ಗ್ರಾಹಕನ ಕಿಸೆಯ ಹಣ ಎಗರಿಸುವ ಬಲೆ
ಸರ್ಪ್ರೈಸ್ ಕೊಡುವ ಗುಣದ್ದು C price
ಬೆಳೆ ಬೆಳೆಯುವವನಿಗೆ ಸಿಗದ ಮರೀಚಿಕೆ ಇದು
ಗ್ರಾಹಕನ ತಲೆ ಮೇಲೆ ಬೀಳುವ ಏಟು-ಈ ರೇಟು
ವ್ಯಾಪಾರಿಯ ಸಂಪಾದನೆಗೊಂದು ಮರ- ಈ ದರ
ಬ್ಯಾಲೆ ನೃತ್ಯ ನೋಡಲು ಕೊಡುವ ಮೌಲ್ಯ
ನಮ್ಮ ಹಿಂದೆ ಜನ ಏನು ಆಡಿಕೊಳ್ಳುತ್ತಾರೋ ಅದೇ ನಮ್ಮ ನಿಜವಾದ ಬೆಲೆ
ತೂಕದಲ್ಲಿ ದೋಖಾ ಆಗಲು ವಿಪರೀತವಾಗಿ ಹೆಚ್ಚುತ್ತಿರುವ ಬೆಲೆಯೇ ಕಾರಣ
ಅತ್ಯಂತ ಬೆಲೆಬಾಳುವ ವಿಷಯಗಳಲ್ಲಿ ಬಾಳು ಕೂಡ ಒಂದು. ಅದನ್ನು ಹಾಳು ಮಾಡಿಕೊಳ್ಳಬಾರದು
ಬೆಲೆ ಕಟ್ಟಲಾಗದ್ದೆಲ್ಲ ಅಮೂಲ್ಯವೆನಿಸುವುದಾದರೆ, ಬೆಲೆಯು ಕೂಡ ಅಮೂಲ್ಯವೇ
ಕೊಳ್ಳುವುದಕ್ಕೆ ಹೆಚ್ಚು. ಕೊಡುವುದಾದರೆ ಕಡಿಮೆ
ನಿಮ್ಮ ಬೆಲೆ ಇರುವುದು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್‌ನಲ್ಲಿ
ಸತ್ತ ಮೇಲೆ ಎಲ್ಲರ ಬದುಕಿಗೂ ಬೆಲೆ ಬರುತ್ತೆ. ಬೆಲೆ ಬರಬೇಕೆಂದರೆ ಸಾಯಬೇಕು
ಬೆಲೆ ಬಾಳುವ ಮಾತು ಆಡಬೇಕೆಂದರೆ ಬೆಲೆಯ ಕುರಿತಾದ 'ಪೇಟೆ ಧಾರಣೆ'ಯ ಮಾತನ್ನೇ ಆಡಬಹುದು
-ವಿಶ್ವನಾಥ ಸುಂಕಸಾಳ
vishwasunkasal@yahoo.com