ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಮಾಡದ ಕೆಲಸಕ್ಕೆ ಕೂಲಿ

ಈಚೆಗೆ, ಸರ್ಕಾರ ನಡೆಸುವ ಹಾಗೂ ಸರ್ಕಾರದ ನೆರವು ಪಡೆಯುವ ಸಂಸ್ಥೆಗಳು ನಡೆಸುವ ...

Rashmi Kasaragodu
Updated On : 15 Feb 2013, 9:42 am

ಈಚೆಗೆ, ಸರ್ಕಾರ ನಡೆಸುವ ಹಾಗೂ ಸರ್ಕಾರದ ನೆರವು ಪಡೆಯುವ ಸಂಸ್ಥೆಗಳು ನಡೆಸುವ ಪದವಿಪೂರ್ವ ಕಾಲೇಜುಗಳ ಅಧ್ಯಾಪಕರು ತಮ್ಮ ಬೇಡಿಕೆಗಳ ಈಡೇರಿಕೆಗೆ ಮುಷ್ಕರ ಹೂಡಿದರು. ಆ ಮುಷ್ಕರ ನಡೆದಿದ್ದು ಸಾಮಾನ್ಯ ದಿನಗಳಲ್ಲಿ ಅಲ್ಲ. ಪರೀಕ್ಷೆ, ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಸಮಯದಲ್ಲಿ. ಒಂದು ರೀತಿಯಲ್ಲಿ ಅದು ಸರ್ಕಾರದ ಕುತ್ತಿಗೆಯನ್ನೇ ಹಿಸುಕುವ ಪ್ರಯತ್ನ.
ಮೌಲ್ಯಮಾಪನದಲ್ಲಿ ವಿಳಂಬ. ಅನಂತರ ಸಿಇಟಿ ಮೂಲಕ ಅರ್ಹರಿಗೆ ಸೀಟುಗಳನ್ನು ಹಂಚುವ ಕೆಲಸದಲ್ಲೂ ವಿಳಂಬ. ಹಲವು ಹತ್ತು ಸಾವಿರ ವಿದ್ಯಾರ್ಥಿಗಳಿಗೆ, ಅವರ ಪಾಲಕ-ಪೋಷಕರಿಗೆ ಆತಂಕ. ಹೀಗೆ ಎಂಟು ದಿನಗಳ ಮುಷ್ಕರ ನಡೆದಿತ್ತು.
ಆಗ ಸರ್ಕಾರದ ಪರವಾಗಿ ಶಿಕ್ಷಕರನ್ನು ಸೂಕ್ತ ರೀತಿಯಲ್ಲಿ ಶಿಕ್ಷಿಸುವುದಾಗಿ ವೀರಾವೇಶದ ಮಾತಾಡಿದ್ದ ವಕ್ತಾರರು ಕೊನೆಗೆ ಪ್ರಕಟಿಸಿದ್ದು ಮುಷ್ಕರದ ಅವಧಿಗೆ ಶಿಕ್ಷಕರಿಗೆ ವೇತನ - ಭತ್ಯೆ ಕೊಡುವುದಿಲ್ಲ ಎಂದು. ಜನರೂ ಅದನ್ನು ನಂಬಿದರು.
ಆದರೆ ಕೆಲವು ಸಮಯ ಕಳೆದ ಅನಂತರ ಶಿಕ್ಷಕರ ಸಂಘಟನೆಗಳು ಹಾಗೂ ಆ ಓಟು ಬ್ಯಾಂಕಿನ ಮುಖಂಡರು ಸರ್ಕಾರದ ಮೇಲೆ ತಂದ ಒತ್ತಡಕ್ಕೆ ಮಣಿದ ಸರ್ಕಾರ ಎಂಟು ದಿನಗಳ ವೇತನವನ್ನು ಕೊಡಲು ನಿರ್ಧರಿಸಿತು. ಹಿಂದಿನ ವೀರಾವೇಶದ ಮಾತನ್ನು ಆಡಿದ ವಕ್ತಾರರು ನುಂಗಿಕೊಂಡರು. ಶಿಕ್ಷಕರ ಸಮುದಾಯಕ್ಕೆ ಅವರು ಮಾಡದೇ ಇದ್ದ ಕೆಲಸಕ್ಕೆ ನಾಲ್ಕು ಕೋಟಿ ರುಪಾಯಿಗಳು ಸಂದಾಯವಾಗಿದ್ದವು.
ಇದನ್ನು ಆಡಿಟ್ ವರದಿಯಲ್ಲಿ ನಮೂದಿಸದೇ ಹೋಗಿದ್ದರೆ, ಈ ವಿಚಾರವೇ ಜನ ಸಾಮಾನ್ಯರಿಗೆ ಗೊತ್ತಾಗುತ್ತಿರಲಿಲ್ಲ. ಸರ್ಕಾರದಲ್ಲಿ ಹೀಗೂ ಉಂಟೇ ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement