ಸೀರೆ ಅಂಗಡಿಯ ಮುಂದೆ ನಿಲ್ಲಿಸುವ ಹೆಣ್ಣು ಬೊಂಬೆಗೆ ಹುಡುಗ ಅದ್ಭುತವಾಗಿ ಸೀರೆಯ ಅಲಂಕಾರ ಮಾಡುತ್ತಾನೆ. ಈ ಕಲಾತ್ಮಕ ವಿದ್ಯೆ ಹೆಣ್ಣಿಂದ ಸಾಧ್ಯಾನಾ?
ಉಡಿಸೋದು ಗೊತ್ತಿರೋನಿಗೆ, ಬಿಚ್ಚೋದೂ ಸುಲಭ. ಇಂತಹ ವಿಷಯದಲ್ಲಿ ಹುಡುಗರು ಕಲಾವಿದರು ಬಿಡಿ!
ಎಂ.ಆರ್. ಪವನ್ ಕುಮಾರ್, ಸರೋವರ ಬಳ್ಳಾರಿ
ಬಾಣ ಭಟ್ರೇ, ಕೆಲವರಿಗೆ ಸತ್ತರೂ ಬುದ್ದಿ ಬರುವುದಿಲ್ಲ. ಅಂಥವರಿಗೆ ಬುದ್ದಿ ಬರಿಸುವುದು ಹೇಗೆ?
ಸತ್ತ ಮೇಲೆ ಬುದ್ದಿ ಬರುವುದು ಅಂದರೆ ಉಸಿರುನಿಂತ ಮೇಲೆ ಆ್ಯಂಬುಲೆನ್ಸ್ ಬಂದಂತೆ!
ಹರಳಹಳ್ಳಿ ಪುಟ್ಟರಾಜು, 9632838088
ಕಣ್ಣು ಸರಿಯಿದ್ದರೂ ಕನ್ಯೆಯರೇಕೆ ಕನ್ನಡಕ ಹಾಕಿಕೊಳ್ಳುತ್ತಾರೆ?
ಸೌಂದರ್ಯ ನೋಡಲು ಎರಡು ಕಣ್ಣು ಸಾಲದು ಎಂದು ಹೇಳಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರ ಪರಿಣಾಮವಿದು.
ಲಕ್ಕೂರು ಎಂ. ನಾಗರಾಜ, ಮಾಲೂರು 9900538954
ಬಡವರು ಬಯಸುವುದು ಮಾನಕ್ಕಾಗಿ ಆದರೆ ಶ್ರೀಮಂತರು ಬಯಸುವುದು ಏತಕ್ಕಾಗಿ?
ಅವರದ್ದು ಮಾನಕ್ಕಾಗಿ, ಇವರದ್ದು ಅವರಿಂದಲೇ ಸುಖ ಎಂಬ ಅನುಮಾನಕ್ಕಾಗಿ!
ರಮೇಶ ಭಟ್ ಆವರ್ಸೆ, ಮೈಸೂರು, 9164276058
ಪಂಚೆ ಕಟ್ಟೋಕ್ ಬರದಿದ್ದವರೆಲ್ಲಾ ಪಕ್ಷ ಕಟ್ಟೋಕೆ ಹೊರಟಿದ್ದಾರಲ್ಲಾ?
ಪಂಚೆ ಎಳೆದು ಕಿತ್ತುಹಾಕೋಕೆ ಬಂದ್ರೂ ಸಾಕು.
- ಬಾಣಭಟ್ಟ