ಸೊಳ್ಳೆ, ಹೆಂಡತಿ ಮತ್ತು ಅಲಾರ್ಮಗಳ ಕಾಟವಿಲ್ಲದೇ ನಿಶ್ಚಿಂತವಾಗಿ ಮಲಗಬಹುದಾದ ಶಯ್ಯಾಸನ
ಇಲ್ಲಿನ ನಿದ್ರಾ ಭಂಗಿಗೆ ಶವಾಸನ ಎನ್ನಬಹುದು
ನಮ್ಮೆಲ್ಲರ ಪಯಣದ ಅಂತಿಮ ಗುರಿ ಈ ಗೋರಿ
ಇದನ್ನು ಕಟ್ಟಲೆಂದು ಬಳಸುವ ಬಂಡವಾಳವೆಲ್ಲ ಡೆಡ್ ಇನ್ವೆಷ್ಟ್‌ಮೆಂಟೇ
ಮಣ್ಣಲ್ಲಿ ಮಣ್ಣಾಗುವ ಸ್ಥಳ
ಶಾಶ್ವತ ಸಮಾಧಾನ ಸಿಗೋದು ಇಲ್ಲೊಂದೇ
ಸತ್ತವಗೆ ಸಮಾಧಿ ಕಟ್ಟುವುದಕ್ಕಿಂತ ಇರುವವರಿಗೆ ಮನೆ ಕಟ್ಟಿಸುವುದು ಲೇಸು
ಜೀವನದ ಪ್ರಶ್ನೆಗೆ ಅಂತಿಮ ಉತ್ತರ
ಯೋಗಶಾಸ್ತ್ರದ ಪ್ರಕಾರ ಇದೊಂದು ಸ್ಥಿತಿ. ಸಮಾಧಿ ಸ್ಥಿತಿಗೆ ತಲುಪಬಲ್ಲವ ಸಮಾಧಿಯಾಗಲು ಹೆದರಲಾರ
-ವಿಶ್ವನಾಥ ಸುಂಕಸಾಳ
vishwasunkasal@yahoo.com