ಪ್ರತಿ ಚುಂಬನಕ್ಕೆ ಅವಳು ಚಿಕ್ಕದೊಂದು 'ಬ್ರೇಕ್' ಬೇಕು ಅಂತಾಳಲ್ಲ?
ಫ್ಯಾಷನ್ ಡಿಸೈನರ್ ಮಧು, 9945737427
ಪ್ರತಿ ಚುಂಬನಕ್ಕೆ ಅವಳು ಚಿಕ್ಕದೊಂದು 'ಬ್ರೇಕ್' ಬೇಕು ಅಂತಾಳಲ್ಲ?
ಅವಳಪ್ಪ ಬ್ರೇಕ್ ಇನ್‌ಸ್ಪೆಕ್ಟರ್ ಅನ್ಸುತ್ತೆ!
ಎಂ.ಬಿ. ಕೃಷ್ಣಮೂರ್ತಿ, 9449130531
ನೀತಿಪಾಠಕ್ಕೆ ಇರುವಂತೆ ಪ್ರೀತಿ ಪಾಠವನ್ನೂ ಹೇಳಿಕೊಡಲು ಮೇಷ್ಟ್ರು ಇದ್ದಿದ್ದರೆ?
ಪ್ರಾಕ್ಟಿಕಲ್ಸೇ ಜಾಸ್ತಿ ಇರ್ತಿತ್ತು!
ಸಂತೆಬೆನ್ನೂರು ಫೈಜ್ನಟ್ರಾಜ್
ನಿಜಕ್ಕೂ ಮುತ್ತಲ್ಲಿ ಮತ್ತಿರುತ್ತಾ?
ಮುತ್ತಲ್ಲಿ ಮತ್ತಿದ್ರೆ ಓಕೆ. ಮತ್ತಲ್ಲಿ ಮುತ್ತಿಡೋಕೆ ಹೋದ್ರೆ ಮಾತ್ರ ಜೋಕೆ!
ಗೊರೂರು ನಾಗ, 9480783803
ಮನದಂಗಳದಲ್ಲಿ ಚುಕ್ಕಿಯಿಟ್ಟು ಚಿತ್ರಬಿಡಿಸದೇ ಹಾಗೇ ಹೋದಳಲ್ಲಾ?
ಯಾರಿಟ್ಟರೀ ಚುಕ್ಕೀ ಅಂತ ನೀನು ಹಾಡ್ಲಿ ಅಂತ ಆಸೆ ಇರ್ಬೇಕು!
ಹರಳಹಳ್ಳಿ ಪುಟ್ಟರಾಜು 9632838088
ಅವಳ ನಗುವಿಗೆ ಏನೆಂದು ಹೆಸರಿಡಲಿ. ಪ್ರೇಮ? ಕಾಮ?
ನಗುವಿಗೆ ಹೆಸರಿಡಲು ಹೋಗಿ ಮಗುವಿಗೆ ಹೆಸರಿಡುವಂತಾದೀತು. ಹುಶಾರು ಮೇಷ್ಟ್ರೇ!
ಬಾಣಭಟ್ಟ