ಕಚಗುಳಿ ಟ್ವೀಟ್ಸ್
ತನಿಖೆಗೆಂದು ಸಿಬಿಐ ತಂಡ ಇಟಲಿಗೆ ಪ್ರಯಾಣ ಬೆಳೆಸಲಿದೆಯಂತೆ. ನೇರವಾಗಿ 10 ಜನಪಥಕ್ಕೆ ಹೋಗಿದ್ದರೆ ಖರ್ಚು ಉಳಿಸಬಹುದಿತ್ತು!
-ಸುಬ್ರಮಣಿಯನ್ ಸ್ವಾಮಿ
ಸರ್ಕಾರ ನೇರ ನಗದು ವರ್ಗಾವಣೆ ಕಾರ್ಯಕ್ರಮ ಘೋಷಿಸಿದಾಗ, ಅದು ರಕ್ಷಣಾ ಗುತ್ತಿಗೆಗಳಿಗೂ ಅನ್ವಯಿಸುತ್ತೆ ಅಂತ ಯಾರೂ ಅಂದುಕೊಂಡಿರಲಿಲ್ಲ!
-ಮಿನಾಜ್ ಮರ್ಚೆಂಟ್
ಕಾಶ್ಮೀರ ಮತ್ತು ಹೆಂಡತಿ ನಡುವೆ ಇರುವ ಸಾಮ್ಯ ಏನು? ಎರಡೂ ತಲೆನೋವು ತಂದೊಡ್ಡಿರುವ ಸಮಸ್ಯೆಗಳೇ. ಆದರೆ ಪಕ್ಕದವ ಕಣ್ಣು ಹಾಕಿದರೆ ಸಿಟ್ಟು ಬರುತ್ತೆ!
-ಸಚಿನ್ ಗುಪ್ತ
ಪ್ರತಿ ಸರ್ಕಾರವೂ ಹಗರಣಗಳಿಗೆ ಹಿಂದಿನ ಸರ್ಕಾರವನ್ನೇ ಗುರಿ ಮಾಡುವುದು ನೋಡಿದರೆ ಬೋಫೋರ್ಸ್‌ಗೆ ಮೌಂಟ್‌ಬ್ಯಾಟನ್‌ನನ್ನೇ ದೂರಿಬಿಡಬಾರದೇಕೆ?
-ಸುಹೇಲ್ ಸೇಠ್