶ್ನಿಸಿದರು. ಆಗ ನಿಂಬಕರರು ತಮಗೆ ಯುವರಾಜರ ಪರಿಚಯವಿಲ್ಲವೆಂದು ಧ್ಯೆರ್ಯವಾಗಿ ಹೇಳಿದರು. ಅವರನ್ನು ರಾಜವಾಡೆಗೆ ಕರೆಸಿಕೊಂಡು, ಯುವರಾಜರು ಆರ್ಥಿಕ ನೆರವು ನೀಡಿ ಸಹಕರಿಸಿದರು. ಅಮೆರಿಕದಲ್ಲಿದ್ದಾಗ ಅವರ ಸಹಪಾಠಿ ಎಲಿಜಬೆತ್ ಎಂಬ ತರುಣಿ ನಿಂಬಕರ್ ಅವರನ್ನು ವಿವಾಹವಾಗ ಬಯಸಿದಳು. ಆಗ ನಿಂಬಕರ್ ತಾನು ವಿವಾಹವಾಗಬೇಕಾದರೆ ಎರಡು ಶರತ್ತುಗಳನ್ನು ವಿಧಿಸಿದರು. ಒಂದು ಪ್ರತಿ ತಿಂಗಳೂ ಕೇವಲ ಹತ್ತು ರುಪಾಯಿಗಳಲ್ಲಿ ಸಂಸಾರ ಸಾಗಿಸಬೇಕು. ಇನ್ನೊಂದು, ಸ್ವಾವಲಂಬಿಯಾಗಿ ಭಾರತೀಯ ಸಂಪ್ರದಾಯಗಳನ್ನು ಅನುಸರಿಸಬೇಕು. ಅದಕ್ಕೆ ಒಪ್ಪಿದ ಎಲಿಜಬೆತ್ಗೆ ಕಮಲಾ ಎಂಬ ಹೆಸರು ನೀಡಿ ವಾರ್ಧಾದ ಗಾಂಧೀಜಿ ಆಶ್ರಮದಲ್ಲಿ ಭಾರತೀಯ ಸಂಸ್ಕೃತಿ, ಸ್ವಾವಲಂಬನೆಗಳ ಬಗ್ಗೆ ತರಬೇತಿ ಕೊಡಿಸಿ ನಂತರ ವಿವಾಹವಾದರು. ಸ್ವಾತಂತ್ರ್ಯ ಯೋಧ, ಮಹಾನ್ ಸಂಘಟಕರಾಗಿದ್ದ ಡಾ.ನಾ.ಸು.ಹರ್ಡೀಕರ್ ಅವರು ಘಟಪ್ರಭಾ ಆರೋಗ್ಯಧಾಮದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಅವರಿಗಾಗಿ ಅಲ್ಲಿ ಒಂದು ಮನೆಯೂ ಇಲ್ಲದ್ದನ್ನು ನೋಡಿ, ಅವರಿಗೆ ತಿಳಿಯದಂತೆ ಒಂದು ಮನೆ ಕಟ್ಟಿಸಿಕೊಟ್ಟು 'ರಾಷ್ಟ್ರಕ್ಕೆ ಸಲ್ಲಿಸುತ್ತಿರುವ ನಿಷ್ಕಾಮ ಸೇವೆ ಸಲ್ಲಿಸುತ್ತಿರುವ ಮಹಾಚೇತನಕ್ಕೆ ಇದೊಂದು ಪುಟ್ಟ ಕಾಣಿಕೆ' ಎಂದು ವಿನೀತರಾಗಿ ಹೇಳಿ ಒಪ್ಪಿಸಿಕೊಳ್ಳಲು ಮನವಿ ಮಾಡಿದರು. ನಂತರ ಹರ್ಡೀಕರರು ನಿಂಬಕರರು ಕಟ್ಟಿಸಿಕೊಟ್ಟ ಮನೆಯಲ್ಲಿಯೇ ಕೊನೆಯವರೆಗೂ ಇದ್ದು ನಿಧನರಾದಾಗ ಆ ಆರೋಗ್ಯಧಾಮದ ಅಧ್ಯಕ್ಷಗಿರಿಯ ಜವಾಬ್ದಾರಿ ನಿಂಬಕರರ ಮೇಲೆ ಬಿತ್ತು. ಅವರು ಕೊನೆಯವರೆಗೂ ಅಲ್ಲಿಯೇ ವಾಸವಾಗಿದ್ದು ಅದರ ಉನ್ನತಿಗಾಗಿ ಶ್ರಮಿಸಿದರು.



- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ'.. 'ನಿಮ್ಮನ್ನು ಈರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ'; Kichcha Sudeepಗೆ ಪತ್ರ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: ಉಲ್ಟಾ ಹೊಡೆದ Falahari Maharaj, ಕ್ಷಮೆಯಾಚನೆ! video

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್: ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'; Video ವೈರಲ್!