90 ಅಂಕ ಗಳಿಸಿದ ಹುಡುಗಿ ಹೇಳುವ ಮಾತು- 'ಇನ್ನೆರಡು ಮಾರ್ಕ್ಸ್ ಹೆಚ್ಚಿಗೆ ಕೊಟ್ಟಿದ್ದರೆ ಇವನ ಗಂಟೇನು ಹೋಗ್ತಿತ್ತು?'
35 ಅಂಕ ಗಳಿಸಿದ ಹುಡುಗನ ಉದ್ಗಾರ, 'ನನ್ ಪೇಪರ್ ಚೆಕ್ ಮಾಡಿದವ್ನು ದೇವ್ರೆ ಕಣ್ ಮಗಾ!'
ಶಿಕ್ಷಕ- 1869ರಲ್ಲಿ ಏನಾಯ್ತು ಹೇಳು?
ಫಂಟಾ- ಗಾಂಧೀಜಿಯವರ ಜನ್ಮವಾಯಿತು.
ಶಿಕ್ಷಕ- ವೆರಿಗುಡ್! ಕೋಲ್ಯ, ಈಗ ನೀನು ಹೇಳು; 1872ರಲ್ಲಿ ಏನಾಯ್ತು?
ಕೋಲ್ಯ- ಗಾಂಧೀಜಿಯವರಿಗೆ ಮೂರು ವರ್ಷಗಳು ತುಂಬಿದ್ದವು.
ಕೆಲ ವರ್ಷಗಳ ಹಿಂದಿನ ಮಾತು. ಗ್ರಂಥಾಲಯಗಳಿಗೆ ಭೇಟಿ ಕೊಟ್ಟರೆ ಅಲ್ಲೊಂದು ಮುದ್ದಾದ ಮಗುವಿನ ಫೋಟೊ ಇರುತ್ತಿತ್ತು. ತುಟಿ ಮೇಲೆ ಬೆರಳಿಟ್ಟು 'ಶ್..' ಎನ್ನುತ್ತಿರುವ ಭಂಗಿ. ಈಗ ಆ ಚಿತ್ರವನ್ನು ತೆಗೆದು ಆ ಜಾಗದಲ್ಲಿ ಮನಮೋಹನ ಸಿಂಗ್ ಅವರ ಭಾವಚಿತ್ರ ತೂಗಿಬಿಡಲಾಗಿದೆ.