ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Parashurama
Updated On : 27 Jan 2013, 11:23 am

ಮಂಡ್ಯ ಜಿಲ್ಲೆ ಪಾಂಡವಪುರದಿಂದ ಹರಳಹಳ್ಳಿ ಪುಟ್ಟರಾಜು ಅವರು ಬರೆಯುತ್ತಾರೆ- 'ಜ.21ರ ಪತ್ರಿಕೆಯ ಪುಟ 4ರಲ್ಲಿ ಮಂಡ್ಯ ಸುದ್ದಿ ವಿಭಾಗದಲ್ಲಿ 'ಶ್ರೀರಂಗಪಟ್ಟಣ ತಹಸೀಲ್ದಾರರಿಂದ ಪೋಲಿಯೋ ಲಸಿಕೆ' ಎಂಬ ಶೀರ್ಷಿಕೆಯಲ್ಲಿ ವರದಿಯೊಂದು ಪ್ರಕಟವಾಗಿದೆ. ಈ ವರದಿಗೆ ಪೂರಕವಾಗಿ ಫೋಟೊ ಕೂಡ ಪ್ರಕಟವಾಗಿದ್ದು, ಅದರಡಿ 'ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ತಹಸೀಲ್ದಾರ್ ಅರುಳ್‌ಕುಮಾರ್ ಪುತ್ರ ಲೌಕಿಕ್ ಅಶ್ವತ್ಥ್‌ಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು' ಎಂಬ ವಾಕ್ಯ ಕೂಡ ಇದೆ. ಇದರಲ್ಲಿ ತಪ್ಪಾಗಿರುವುದೇನೆಂದರೆ 'ಶ್ರೀರಂಗಪಟ್ಟಣದಲ್ಲಿ ತಹಸೀಲ್ದಾರರಿಂದ ಪೋಲಿಯೋ ಲಸಿಕೆ' ಎಂಬ ಶೀರ್ಷಿಕೆ ವರದಿಗೆ, ಶಾಸಕ ರಮೇಶ್ ಬಂಡಿಸಿದ್ದೇಗೌಡರು ಪೋಲಿಯೋ ಲಸಿಕೆ ಬಳಸಿದ್ದರ ಔಚಿತ್ಯವೇನು?'
'ಅಲ್ಲದೇ ತಾವು ಪ್ರಕಟಿಸಿದ ಆ ವರದಿಯಲ್ಲೆಲ್ಲೂ ತಹಸೀಲ್ದಾರ್ ಪೋಲಿಯೋ ಲಸಿಕೆ ಹಾಕಿದರೆಂಬ ಸುದ್ದಿಯಿಲ್ಲ. ಬದಲಾಗಿ ಉಪಸ್ಥಿತರಿದ್ದರು ಎಂಬುದಷ್ಟೇ ಇದೆ. ಹೀಗಾಗಿ ಆ ವರದಿಗೆ 'ಶ್ರೀರಂಗಪಟ್ಟಣದಲ್ಲಿ ತಹಸೀಲ್ದಾರರಿಂದ ಪೋಲಿಯೋ ಲಸಿಕೆ' ಎಂಬ ಶೀರ್ಷಿಕೆಯ ಬದಲಾಗಿ 'ಶಾಸಕ ಬಂಡಿಸಿದ್ದೇಗೌಡರಿಂದ ಪೋಲಿಯೋ ಲಸಿಕೆಗೆ ಚಾಲನೆ' ಎಂಬ ಶೀರ್ಷಿಕೆ ಕೊಟ್ಟಿದ್ದರೆ ಹೆಚ್ಚು ಸೂಕ್ತ ಎಂಬುದು ನನ್ನ ಅನಿಸಿಕೆ' ಎಂದಿದ್ದಾರೆ.
ಬೆಂಗಳೂರಿನ ಟಿ. ದಾಸರಹಳ್ಳಿಯಿಂದ ರಾಜೀವ್ ಪಟವರ್ಧನ್ ಅವರು ಬರೆಯುತ್ತಾರೆ- 'ಜ.26ರಂದು ಪತ್ರಿಕೆಯ ಮುಖಪುಟದಲ್ಲಿ 'ಜಗತ್ತಿಗೆ ತಿಳಿಯದೇ ಹೋದ ಅಣು ಹಾದಿ' ಮುಂದುವರಿದ ಭಾಗವಾದ ಪುಟ 13ರಲ್ಲಿ '2006ನೇ ಇಸವಿಯದು.
ಅಬ್ದುಲ್ ಕಲಾಂ ಅವರಿಗೆ ಅಣು ಪರೀಕ್ಷೆ ನಡೆಸುವಂತೆ ಸೂಚಿಸಿದ್ದೇ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್‌' ಎಂದಿದೆ. ಆದರೆ ಪಿ.ವಿ. ನರಸಿಂಹ ರಾವ್ 2004ರಲ್ಲಿ ನಿಧನರಾಗಿದ್ದರು. ಬಹುಶಃ ಅದು 2006 ಆಲ್ಲ. 1996 ಎಂದಿರಬೇಕಿತ್ತಲ್ಲವೇ? ಹಾಗೆಯೇ ಅದೇ ವರದಿಯಲ್ಲಿ 'ದಾರಿ ತಪ್ಪಿದ್ದು ಹೇಗೆ?' ಉಪವರದಿಯಲ್ಲಿ '2008ರ ಮೇ 11ಕ್ಕೆ ಪರೀಕ್ಷೆಯ ದಿನ ನಿಗದಿಯಾಗಿತ್ತು' ಎಂದಿದೆ. ಆದರೆ ಅದು 2008 ಅಲ್ಲ, ಬದಲಾಗಿ 1998 ಮೇ 11 ಅಲ್ಲವೇ?'
'ಅದೇ ವರದಿಯಲ್ಲಿ ಕಲಾಂ ಅವರು 'ಮೇ 10ರಂದು ಅತ್ತ ಚಾಂದೀಪುರ ಪರೀಕ್ಷಾರ್ಥ ಕೇಂದ್ರದಲ್ಲಿ 12 ತ್ರಿಶೂಲ್‌ಗಳನ್ನು ಉಡಾವಣೆ ಮಾಡಲಾಗಿತ್ತು' ಎಂದಿದ್ದಾರೆಂದು ವರದಿ ಮಾಡಿದ್ದೀರಿ. ಆದರೆ ಚಾಂದೀಪುರ ಪರೀಕ್ಷಾ ಕೇಂದ್ರವಿರುವುದು ಓರಿಸ್ಸಾದ ಬಾಲಾಸೋರ್ ಜಿಲ್ಲೆಯಲ್ಲಿ. ಆದರೆ ಪೋಖ್ರಾನ್ ಪರೀಕ್ಷೆ ನಡೆದಿದ್ದು 'ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ'. ವರದಿಯಲ್ಲಿ ಸಾಕಷ್ಟು ಗೊಂದಲಗಳಿವೆ ಅನ್ನಿಸುತ್ತದೆ' ಎಂದಿದ್ದಾರೆ.
ಪೋಖ್ರಾನ್ ಪರೀಕ್ಷೆ ನಡೆದಿದ್ದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಎಂಬುದೂ ನಿಜ. ಹಾಗೆಯೇ ಒಡಿಶ್ಶಾದ ಚಾಂದೀಪುರದಲ್ಲಿ ತ್ರಿಶೂಲ್ ಕ್ಷಿಪಣಿ ಉಡಾವಣೆ ಮಾಡಿದ್ದೂ ನಿಜ. ಪ್ರಪಂಚದ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಹೀಗೆ ಮಾಡಲಾಗಿತ್ತು. ಆದ್ದರಿಂದ ಇದರಲ್ಲಿ ತಪ್ಪಾಗಿಲ್ಲ. ಇಸವಿಯಲ್ಲಿ ತಪ್ಪಾಗಿರುವುದು ನಿಜ.

- ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments