ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ರುಪಾಯಿ ಮೌಲ್ಯ ಕುಸಿತ

Mainashree
Updated On : 9 Jul 2013, 10:31 am

ಡಾಲರ್ ವಿರುದ್ಧ ರುಪಾಯಿಯ ಮೌಲ್ಯ ಕುಸಿಯುತ್ತಲೇ ಇದೆ. ಇದಕ್ಕೆ ಜಾಗತಿಕ ಆರ್ಥಿಕ ವ್ಯವಸ್ಥೆಯ ಏರುಪೇರೇ ಕಾರಣವಿದ್ದರೂ, ಅದರ ಕೆಟ್ಟ ಫಲವನ್ನು ಅನುಭವಿಸುವವರೂ ಜನರೇ.
ಉದಾರ - ಆರ್ಥಿಕ ವ್ಯವಸ್ಥೆಯ ಅಂಗವಾಗಿ ಸರ್ಕಾರ ಪೆಟ್ರೋಲ್ - ಡೀಸೆಲ್ ಬೆಲೆಯನ್ನು ಜಾಗತಿಕ ಬೆಲೆಯ ಮಟ್ಟ ಮುಟ್ಟುವುದಕ್ಕೆ ಬಿಡಲು ಒಪ್ಪಿರುವುದರಿಂದ ಡೀಸೆಲ್ ಬೆಲೆ ಲೀಟರ್‌ಗೆ ತಿಂಗಳಿಗೆ ಒಂದು ರುಪಾಯಿನಂತೆ ಹೆಚ್ಚುವ ಸಂಭವವಿದೆ.
ಡೀಸೆಲ್ ಬೆಲೆ ತುಟ್ಟಿಯಾದರೆ, ನಮ್ಮ ವ್ಯವಸ್ಥೆಯಲ್ಲಿ ಆಹಾರ ಧಾನ್ಯಗಳೂ ಸೇರಿದಂತೆ ಎಲ್ಲ ವಸ್ತುಗಳ ಸಾಗಣೆಯ ದರವೂ ಹೆಚ್ಚುವುದರಿಂದ ಎಲ್ಲ ವಸ್ತುಗಳಬೆಲೆಗಳೂ ಹೆಚ್ಚಲಿವೆ. ಈಗಾಗಲೇ ಪೇಟೆಯಲ್ಲಿ ಅಂತಹ ಪ್ರವೃತ್ತಿ ಸ್ಪಷ್ಟವಾಗಿ ಗೋಚರವಾಗಿದೆ.
ವಿದೇಶಗಳಿಂದ ತರಿಸಿಕೊಳ್ಳುವ (ಅದೇನೂ ಸಣ್ಣ ಪ್ರಮಾಣದ್ದಲ್ಲ) ಎಲ್ಲ ವಸ್ತುಗಳಿಗೂ ರುಪಾಯಿಯ ಲೆಕ್ಕದಲ್ಲಿ ಅಧಿಕ ಹಣವನ್ನು ತೆರಲೇಬೇಕು. ಅದು ಕೇವಲ ಶ್ರೀಮಂತರನ್ನಷ್ಟೇ ಬಾಧಿಸುವುದಿಲ್ಲ, ಇತರರೂ ಅದಕ್ಕೆ ಬಲಿಯಾಗುತ್ತಾರೆ.
ಸದ್ಯಕ್ಕೆ ಕೇಂದ್ರಕ್ಕೆ ಆರ್ಥಿಕ ಪರಿಸ್ಥಿತಿಯನ್ನು ನಿಯಂತ್ರಿಸುವುದಕ್ಕೆ ಯಾವ ಮಾರ್ಗವೂ ಕಂಡುಬರುತ್ತಿಲ್ಲ. ಅಷ್ಟೇ ಅಲ್ಲ. ವಸ್ತುಗಳ ಬೆಲೆ ಏರಿದಂತೆ, ದಾಮಾಷಾ ದರದಲ್ಲಿ ಅದರ ಮೇಲಿನ ಅಬ್ಕಾರಿ ಸುಂಕ, ಮೌಲ್ಯ ವರ್ಧಿತ ತೆರಿಗೆಗಳೂ ಹೆಚ್ಚುವುದರಿಂದ ಸರ್ಕಾರಕ್ಕೆ ಲಾಭವಾದರೆ ಜನರ ಕಾಸಿನ ಸಂಕಷ್ಟ ಹೆಚ್ಚಲಿದೆ. ಇದನ್ನು ಅನುಭವಿಸಲೇ ಬೇಕು. ಬೇರೆ ದಾರಿ ಇಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement