ಸಂಪಾದಕೀಯ

ಲಾಲ್ ಬಹಾದ್ದೂರರ ಪ್ರಾಮಾಣಿಕತೆ

ಲಾಲ್ ಬಹಾದ್ದೂರ್ ಶಾಸ್ತ್ರಿಯವರು ನಮ್ಮ ದೇಶಕಂಡ ಅಪ್ರತಿಮ ಪ್ರಾಮಾಣಿಕ ರಾಜಕಾರಣಿಗಳಲ್ಲೊಬ್ಬರು. ಪ್ರಧಾನಿಯಾಗಿದ್ದರೂ ಸರಳ ಜೀವನ ನಡೆಸಿದ ಶಾಸ್ತ್ರಿಗಳು ಆಡಳಿತ ನಡೆಸುವ ಮಂದಿಗೆ ಆದರ್ಶಪ್ರಾಯರಾಗಿದ್ದಾರೆ. ಚಿಕ್ಕಂದಿನಿಂದಲೂ ಬಡತನದ ಬವಣೆಯಲ್ಲಿ ಬೆಂದರೂ ತಾವು ನಂಬಿಕೊಂಡಂತಹ ಆದರ್ಶವನ್ನು ಬಿಡದೆ, ಸೇವೆ, ನಿಷ್ಟೆ, ಪ್ರಾಮಾಣಿಕತೆ ಮತ್ತು ಸರಳತೆಗೆ ಹೆಸರಾಗಿದ್ದರು.
ಸ್ವಾತಂತ್ರ ಪೂರ್ವದಲ್ಲಿ ಲಾಲ್ ಬಹಾದ್ದೂರರು ಗಾಂಧೀಜಿಯವರ ಅಪ್ಪಟ ಅನುಯಾಯಿಯಾಗಿದ್ದರು. ಸತ್ಯ ಮತ್ತು ಅಹಿಂಸೆ ಅವರ ಜೀವನದ ಉಸಿರಾಗಿತ್ತು. ಗಾಂಧೀಜಿಯವರ ಕರೆಯ ಮೇರೆಗೆ ಅನೇಕ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದರ ಪರಿಣಾಮವಾಗಿ ಅನೇಕ ಬಾರಿ ಅವರು ಜೈಲು ಶಿಕ್ಷೆಯನ್ನೂ ಅನುಭವಿಸಿದರು. ಹೀಗೆ ಜೈಲಿನಲ್ಲಿದ್ದಾಗ ಅವರು ಎರಡು ಬಾರಿ ಪೆರೋಲ್ ಮೇಲೆ ಬಿಡುಗಡೆ ಹೊಂದಿದ್ದರು. ಒಮ್ಮೆ ಅವರ ಮಗ ಖಾಯಿಲೆ ಬಿದ್ದಿದ್ದಾಗ ಒಂದುವಾರ ಅವರನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿತ್ತು. ಆದರೆ ಒಂದುವಾರವಾದರೂ ಮಗನ ಜ್ವರ ಇಳಿಯದೆ ಪರಿತಪಿಸುತ್ತಿದ್ದಾಗ ತಮ್ಮ ಪೆರೋಲ್ ಅವಧಿಯನ್ನು ವಿಸ್ತರಿಸಿಕೊಳ್ಳದೆ, ತಮ್ಮ ಮಗನ ಆರ್ತನಾದಕ್ಕೂ ಕಿವಿಗೊಡದೆ ಜೈಲಿಗೆ ಹಿಂದಿರುಗಿದ್ದರು. ಅದೃಷ್ಟವಶಾತ್ ಅವರ ಮಗ ಪೂರ್ಣ ಗುಣಹೊಂದಿದನೆನ್ನಿ. ಅದೇರೀತಿ ಅವರ ಮಗಳು ಅನಾರೋಗ್ಯದಿಂದ ನರಳುತ್ತಿರುವಾಗೊಮ್ಮೆ ಹದಿನೈದು ದಿನಗಳ ಪೆರೋಲ್ ಮೇಲೆ ಮನೆಗೆ ಬಂದಿದ್ದರು. ಆದರೆ ದುರದೃಷ್ಟ, ಲಾಲ್ ಬಹಾದ್ದೂರರು ಮನೆಗೆ ಬರುವಷ್ಟರಲ್ಲಿ ಅವರ ಮಗಳು ತೀರಿಕೊಂಡಿದ್ದಳು. ಅವಳ ಅಂತ್ಯ ಸಂಸ್ಕಾರವನ್ನು ನೆರವೇರಿಸಿ ದುಃಖದಿಂದ ಅದೇ ದಿನ ಜೈಲುದಾರಿ ಹಿಡಿದರು. ಜೈಲು ಅಧಿಕಾರಿ ಶಾಸ್ತ್ರಿಯವರಿಗೆ ಜೈಲಿಗೆ ಹಿಂತಿರುಗಲು ಇನ್ನೂ ಸಾಕಷ್ಟುದಿನ ಇರುವುದರಿಂದ ಮನೆಗೆ ಹೋಗಿ, ನಂತರ ಬರಲು ವಿನಂತಿಸಿದರು. ಅದಕ್ಕೆ ಒಪ್ಪದ ಶಾಸ್ತ್ರಿಗಳು ತಾವು ಹೋದ ಉದ್ದೇಶ ಸಫಲವಾಗದ್ದರಿಂದ ಹಾಗೂ ತಮ್ಮ ಪ್ರೀತಿಯ ಮಗಳೇ ಸತ್ತು ಹೋದ ಮೇಲೆ ಪೆರೋಲ್ ಕಟ್ಟಿಕೊಂಡು ತಮಗೇನೂ ಆಗಬೇಕಾಗಿಲ್ಲ. ಅದಕ್ಕಾಗಿ ತಮಗೆ ನೀಡಿರುವ ಸವಲತ್ತನ್ನು ದುರುಪಯೋಗ ಮಾಡಿಕೊಳ್ಳಲು ಸಿದ್ಧವಿಲ್ಲ ಎಂದು ಉತ್ತರಿಸಿ, ಜೈಲನ್ನು ಸೇರಿಕೊಂಡರು. ಇದು ಅವರ ಪ್ರಾಮಾಣಿಕ ನಡವಳಿಕೆಗೆ ಮತ್ತು ಕಾನೂನು ಪರಿಪಾಲನೆಗೆ ಒಂದು ನಿದರ್ಶನವಾಗಿದೆ.

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

ಬಿಹಾರದ ಯುವಕನ ಜೊತೆ ಪ್ರೀತಿ, ಮದುವೆಗೆ ಸಿದ್ಧತೆ; ತಾಯಿ ಸಲಹೆ ಬೆನ್ನಲ್ಲೇ ನಿರ್ಧಾರ ಬದಲಿಸಿದ ಬೆಂಗಳೂರು ಟೆಕ್ಕಿ.. ಆಗಿದ್ದೇನು?

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video