ಚೆಂದುಟಿಯ ಜೇನ ಸವಿಯುವ ಮುನ್ನ ಭಯವಾಗುತ್ತೆ ಏಕೆ?
ವಿ. ಹೇಮಂತಕುಮಾರ, ಬೆಂಗಳೂರು, 9035992900
ಚೆಂದುಟಿಯ ಜೇನ ಸವಿಯುವ ಮುನ್ನ ಭಯವಾಗುತ್ತೆ ಏಕೆ?
ಅವಳ ಬಾಯಿ ವಾಸನೆ ಇರಬಹುದಾ ಎಂಬ ಅನುಮಾನದಿಂದ!
ಸಿ. ನಾಗರಾಜ, ಅರದೋಟ್ಲು, ಭದ್ರಾವತಿ
ಭಾರೀ ವರದಕ್ಷಿಣೆ ಪಡೆದ ಸ್ನೇಹಿತ ಈಗ ತನ್ನ ಮಗನಿಗೆ ವರದಕ್ಷಿಣೆಯೇ ಬೇಡ ಎನ್ನುತ್ತಾನಲ್ಲಯ
ಹುಡುಗಿ ಸಿಕ್ಕರೆ ಸಾಕು ಎನ್ನುವ ಸ್ಥಿತಿ ಇರುವುದರಿಂದ!
ಓಂ ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9900739725
ಪ್ರಾಣಿಗಳಲ್ಲಿ 'ನಾಯಿ' ಮಾತ್ರ ಯಾಕೆ ಲೈಟ್ಕಂಬ ಕಂಡಕೂಡಲೇ ಹಿಂಗಾಲೆತ್ತಿ ಸುಸ್ಸು ಮಾಡುತ್ತದೆ?
ಹಿಂದಿನ ಜನ್ಮದಲ್ಲಿ ಶಾಕ್ ಹೊಡೆದು ಸತ್ತ ಕೋಪಕ್ಕೆ!
ಫ್ಯಾಷನ್ ಡಿಸೈನರ್ ಮಧು, 9945737427
ರಾತ್ರಿ ಮಲಗುವಾಗಲೂ ಲಿಪ್ಸ್ಟಿಕ್ ಹಚ್ಚಿಕೊಂಡರೆ, ತುಟಿಗಳ ಅಚ್ಚು ಹಾಸಿಗೆ- ದಿಂಬಿಗೆ ಅಂಟಿಕೊಳ್ಳುವುದಿಲ್ಲವಾ?
ಕನಸಲಿ ಬಂದ ಹುಡುಗನ ಕೆನ್ನೆಗೆ ಅಂಟಿಕೊಳ್ಳುವ ಸಾಧ್ಯತೆಯೂ ಇದೆ.
ರವಿಕುಮಾರ ಜಿ.ಬಿ. 9449669897
ಸಾವಿನ ದಿನ ಮನುಷ್ಯರಿಗೆ ಮೊದಲೇ
ತಿಳಿದಿದ್ದರೆ ಹೇಗಿರುತ್ತಿತ್ತು?
ಚಿಂತೆಯಲ್ಲಿ ಮೊದಲೇ ಸತ್ತುಹೋಗುತ್ತಿದ್ದ.
ಬಾಣಭಟ್ಟ