ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಜವಾಬ್ದಾರಿ ಸ್ಥಾನದಲ್ಲಿರುವವರು ಹೀಗೆ ಮಾಡಿದರೆ?

Parashurama
Updated On : 28 Jan 2013, 11:24 am

ಚಂಡಮಾರುತ ಪೀಡಿತರ ಹಣ 'ಸಂತ್ರಸ್ತ', ಒರಿಸ್ಸಾ ಚಂಡಮಾರುತ ಪೀಡಿತರಿಗೆ ಸಂಗ್ರಹಿಸಿದ್ದ 17 ಲಕ್ಷ 13 ವರ್ಷಗಳಾದರೂ ತಲುಪಿಲ್ಲ. ಕ.ಪ್ರ. ದಿನಾಂಕ 23.1.13. ಈ ಶೀರ್ಷಿಕೆಯ ವರದಿಯನ್ನು ಓದಿದ ನಂತರ ಒಂದು ರೀತಿ ಆಘಾತವಾಯಿತು. ಒಂದು ಜವಾಬ್ದಾರಿಯುತ ಸಂಘಟನೆಯಾದ "ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಂಪ್ಲಾಯೀಸ್ ಯೂನಿಯನ್‌" ತನ್ನ ಸದಸ್ಯರಿಂದ ಒರಿಸ್ಸಾ ಚಂಡಮಾರುತಕ್ಕೆ ಸಂಗ್ರಹಿಸಿದ್ದ ಸದಸ್ಯರ ಒಂದು ದಿನದ ಪಗಾರವನ್ನು 13 ವರ್ಷಗಳಾದರೂ ಇನ್ನೂ ಸಂಬಂಧಪಟ್ಟವರಿಗೆ ತಲುಪಿಸಿಲ್ಲವೆಂದರೆ ಇದಕ್ಕಿಂತ ಬೇಜವಾಬ್ದಾರಿ ಮತ್ತು ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ. ಕಳೆದ 13 ವರ್ಷಗಳಲ್ಲಿ ಕೆಲವು ಸದಸ್ಯರು ವಿ.ಆರ್.ಎಸ್. ಪಡೆದುಕೊಂಡಿದ್ದಾರೆ, ಕೆಲವರು ನಿವೃತ್ತರಾಗಿದ್ದಾರೆ ಮತ್ತು ಕೆಲವರು ಅಧಿಕಾರಿಗಳಾಗಿ
ಭಡ್ತಿ ಹೊಂದಿದ್ದಾರೆ. ಈ ಎಲ್ಲ ಸದಸ್ಯರು ತನ್ನ ಸಂಘಟನೆಯ ಮೇಲೆ ನಂಬಿಕೆಯಿಟ್ಟು ಒಂದು ದಿನದ ಪಗಾರವನ್ನು ಒರಿಸ್ಸಾ ಚಂಡಮಾರುತ ಸಂತ್ರಸ್ತಪೀಡಿತರಿಗೆ, ಸಂಘಟನೆಯ ಮೇಲೆ ನಂಬಿಕೆಯಿಟ್ಟು, ಸಂಘಕ್ಕೆ ನೀಡಿದಾಗ ತಾನೂ ಸಂತ್ರಸ್ತರಿಗೆ ಕಿಂಚಿತ್ ಸಹಾಯ ಮಾಡಿದ್ದೇವೆ ಎನ್ನುವ ನಂಬಿಕೆಯಿತ್ತು. ಆದರೆ ನೌಕರರ ಸಂಘಟನೆಯ ಪದಾಧಿಕಾರಿಗಳು, ವಂತಿಗೆಯನ್ನು ಸಂಬಂಧಪಟ್ಟವರಿಗೆ ತಲುಪಿಸದೆ ನಂಬಿಕೆ ದ್ರೋಹ ಮಾಡಿದ್ದಾರೆ. ಈ ನಂಬಿಕೆ ದ್ರೋಹಕ್ಕೆ ಪದಾಧಿಕಾರಿಗಳು ಯಾವ ರೀತಿ ಸಮಜಾಯಿಷಿ ಕೊಡಲು ಸಾಧ್ಯವಿಲ್ಲ. ಏಕೆಂದರೆ 13 ವರ್ಷ ಕಡಿಮೆ ಸಮಯದಲ್ಲಿ, ಯಾವ ರೀತಿಯ ಸಮಜಾಯಿಷಿ ಕೊಟ್ಟರೂ ಯಾರೂ ನಂಬುವುದಿಲ್ಲ. ಪದಾಧಿಕಾರಿಗಳ ಉದ್ದೇಶವೇನಿದೆ ಎಂದು ಯಾರಿಗೂ ಗೊತ್ತಿಲ್ಲ. ಆದರೆ ಇದೊಂದು ಬೇಜವಾಬ್ದಾರಿತನದ ಪರಮಾವಧಿ ಮತ್ತು ನಂಬಿಕೆದ್ರೋಹವೆಂದರೂ ತಪ್ಪಾರಾಗಲಾರದು. ಸಂಗ್ರಹಿಸಿದ 17 ಲಕ್ಷ ಹಣ ಅವರದೇ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದರೂ ಇಟ್ಟಿರಬಹುದು ಅದು 13 ವರ್ಷದ ನಂತರ ಎರಡರಷ್ಟಾಗುತ್ತಿತ್ತು (ಅಂದರೆ 34ಲಕ್ಷವಾಗಬೇಕು). ತಮ್ಮ ವರದಿಯಲ್ಲಿ ಪ್ರಸ್ತಾಪಿಸಿದಂತೆ, ಈಗ ಒರಿಸ್ಸಾ ಸರ್ಕಾರ ಈ ನಿಧಿಯನ್ನು ಸ್ವೀಕರಿಸುವುದು ಅನುಮಾನವಾದ್ದರಿಂದ,  
ಈ ಹಣವನ್ನು ನಮ್ಮ ರಾಜ್ಯದ ಮುಖ್ಯಮಂತ್ರಿಗಳ ಪರಿಹಾರನಿಧಿಗೆ ನೀಡಬೇಕು, ಹಾಗೆಯೇ ನೌಕರರ ವೇತನದಿಂದ ಒಂದು ದಿನದ ವೇತನವನ್ನು ಪಟಾಯಿಸಿ ನೌಕರರ ಸಂಘದ ಖಾತೆಗೆ ವರ್ಗಾಯಿಸಿದ ಆಡಳಿತ ಮಂಡಳಿಯವರೂ ಕೂಡ ಈ ಕಡೆ ಗಮನ ಹರಿಸಿಲ್ಲವೆಂಬುದು ಇಲ್ಲಿ ಗಮನಾರ್ಹ. ಆಡಳಿತ ಮಂಡಳಿ ತಕ್ಷಣ ಇತ್ತ ಕಡೆ ಗಮನ ಹರಿಸಿ ಇದರ ಬಗ್ಗೆ ಸಂಘದಿಂದ ವಿವರಣೆಯನ್ನು ಪಡೆಯಬೇಕು ಮತ್ತು ತನ್ನ ನೌಕರರ ಹಿತವನ್ನು ಕಾಯಬೇಕು.
-ಬ್ಯಾಂಕ್ ಶಿವಕುಮಾರ್, ಮೈಸೂರು

ಸೂಕ್ಷ್ಮ ತರಂಗ ಕೇಂದ್ರದ ಕಾರ್ಯಾರಂಭ ಯಾವಾಗ?
ಹಿರಿಯೂರು ತಾಲೂಕ್ ಮದ್ದಿಹಳ್ಳಿ ಗ್ರಾಮದಲ್ಲಿ 10 ವರ್ಷಗಳ ಹಿಂದೆ ನಿರ್ಮಿಸಲಾದ ಸೂಕ್ಷ್ಮ ತರಂಗ ಕೇಂದ್ರ ಕಾರ್ಯಾರಂಭ ಮಾಡದೇ ಇದುವರೆಗೆ ಬರೀ ಕುರಿ, ದನಗಳ ಆವಾಸ ಸ್ಥಾನವಾಗಿ ಬದಲಾಗಿದೆ. ಕಾರ್ಯಾರಂಭವಾಗದಿದ್ದರೆ ಇನ್ನು ಕೆಲವೇ ದಿನಗಳಲ್ಲಿ ಕಟ್ಟಡ ಬಿದ್ದು ಹೋಗುತ್ತದೆ. ಸುಮಾರು ವರ್ಷಗಳಿಂದ ಲಕ್ಷಾಂತಾರ  ರುಪಾಯಿ ಖರ್ಚು ಮಾಡಿ ಕಟ್ಟಿದ ಕಟ್ಟಡ  ಬಿದ್ದು ಹೋಗುವ ಸ್ಥಿತಿ ಬಂದರೂ, ದೂರ ಸಂಪರ್ಕ ಇಲಾಖೆಯವರು ಇತ್ತ ತಿರುಗಿ ನೋಡದೇ ಇರುವುದು ಗ್ರಾಮಸ್ಥರಲ್ಲಿ ಬೇಸರತರಿಸಿದೆ. ದಯಮಾಡಿ ದೂರ ಸಂಪರ್ಕ ಇಲಾಖೆ ಇತ್ತ ಕಣ್ತೆರೆದು ನೋಡಬೇಕೆಂದು ಕೇಳಿಕೊಳ್ಳುತ್ತೇವೆ.
-ಎಂ.ಪರಮೇಶ್ವರ, ಮದ್ದಿಹಳ್ಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments