ಸಂಪಾದಕೀಯ

ಟಿಪ್ಪು ಮಾಡಿರುವ ಘೋರ ತಪ್ಪೇನು?

ಕೇಂದ್ರ ವಿಶ್ವವಿದ್ಯಾಲಯದ ಹೆಸರನ್ನು ಟಿಪ್ಪು ವಿ.ವಿ.ಯಾಗಿ ಹೆಸರಿಸಲು ಹಿರಿಯ ಸಂಶೋಧಕ ಚಿ.ಮೂ. ರವರು ವಿರೋಧಪಡಿಸುತ್ತಿರುವುದು ಸಮಂಜಸವಲ್ಲ. ಇತಿಹಾಸ ಕೆದಕಿದಾಗ ಅನೇಕ ರಾಜರುಗಳಲ್ಲಿ ಅವರವರ ವ್ಯಕ್ತಿಗತ  ನ್ಯೂನತೆಗಳು ಇರಲು ಸಾಧ್ಯವಿದೆ ಎನಿಸುತ್ತದೆ. ಈಗಿನ ರಾಜಕಾರಣದಷ್ಟು ಹೊಲಸಿರಲಿಲ್ಲ. ಈಗ ಬರೀ ಜಾತಿ ರಾಜಕಾರಣ ನಡೆಯುತ್ತಿರುವುದು ಚಿ.ಮೂ. ರವರಿಗೆ ತಿಳಿದಿಲ್ಲವೇ? ಆಗಿನ ನಮ್ಮ ರಾಜರುಗಳ ನ್ಯೂನತೆಗಳನ್ನು ಅರಿತ ಯೂರೋಪಿಯನ್ನರು ನಮ್ಮ ದೇಶ ಲೂಟಿ ಮಾಡಲು ಕಾರಣವಾಯಿತೆ ವಿನಃ ಸ್ವಂತಃ ಅವರು ಬರಲು ಸಾಧ್ಯವಿಲ್ಲ. ನಮ್ಮ- ನಮ್ಮಲ್ಲೇ ತಿಕ್ಕಾಟವಾಗಿ ಮೂರನೆಯವನು ಲಾಭ ಪಡೆದಿರುವುದು ಇತಿಹಾಸ ತಾನೆ? ಮನುಜನೆಂದ ಮೇಲೆ ಸಾಧಾರಣ ತಪ್ಪು ಎಸಗುವುದು ಸಹಜ. ಹಾಗಂತ ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ಅಳೆಯಲು ಸಾಧ್ಯವೇ?! ಸಣ್ಣ ತಪ್ಪು ಹಗರಣವಾಗಬಾರದು! ಟಿಪ್ಪು ಕೆಲವರನ್ನು ದ್ವೇಷಿಸುವುದಾದರೆ ಬ್ರಿಟಿಷರ ವಿರುದ್ಧ ಹೋರಾಡಿ ತನ್ನ ಮಕ್ಕಳನ್ನೇ ರಣರಂಗವಾಗಿ ತ್ಯಾಗ ಮಾಡಿ, ಸಾಯುತ್ತಿರಲಿಲ್ಲ. ಎಲ್ಲವೂ ಕನ್ನಡ ನಾಡಿಗಾಗಿ, ಈ ಮಣ್ಣಿಗಾಗಿ, ಎಲ್ಲರ ಹಿತದಿಂದ ಸರಿ! ಇಲ್ಲದಿದ್ದಲ್ಲಿ 'ಮೈಸೂರು ಹುಲಿ' ಬಿರುದೇಕೆ ಬರುತ್ತಿತ್ತು? ಟರ್ಕಿ ಸ್ಥಾನದಿಂದ ಬಂದಂತಹ ಕೆಲವು ಮುಸ್ಲಿಂ ದೊರೆಗಳು ದೇಶವನ್ನು ಕೊಳ್ಳೆ ಹೊಡೆದಿದ್ದಾರೆ ಎನ್ನಬಹುಹು! ಹಾಗಂತ ಮುಸ್ಲಿಂರೆಲ್ಲ ಕೆಟ್ಟ ದೊರೆಗಳೆಂದು ಬಿಂಬಿಸುವುದು ತರವಲ್ಲ. ಇದು ಮೂಲಭೂತ ವಾದಿಗಳಾಗಲು ಕಾರಣವಿರಬಹುದೆನ್ನಲಾಗುವುದು. ಯಾರೋ ಮಾಡಿದ ತಪ್ಪಿಗಾಗಿ ಮುಸ್ಲಿಂ ಸಂಕುಲಕ್ಕೆ ಕೊಂಡಿ ಹಾಕುವುದು ಸರಿಯಲ್ಲ.
ಹೈದರಾಲಿ ಚಿತ್ರದುರ್ಗದ ಕೋಟೆಗೆ ಮುತ್ತಿಗೆ ಹಾಕಲು ದಿವಾನ್ ಪೂರ್ಣಯ್ಯ, ಕಳ್ಳಿಬೇಲೆಮನೆ ನರಸಪ್ಪಯ್ಯ (ಚಿತ್ರದುರ್ಗದ ಮಂತ್ರಿ) ದಾಯಾದಿ ದೊಡ್ಡ ಮದಕರಿ ನಾಯಕ, ಇನ್ನಿತರರು ಕಾರಣವೆಂಬುದು  ಜನಪದ (ಐತಿಹ್ಯ) ಮಾತಾಗಿದೆ. ಮುಸ್ಲಿಂರನ್ನು ಕಳ್ಳರಂತೆ ಬಿಂಬಿಸುವುದು ಸರಿಯೇ?! ಮುಸ್ಲಿಂರು ಸಹ ಇದೇ ಭರತ ಭುವಿಯಲ್ಲಿ ಮಣ್ಣಾಗುವರೆ ಹೊರತು ಬೇರೆಲ್ಲಿ ಹೇಳಿ!
-ಬಿ. ಮೊಹಿದ್ದೀನ್ ಖಾನ್, ಚಿತ್ರದುರ್ಗ.

ಪಕ್ಷಾಂತರಿಗಳೋ ಪಕ್ಷಾಂತರಿಗಳು!
ಕಳ್ಳರು ಸುಳ್ಳರು ಖದೀಮರು- ಯಾರು ಹಿತವರು ನಮಗೆ ಈ ಮೂವರಲ್ಲಿ ಎಂಬ ಪ್ರಶ್ನೆ ಮತದಾರನಲ್ಲಿ ಈಗ ಉದ್ಭವವಾಗುತ್ತಿದೆ. ಯಾರನ್ನೂ ಆರಿಸಲಾಗದೇ ಯಾರನ್ನಾದರೂ ಆರಿಸಲೇ ಬೇಕಾದ ಅನಿವಾರ್ಯತೆಯಲ್ಲಿ ಮತದಾರನೀಗ ಕಂಗೆಟ್ಟಿದ್ದಾನೆ. ಬಿಸಿಲಿನ ಬೇಗೆಯನ್ನು ಮೀರಿದ ಮಾನಸಿಕ ಬೇಗೆಯಿಂದ ಬಳಲುತ್ತಿದ್ದಾನೆ. ದೇಶ, ಭಾಷೆ, ಪಕ್ಷ, ನೀತಿ, ನಿಷ್ಠೆ ಯಾರಿಗೂ ಬೇಡ. ಎಲ್ಲರಿಗೂ ಬೇಕಾಗಿರುವುದು ಅಧಿಕಾರ ಮಾತ್ರ. ಅಧಿಕಾರಕ್ಕಾಗಿ ಇನ್ನಿಲ್ಲದ ಸಾಹಸ ಮಾಡುತ್ತಿದ್ದಾರೆ. ನಮ್ಮ ರಾಜಕಾರಣಿಗಳಲ್ಲಿ ಬಹುಪಾಲು ಪಕ್ಷಾಂತರಿಗಳು. ಪ್ರತಿಯೊಬ್ಬರೂ ಹುಡುಕುವುದು ಜೇನಿರುವ ಪುಷ್ಪವನ್ನು. ಅದು ಯಾರ ಮನೆಯದ್ದಾದರೇನಂತೆ, ಯಾರ ಒಡೆತನದಲ್ಲಿದ್ದರೆನಂತೆ, ಸಕ್ಕರೆ ಸಿಕ್ಕರೆ ಸಾಕಲ್ಲವೇ? ಪ್ರಸ್ತುತ ಪಕ್ಷಾಂತರ ಪ್ರಕರಣಗಳನ್ನು ನೋಡಿ ಯಾರಿಗಾದರೂ ಹೇಸಿಗೆ ಅನಿಸುತ್ತಿಲ್ಲವೇ? ಇವತ್ತು ಅಧಿಕಾರದ ಆಸೆಯಿಂದ ಪಕ್ಷವನ್ನು ಬಿಡುವವರು ನಾಳೆ ಇನ್ಯಾವುದೋ ಆಮಿಷಕ್ಕೆ ಒಳಗಾಗಿ ದೇಶವನ್ನೇ ಒತ್ತೇ ಇಡಲಾರರು ಎಂಬುದರ ಬಗ್ಗೆ ನಂಬಿಕೆ ಏನು? ಇಂತಹ ಅಯೋಗ್ಯ ರಾಜಕಾರಣಿಗಳಿಗೆ ನಾವು ಮತ ಹಾಕಬೇಕೇ?
-ನಾಗರಾಜ ಎ. ಆರ್. ಕೊಂಡಜ್ಜಿ, ದಾವಣಗೆರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?