ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ನತದೃಷ್ಟೆಯರಿಗೊಂದು ಅಂತಃಕರಣದ ಅಳಲು

Lingaraj Badiger
Updated On : 17 Jan 2013, 2:51 am

ನತದೃಷ್ಟೆಯರಿಗೊಂದು ಅಂತಃಕರಣದ ಅಳಲು
    ಅಧಿಕಾರ ಗದ್ದುಗೆಯ ಅಮಲು
    ಕಪ್ಪು ಕಾಂಚಾಣದ ಅಮಲು
    ಮೈ ತುಂಬಿದಾ ಮದಿರೆಯಾ ಅಮಲು
    ಕಣ್ಣು ತುಂಬಿದಾ ಕಾಮದಾ ಅಮಲು
    ಈ ಪರಿಯ ಅಮಲುದಾರರೇ ತುಂಬಿಹ
    ಧೃತರಾಷ್ಟ್ರ ನಾ ಸಭೆಯಂತಾಗಿದೆ
    ಇಂದಿನ ಈ 'ಸಮಾಜ'

    ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರದ
    ಕಬಂಧ ಬಾಹುವಿನೊಳಗೆ ಸಿಲುಕಿ
    ಹೊಟ್ಟೆಯೊಳಗಿನ ಸಿಟ್ಟು, ರಟ್ಟೆಗೆ
    ತಾರದಂತ: ಬಲಹೀನರು ನಾವು

    ಕಾಮಾಂಧರ ಕಾಲಡಿಯಲಿ ನಲುಗಿದಾ
    ಹತಭಾಗಿನೀಯರೇ
    ಬಾಳ ಬನದಿ ನಳನಳಿಸಬೇಕಿದ್ದ ಹೂಗಳೇ
    ಕ್ಷಮಿಸಿ,
    ಕಲಕಿದರೂ ಅಂತಃಕರಣ
    ಅಯ್ಯೋ ಪಾಪ ಎನ್ನಬಹುದಷ್ಟೇ, ನಾವು
    ಗಾಣಗಿತ್ತಿಯಂತೆ.

    ಅಂದು ಪಾಂಚಾಲಿಯಾ ಆರ್ತತೆಗೆ
    ಓ ಗೊಟ್ಟ ಪರಮಾತ್ಮ
    ಮತ್ತೆ ಅವತರಿಸಿದಷ್ಟೇ
    ದುಷ್ಟರಿಗೆ ಶಿಕ್ಷೆ
    ನಿಮಗೆ ರಕ್ಷೆ.
-ಎಂ.ವಿ. ಸತ್ಯನಾರಾಯಣರಾವ್, ಮೈಸೂರು

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement