ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಶಾಲಾ ಮಕ್ಕಳಿಗೆ ಉಚಿತ ಶೂ

Vishwanath S
Updated On : 5 Jul 2013, 10:31 am

ಈಗಾಗಲೇ ಸರ್ಕಾರಿ ಹಾಗೂ ಸರ್ಕಾರದ ನೆರವು ಪಡೆದ ಪ್ರಾಥಮಿಕ ಶಾಲೆಗಳಲ್ಲಿನ ಮಕ್ಕಳಿಗೆ ಉಚಿತವಾಗಿ ಪಠ್ಯ ಪುಸ್ತಕ, ಸಮವಸ್ತ್ರಗಳನ್ನು ಹಂಚುವುದು ಶಿಕ್ಷಣ ವ್ಯವಸ್ಥೆಯ ಒಂದು ಭಾಗವೇ ಆಗಿದೆ. ಇದರ ಜತೆಯಲ್ಲೇ ಉಚಿತ ಊಟದ ವ್ಯವಸ್ಥೆಯೂ ಇದೆ.
ರಾಜ್ಯದ ಸಚಿವ ಕಿಮ್ಮನೆ ರತ್ನಾಕರ ಅವರ ಪ್ರಕಾರ, ತಮಿಳು ನಾಡಿನಲ್ಲಿ ಮಕ್ಕಳಿಗೆ ಷೂಗಳನ್ನು ಕೊಡುವಂತೆ ರಾಜ್ಯದಲ್ಲೂ ಒಂದು ಯೋಜನೆಯನ್ನು ರೂಪಿಸುವ ಚಿಂತನೆ ಇದೆ. ಆ ಚಿಂತನೆ ಇನ್ನೂ ಕಾರ್ಯರೂಪಕ್ಕೆ ಇಳಿಯುವ ಕ್ರಮಗಳನ್ನು ಸರ್ಕಾರ ಕೈಗೊಂಡಿಲ್ಲ. ಅದೇ ರೀತಿ ಮಕ್ಕಳಿಗೆ ಉಚಿತವಾಗಿ ಹಾಲನ್ನು ಕೊಡುವ ಯೋಜನೆಯೂ ಸರ್ಕಾರದ ಪರಿಶೀಲನೆಯಲ್ಲಿದೆ. ಇನ್ನೂ ನಿರ್ಧಾರವಾಗಿಲ್ಲ.
ಬಡವರ ಮಕ್ಕಳಿಗೆ ಇಂತಹ ಸೌಲಭ್ಯವನ್ನು ಒದಗಿಸುವ ಶಕ್ತಿ ಅವರ ಪಾಲಕ ಪೋಷಕರಿಗೆ ಇಲ್ಲದಿರುವುದರಿಂದ, ಸರ್ಕಾರವೇ ಆ ಜವಾಬ್ದಾರಿಯನ್ನು ಹೊರಬೇಕೆನ್ನುವುದನ್ನು ಅನೇಕ ವಿಷಯಗಳಲ್ಲಿ ತಾತ್ವಿಕವಾಗಿ ಈಗಾಗಲೇ ಒಪ್ಪಿದ್ದಾಗಿದೆ. ಇದು ಸ್ವಾಗತಕ್ಕೆ ಅರ್ಹವಾದದ್ದೇ. ಜನತಾಂತ್ರಿಕ ಕಲ್ಯಾಣ ರಾಜ್ಯದ ವ್ಯವಸ್ಥೆಯಲ್ಲಿ ಯಾವ ಜನವರ್ಗದ ಮಕ್ಕಳೂ ಇಂತಹ ಸೌಲಭ್ಯಗಳಿಂದ ವಂಚಿತವಾಗಬಾರದು.
ಆದರೆ ಶಿಕ್ಷಣ ಇಲಾಖೆಯ ಮೂಲ ಉದ್ದೇಶ ಮಕ್ಕಳಿಗೆ ಉತ್ತಮ ರೀತಿಯ ಶಿಕ್ಷಣವನ್ನು ಕೊಡುವುದು. ಅದಕ್ಕೆ ಒಳ್ಳೆಯ ಅಧ್ಯಾಪಕ ಸಿಬ್ಬಂದಿ ಬೇಕು. ಅವರನ್ನು ಊಟದ ವ್ಯವಸ್ಥೆ, ಪುಸ್ತಕಗಳ ವಿತರಣೆಯಂತಹ ಕೆಲಸಕ್ಕೇ ಹೆಚ್ಚಾಗಿ ಬಳಸಿದರೆ, ಮಕ್ಕಳ ಶಿಕ್ಷಣದ ಗುಣಮಟ್ಟ ಇಳಿಯುತ್ತದೆ. ಹಾಗಾಗದಂತೆ ನೋಡಿಕೊಳ್ಳಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement