ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಅಂಕಿ- ಅಂಶಗಳ ಗೊಂದಲ

Vishwanath S
Updated On : 1 Jul 2013, 11:20 am

ಉತ್ತರಾಖಂಡದ ಜಲಪ್ರಳಯದಲ್ಲಿ ಸತ್ತವರ, ಅಳಿದುಳಿದಿರುವ ಸಂತ್ರಸ್ತರ ಸಂಖ್ಯೆ ಕುರಿತಂತೆ ಈಗ ನಡೆಯುತ್ತಿರುವ ಚರ್ಚೆ ವೃಥಾ-ವ್ಯರ್ಥ ಚರ್ಚೆಯಷ್ಟೇ. ಅದರಿಂದ ಯಾವ ಪ್ರಯೋಜನವೂ ಇಲ್ಲ. ಅಲ್ಲಿನ ಮುಖ್ಯಮಂತ್ರಿ ವಿಜಯ ಬಹುಗುಣ ಅವರ ಪ್ರಕಾರ ಸತ್ತವರ ಸಂಖ್ಯೆ ಸಾವಿರವನ್ನು ಮೀರಲಿಕ್ಕಿಲ್ಲ. ವಿಧಾನ ಸಭೆಯ ಸ್ಪೀಕರ್ ಹತ್ತು ಸಾವಿರದ ಅಂದಾಜನ್ನು ಪ್ರಕಟಿಸಿದ್ದಾರೆ. ರಾಜ್ಯದ ವಿಪತ್ತು ಪರಿಹಾರ ಆಯೋಗದ ಅಂದಾಜಿನಂತೆ ಆ ಸಂಖ್ಯೆ ಹತ್ತು ಸಾವಿರವಾಗಬಹುದು.
ಈಗ ನೆರೆ ಕಡಿಮೆಯಾಗಿ, ರಕ್ಷಣಾ ದಳಗಳ ಓಡಾಟ ಸಾಧ್ಯವಾಗಿರುವುದರಿಂದ, ಎಲ್ಲ ನೆರವು ಕೇಂದ್ರಗಳ ಮಾಹಿತಿಯೂ ಪೂರ್ಣವಾಗಿ ಸಿಕ್ಕ ಅನಂತರ ಪ್ರಾಣ ಹಾನಿಯ ಪ್ರಮಾಣವನ್ನು ಅಂದಾಜು ಮಾಡುವುದು ಸಾಧ್ಯ. ಭಾನುವಾರದ ಒಂದು ಸಂದರ್ಶನದಲ್ಲಿ ಮುಖ್ಯಮಂತ್ರಿ ವಿಜಯ ಅಂತಿಮವಾಗಿ ಈ ಅನಾಹುತದಲ್ಲಿ ಸತ್ತವರ, ನಾಪತ್ತೆಯಾದವರ ಸಂಖ್ಯೆ ಕರಾರುವಾಕ್ಕಾಗಿ ಗೊತ್ತಾಗುವುದೇ ಇಲ್ಲ.
ಆ ಸಮಯದಲ್ಲಿ ಉತ್ತರಾಖಂಡಕ್ಕೆ ಇತರ ರಾಜ್ಯಗಳಿಂದ ಎಷ್ಟು ಮಂದಿ ಯಾತ್ರಾರ್ಥಿಗಳು, ಪ್ರವಾಸಿಗರು ಹೋಗಿದ್ದರು ಎನ್ನುವ ವಿವರ ಸಿಗುವುದೇ ಇಲ್ಲ. ಉತ್ತರಾಖಂಡ ಹಾಗೂ ಕೇಂದ್ರ ಸರ್ಕಾರ ಸಂತ್ರಸ್ತರಿಗೆ, ಸತ್ತವರ ಕುಟುಂಬಗಳಿಗೆ ನೀಡಲು ಒಪ್ಪಿರುವ ಪರಿಹಾರದ  ಮೊತ್ತದ ವಿತರಣೆಯಲ್ಲಿ ಉದಾರವಾಗಿಯೇ ವರ್ತಿಸಿರುವುದು ಸಮಾಧಾನದ ವಿಷಯ. ಯಾರಾದರೂ ಮೂರು ತಿಂಗಳ ಅನಂತರವೂ ನಾಪತ್ತೆಯಾದವರು ಪಟ್ಟಿಯಲ್ಲೇ ಉಳಿದುಕೊಂಡರೆ, ಅವರ ಬಂಧುಗಳಿಗೂ ಪರಿಹಾರ ಲಭ್ಯವಾಗುವ ನೀತಿಯೂ ಒಳ್ಳೆಯದೇ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement