ಪ್ರೇಮಿಗಳು ಅರಮನೆಗಿಂತ ಸೆರೆಮನೆ ಹೆಚ್ಚು...
ಪ್ರೇಮಿಗಳು ಅರಮನೆಗಿಂತ ಸೆರೆಮನೆ ಹೆಚ್ಚು ಇಷ್ಟಪಡುತ್ತಾರಂತೆ ನಿಜಾನಾ ಭಟ್ರೇ?
ಅರಮನೇಲಿ ತುಂಬ ಜನ, ಸೆರೆಮನೆಯಲ್ಲಿ ಏಕಾಂತ.
ಕಾಳೀಹುಂಡಿ ಶಿವಕುಮಾರ್, ಮೈಸೂರು, 9844883581
ಗಜಗ್ಯಾಂಗ್ ಕಾಡಿನಿಂದ ರಾಜಧಾನಿ ಬೆಂಗಳೂರು ಕಡೆಗೆ ಧಾವಿಸಿ ಬರಲು ಕಾರಣ ಏನಿರಬಹುದು?
ಯಾರೋ ಕಿಡಿಗೇಡಿಗಳು ಕೈಗಾರಿಕಾ ಕಾರಿಡಾರ್ ಬೋರ್ಡ್ ಹಾಕೋ ಬದಲು ಆನೆ ಕಾರಿಡಾರ್ ಅಂತ ಹಾಕಿದ್ರಂತೆ!
ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ಅಡುಗೆ ಮನೆ ಹೆಣ್ಣಿನ ಪಾಲಿಗೆ ಅರಮನೆಯಾದರೆ ಗಂಡಿಗೆ?
ಬೆಡ್‌ರೂಮು!
ವಿ. ಹೇಮಂತಕುಮಾರ ಬೆಂಗಳೂರು, 9035992900
ಮೋದಿ ಮೋಡಿಗೂ ಮೌನಮೋಹನ ಮೋಡಿಗೂ ಇರುವ ವ್ಯತ್ಯಾಸವೇನು?
ಅವರದ್ದು ಮಾತಿನ ಮೋಡಿ, ಇವರದ್ದು ಮಾತೇ ಇಲ್ಲ ನೋಡಿ!
ಚಿರಪ್ರಭ ನಂಜನಗೂಡು, 8553793107
ಪ್ರೀತಿಸಿದ ಹುಡುಗಿ ಸಿಗದಿದ್ದರೆ ಭಗ್ನಪ್ರೇಮಿ. ಪ್ರೀತಿಸಿದ ಹುಡುಗಿಯನ್ನೇ ವರಿಸಿದರೆ?
ನಗ್ನಪ್ರೇಮಿ!
ವಿಷ್ಣುಶಂಕರ್, ಶಿವಮೊಗ್ಗ
-ಬಾಣಭಟ್ಟ