ಸಂಪಾದಕೀಯ

ಐಎಫ್‌ಎಸ್- ಐಪಿಎಸ್ ಕತೆ

ಭಾರತೀಯ ಆಡಳಿತ ಸೇವೆ, ಅರಣ್ಯ ಸೇವೆಯಂತಹ ರಾಷ್ಟ್ರೀಯ ಸೇವಾ ವ್ಯವಸ್ಥೆ, ಹಿಂದಿನ ಇಂಡಿಯನ್ ಸಿವಿಲ್ ಸರ್ವಿಸ್‌ನ ಉಕ್ಕಿನ ಚೌಕಟ್ಟಿನ ಉತ್ತರಾಧಿಕಾರಿಯ ಸ್ವರೂಪದಲ್ಲಿ ಕೆಲಸ ಮಾಡುವ ವ್ಯವಸ್ಥೆಯಾಗಬೇಕಾಗಿತ್ತು.
ಆದರೆ ಸ್ವತಂತ್ರ ಭಾರತದ ಆರು ದಶಕಗಳಲ್ಲಿ ಎಲ್ಲ ಅಖಿಲ ಭಾರತ ಸೇವೆಗಳೂ ರಾಜಕೀಯ ಹಾಗೂ ಭ್ರಷ್ಟಾಚಾರದ ಪ್ರಭಾವದಿಂದ ಸೊರಗಿರುವುದು ನಿಜ.
ಕನ್ನಡಪ್ರಭದ ವಿಶೇಷ ವರದಿಯಲ್ಲಿ ಪ್ರಕಟವಾಗಿರುವಂತೆ, ರಾಜ್ಯದಲ್ಲಿ ಅನೇಕ ಹಿರಿಯ ಅಧಿಕಾರಿಗಳು, ಅರಣ್ಯ ಸೇವೆಗೆಂದೇ ಆಯ್ಕೆಯಾಗಿದ್ದರೂ, ಯಾವುದೋ ಬೇರೆ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಸ್ಥಿತಿ ನಿಜಕ್ಕೂ ಸಹನೀಯವಲ್ಲ.
ಹಿರಿಯ, ಅನುಭವಿ ಅಧಿಕಾರಿಗಳನ್ನು ಬೇರೆ ಕಡೆಗಳಿಗೆ ಹಾಕಿ, ಅದೇ ಸ್ಥಾನಕ್ಕೆ ಅವರ ಅಧೀನ ಅಧಿಕಾರಿಗಳನ್ನು ನೇಮಕ ಮಾಡಿರುವ ಪ್ರಕರಣಗಳೂ ಇವೆ.
ಕೆಲವು ಸಂದರ್ಭಗಳಲ್ಲಿ ಹಿರಿಯ ಅಧಿಕಾರಿಗಳ ಕೌಟುಂಬಿಕ, ವೈಯಕ್ತಿಕ ಕಾರಣಗಳಿಂದಾಗಿ ಇದು ಅನಿವಾರ್ಯವಾಗಿದ್ದರೂ, ಬಹುತೇಕ ಪ್ರಕರಣಗಳಲ್ಲಿ ಇಲ್ಲಿ ಆಡಳಿತ ವ್ಯವಸ್ಥೆಯ ದಕ್ಷತೆಗಿಂತ ಇತರ ವಿಚಾರಗಳೇ ಪ್ರಮುಖವಾಗಿರುವುದು ಸ್ಪಷ್ಟ. ಈಗಾಗಲೇ ಈ ವಿವಾದ ನ್ಯಾಯಾಲಯದ ಮುಂದಿದೆ.
ಐಎಫ್‌ಎಸ್‌ನಂತೆಯೇ ಐಪಿಎಸ್ ಕೂಡಾ ನರಳಿರುವುದೂ ನಿಜ. ಅನೇಕ ದಕ್ಷ, ಪ್ರಾಮಾಣಿಕ, ಹಿರಿಯ ಐಪಿಎಸ್ ಅಧಿಕಾರಿಗಳು, ವಾರ್ತಾ ಇಲಾಖೆಯ ಮುಖ್ಯಸ್ಥರ ಕೆಲಸವನ್ನು ಮಾಡಿರುವುದೂ ಉಂಟು. ಈ ಪರಿಸ್ಥಿತಿ ಬದಲಾಗಲೇಬೇಕು. ಅದಕ್ಕೆ ಅತ್ಯುನ್ನತ ಮಟ್ಟದ ನ್ಯಾಯಾಂಗದ ಆದೇಶವೇ ಬೇಕಾಗಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಕೇರಳಂ: ಮಿನಿ ಕೂಪರ್ ಕಾರು ಅಪಘಾತದಲ್ಲಿ ಮೂವರ ಸಾವು, ತಡರಾತ್ರಿಯಲ್ಲಿ ಹಿಂದೂ ಯುವತಿಯರು ಹೊರಗೆ ಹೋಗಿದ್ಯಾಕೆ? ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ